10:50 AM (IST) Jul 22

ಕಾಯಿತರ ಮೇಲೆ ಬೆಂಗಳೂರು ಪೊಲೀಸರಿಂದ ಗುಂಡಿನ ದಾಳಿ

ಗಂಗಾವತಿ: ತಾಲೂಕಿನ ಮೂಷ್ಟೂರು ಗ್ರಾಮದ ಬಳಿ ಘಟನೆ. ಡಕಾಯಿತರ ಮೇಲೆ ಬೆಂಗಳೂರು ಪೊಲೀಸರಿಂದ ಗುಂಡಿನ ದಾಳಿ . ಬೆಂಗಳೂರು ಕೊಡಗಲಿ ಹತ್ತಿರ ಜುಲೈ 16 ರಂದು ಹಂದಿ ಫಾರ್ಮ್ ನಲ್ಲಿ 90 ಹಂದಿ ಕದಿಯಲು ಯತ್ನ . ಆಕ್ಷೇಪ ಮಾಡಿದ ಫಾರಂ ಮಾಲಿಕ ರಾಮಕೃಷ್ಣ ನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಡಕಾಯಿತರು. ಈ ಪ್ರಕರಣ ಚಿಕ್ಕ ಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಶುಕ್ರವಾರ ತಾಲೂಕಿನ ಮೂಷ್ಟೂರು ಬಳಿ ಪತ್ತೆ ಹಚ್ಚಿದ ಪೊಲೀಸರು ಬೆಲೂರು ವಾಹನದಲ್ಲಿ ತೆರಳುತ್ತಿದ್ದ ಡಕಾಯಿತರು. HC ಬಸವರಾಜ ನಾಯಕ ಮೇಲೆ ಹಲ್ಲೆ ನಡೆಸಿದ ಡಕಾಯಿತರು. ತರ ಅವರನ್ನು ಬಂಧಿಸುವದಕ್ಕಾಗಿ PI ಪ್ರವೀಣ ಅವರಿಂದ ಫೈರೀಂಗ್. ಇದರಲ್ಲಿ ಅರೋಪಿ ಅಶೋಕ ಬೆಳ್ಳಟ್ಟಿ ಮತ್ತು ಶಂಕರ್ ಸಿಂಧನೂರು ಗಾಯ. ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರೋಪಿಗಳು .ಇನ್ನು ಮೂವರನ್ನು ಪೊಲೀಸರು ಬಂಧಿಸಿದ್ದಾರೆ

06:38 PM (IST) Jul 06

ಮಾಜಿ ಸಚಿವೆ ಮೋಟಮ್ಮ ಸಹೋದರನ ಕಾರಿನ ಮೇಲೆ ಬಿದ್ದ ಮರ: ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆಯ ಆರ್ಭಟ

