ಬೆಂಗಳೂರು, (ಸೆ.19): ರಾಜ್ಯದಲ್ಲಿ ಇಂದು (ಶನಿವಾರ) 8,364 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 114 ಸೋಂಕಿತರು  ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು 10815 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ

ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದ್ದು, 4,04,841 ಮಂದಿ ಈವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಚೇತರಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೊರೋನಾ ಹೋರಾಟ: ಮೊಝಂಬಿಕ್‌ಗೆ ಭಾರತದಿಂದ 13 ಬಗೆಯ ಔಷಧ ನೆರವು

ಒಟ್ಟು 7922 ಮಂದಿ ಮೃತಪಟ್ಟಿದ್ದು, 98,564 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 822 ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೋನಾ ಸಂಖ್ಯೆ