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರದ ಕೊಂಬೆಗಳು

 ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆಯಲ್ಲಿ ಘಟನೆ

ಪವಾಡಸದೃಶ ರೀತಿಯಲ್ಲಿ ಕಾರಿನಲ್ಲಿದ್ದವರೆಲ್ಲರೂ ಪಾರು

ಮಾಜಿ ಸಚಿವೆ ಮೋಟಮ್ಮ ಸಹೋದರ ಅನಂತು ಕಾರಿನ ಮೇಲೆ ಬಿದ್ದ ಕೊಂಬೆಗಳು

ಎಂ.ಎಸ್ ಅನಂತು ಪತ್ನಿ ಸೇರಿದಂತೆ ಕಾರಿನಲ್ಲಿದ್ದ ಐವರು ಬಚಾವ್

ಕಾರಿನ ಮೇಲೆ ಮರದ ಕೊಂಬೆಗಳು ಬೀಳುವ ಮೈ ಜುಮ್ ಎನಿಸುವ ಸಿಸಿಟಿವಿ ದೃಶ್ಯ ಲಭ್ಯ

ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

05:04 PM (IST) Jul 06

ಕಾರವಾರ ರೆಡ್‌ ಅಲರ್ಟ್‌, ಚಿತ್ರದುರ್ಗ ರಸ್ತೆಗಳು ಜಲಾವೃತ

ಚಿತ್ರದುರ್ಗ ನಗರದಲ್ಲಿ ಕೆಲ ಹೊತ್ತು ಧಾರಾಕಾರ ಮಳೆ ಹಿನ್ನೆಲೆ ತುರುವನೂರು ರಸ್ತೆಯ ಸೇತುವೆ ಬಳಿ ರಸ್ತೆ ಜಲಾವೃತವಾಗಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಸೇತುವೆ ಜಲಾವೃತವಾಗಿದೆ. ಹಳೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ಸೇತುವೆ ಬಳಿ ರಸ್ತೆ ಜಲಾವೃತವಾಗಿದೆ. ನೀರಿನಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ. ನಗರಸಭೆ, ರಾ.ಹೆ ಪ್ರಾಧಿಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ದುರಸ್ಥಿ ಕಾರ್ಯ ಮುಕ್ತಾಯವಾಗಿತ್ತು. ಒಂದೇ ಮಳೆಗೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. 

ಕಾರವಾರ, ಉತ್ತರಕನ್ನಡ: ಕರಾವಳಿಯಲ್ಲಿ ನಾಳೆ ಬೆಳಗಿನವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ 6ರ ಮಧ್ಯಾಹ್ನ 1 ಗಂಟೆಯಿಂದ 7ರ ಬೆಳಿಗ್ಗೆ 8:30ರ ವರೆಗೆ ಭಾರೀ ಮಳೆ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಸಿಕ್ಕಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮಳೆ ಮುನ್ಸೂಚನೆ ಹಿನ್ನೆಲೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಮುನ್ಸೂಚನೆ ನೀಡಿರುವ ಜಿಲ್ಲಾಡಳಿತ ಕಡಲತೀರ, ನದಿಪಾತ್ರದ ನಿವಾಸಿಗಳಿಗೆ ಸುರಕ್ಷತೆ ಕಾಯ್ದುಕೊಳ್ಳುವಂತೆ ತಿಳಿಸಿದೆ. 

03:23 PM (IST) Jul 06

ರಾಜ್ಯಾದ್ಯಂತ ಮಳೆ ಹೆಚ್ಚಳ, ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

ರಾಜ್ಯ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ:

ಭದ್ರಾ ಜಲಾಶಯ

ದಿನಾಂಕ: 06/07/2022

ಇಂದಿನ ಮಟ್ಟ: 160'11" ಅಡಿ

ಗರಿಷ್ಠ ಮಟ್ಟ : 186 ಅಡಿ

ಒಳಹರಿವು: 26004 cusecs

ಹೊರಹರಿವು: 136 cusecs

ನೀರು ಸಂಗ್ರಹ: 43.771 Tmc

ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 155'34" ಅಡಿ
ತುಂಗಾ ಜಲಾಶಯ

ದಿನಾಂಕ: 06/07/2022

ಇಂದಿನ ಮಟ್ಟ: 588.24 ಅಡಿ

ಗರಿಷ್ಠ ಮಟ್ಟ : 588.24 ಅಡಿ

ಒಳಹರಿವು: 42358 cusecs

ಹೊರಹರಿವು: 42358 cusecs

ನೀರು ಸಂಗ್ರಹ: 2.411 Tmc

ಸಾಮರ್ಥ್ಯ: 3.24 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 280.80 ಮಿಮಿ ಮಳೆ

ಸರಾಸರಿ 40.11 ಮಿಮಿ ಮಳೆ ದಾಖಲು

ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ 

ಇದುವರೆಗೆ ಸರಾಸರಿ 168.77 ಮಿಮಿ ಮಳೆ ದಾಖಲು

ಶಿವಮೊಗ್ಗ 17.60 ಮಿಮಿ., 

ಭದ್ರಾವತಿ 9.90 ಮಿಮಿ.,

 ತೀರ್ಥಹಳ್ಳಿ 61.30 ಮಿಮಿ., 

ಸಾಗರ 72.30 ಮಿಮಿ., 

ಶಿಕಾರಿಪುರ 21.00 ಮಿಮಿ., 

ಸೊರಬ 45.00 ಮಿಮಿ. 

ಹೊಸನಗರ 53.70 ಮಿಮಿ. ಮಳೆ

03:20 PM (IST) Jul 06

ಕರಾವಳಿ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಕರಾವಳಿ ಜಿಲ್ಲೆಗಳಲ್ಲಿ ಮಳೆ ರೌದ್ರಾವತಾರ ತೋರಿಸುತ್ತಿದ್ದು, ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಮೂರು ಜಿಲ್ಲೆಗಳಲ್ಲೂ ಸರ್ಕಾರ ರೆಡ್‌ ಅಲರ್ಟ್‌ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿನ ನದಿತಟದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಶೀಘ್ರ ಆರಂಭವಾಗಲಿದೆ. ನದಿ ತಟಗಳಲ್ಲಿ ಪ್ರವಾಗ ಭೀತಿ ಉಂಟಾಗಿದೆ. ನದಿಗಳ ಒಳಹರಿವು ವಿಪರೀತವಾಗಿದೆ. 

12:52 PM (IST) Jul 06

ಜಿಲ್ಲಾವಾರು ಮಳೆಯ ಈ ಕ್ಷಣದ ಮಾಹಿತಿ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

ಕೆರೆ ತುಂಬಿ ಕೋಡಿ ಬಿದ್ದ ಹಿರೇಕೊಳಲೆ ಕೆರೆ

ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಕೆರೆ

ಕೆರೆಗೆ ಬಾಗಿನ ಬಿಟ್ಟ ಸಿ.ಟಿ.ರವಿ ದಂಪತಿ

ಪತ್ನಿ ಪಲ್ಲವಿ ಜೊತೆ ಹೋಗಿ ಬಾಗಿನ ಅರ್ಪಿಸಿದ ಸಿ.ಟಿ ರವಿ

ಚಿಕ್ಕಮಗಳೂರು ನಗರದ ಕುಡಿಯುವ ನೀರಿನ ಮೂಲದ ಕೆರೆ

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ
ಕಲಬುರಗಿಯಲ್ಲಿ ಅಬ್ಬರಿಸಿದ ವರುಣ

ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು

ತುಂಬಿ ಹರಿಯುತ್ತಿರುವ ಕಲಬುರಗಿ ತಾಲ್ಲೂಕಿನ ಮುತ್ಯಾನ್ ಬಬಲಾದ್ ಗ್ರಾಮದ ಹಳ್ಳ

ಬಬಲಾದ್- ಹೊಡಲ್, ಶ್ರೀಚಂದ, ಸಂಪರ್ಕ ಕಡಿತ

ರಸ್ತೆ ಸಂಪರ್ಕ ಕಡಿತದಿಂದ ಸಾರಿಗೆ ಬಸ್ ಸಂಚಾರ ಸ್ಥಗಿತ

ಹೊಡಲ್ ನಿಂದ ಬಬಲಾದ್ ಗೆ ಬರಬೇಕಿದ್ದ ಬಸ್ ಸಂಚಾರ ಸ್ಥಗಿತ

ವರುಣಾರ್ಭಟಕ್ಕೆ ಸಂತಸಗೊಂಡ ರೈತಾಪಿ ವರ್ಗ

ಮಳೆ ಬಾರದೆ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದ ಅನ್ನದಾತರು

ಬಿತ್ತನೆ ಮಾಡದೆ ಮಳೆಗಾಗಿ ಕಾದು ಕುಳಿತಿದ್ದ ರೈತರು

ಮಳೆ ಹಿನ್ನೆಲೆ ಕಲಬುರಗಿಯಲ್ಲಿ ಬಿತ್ತನೆ ಚಟುವಟಿಕೆ ಮತ್ತಷ್ಟು ಚುರುಕು

ಉಡುಪಿ: ಮಳೆ ನಿಂತರೂ ನದಿಪಾತ್ರದ ಪ್ರದೇಶಗಳಲ್ಲಿ ನಿಲ್ಲದ ನೆರೆ

ಕೋಟ‌ ಸಮೀಪದ ಉಪ್ಲಾಡಿಯಲ್ಲಿ ನೆರೆಯಿಂದ ದಿಗ್ಬಂಧನ

ಉಪ್ಲಾಡಿ, ಬೆಟ್ಲಕ್ಕಿ, ಬನ್ನಾಡಿ ಪರಿಸರದಲ್ಲಿ ನಿನ್ಬೆ ಕೆಲ ಮನೆಗಳಿಗೆ ನುಗ್ಗಿದ ನೆರೆ

ನಿನ್ನೆ ತಡರಾತ್ರಿಯಿಂದ ಭಯದಿಂದಲೇ ಸಮಯ ಕಳೆದ ಸ್ಥಳೀಯರು

ಬೆಳ್ಳಂಬೆಳಿಗ್ಗೆ ಜನರ ರಕ್ಷಣೆಗೆ ಧಾವಿಸಿದ ಆಗ್ನಿಶಾಮಕ ದಳದ ಸಿಬ್ಬಂದಿಗಳು

ಕುಂದಾಪುರ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ

ನೆರೆ ನೀರು ಸುತ್ತುವರಿದ ಮನೆಗಳಿಂದ ಸ್ಥಳೀಯರ ರಕ್ಷಣಾ ಕಾರ್ಯ

ಕೊಡಗು: ಕೊಡಗಿನಲ್ಲಿ ವಿವಿಧೆಡೆ ಮಳೆಗೆ ಅವಘಡ ಹಿನ್ನೆಲೆ

ಸ್ಥಳಕ್ಕೆ ಶಾಸಕ ಅಪ್ಪಚ್ಚುರಂಜನ್ ಭೇಟಿ

ಮಡಿಕೇರಿ ತಾಲ್ಲೂಕಿನ ಮದೆನಾಡು ಬಳಿ ಹೆದ್ದಾರಿ ಉಬ್ಬುತ್ತಿರುವ ಹಿನ್ನೆಲೆ

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್

ಜಿಲ್ಲಾಧಿಕಾರಿ ಕಚೇರಿಗೆ ನಿರ್ಮಿಸಿರುವ ತಡೆಗೋಡೆಯಲ್ಲಿ ಬಿರುಕು ಹಿನ್ನೆಲೆ

ತಡೆಗೋಡೆ ಪರಿಶೀಲಿಸಿದ ಅಪ್ಪಚ್ಚು ರಂಜನ್

ಮದೆನಾಡು ಸಮೀಪದ ಕರ್ತೋಜಿಯಲ್ಲಿ ಉಬ್ಬುತ್ತಿರುವ ಹೆದ್ದಾರಿ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕರ್ತೋಜಿ

12:08 PM (IST) Jul 06

ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ

ಮಡಿಕೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ ಎಂದು ಕೊಡಗು ಕನೆಕ್ಟ್‌ ಮಾಹಿತಿ ನೀಡಿದೆ. ಈ ಘಾಟಿಯಲ್ಲಿ ಹೆಚ್ಚು ವಾಹನ ಸಂಚಾರ ಅಸಾಧ್ಯವಾಗಿದ್ದು, ಅದರಲ್ಲೂ ಬೃಹತ್‌ ವಾಹನಗಳ ಸಂಚಾರ ಸಾಧ್ಯವೇ ಇಲ್ಲ ಎನ್ನಲಾಗಿದೆ. ನೀವೇನಾದರೂ ಈ ಮಾರ್ಗದಲ್ಲಿ ಸಂಚಾರ ಮಾಡುವ ಪ್ಲಾನ್‌ ಮಾಡಿದ್ದರೆ ದಯವಿಟ್ಟು ಬದಲಿ ರಸ್ತೆ ಮಾರ್ಗ ಅನುಸರಿಸಿ. 

Scroll to load tweet…
11:18 AM (IST) Jul 06

ಮೈದುಂಬಿದ ಕೃಷ್ಣಾ ನದಿ: ನದಿತಟದಲ್ಲಿ ಪ್ರವಾಹದ ಆತಂಕ

ಮಹಾರಾಷ್ಟ್ರದ ಕೊಂಕಣ ಘಟ್ಟ ಪ್ರದೇಶ ದಲ್ಲಿ ಭಾರಿ ಮಳೆ ಹಿನ್ನೆಲೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮ ಬಳಿ ಕೃಷ್ಣಾ ನದಿ ಒಳಹರಿವು ಹೆಚ್ಚಿದೆ, ಕಳೆದ 48 ಗಂಟೆಯಲ್ಲಿ 6 ಅಡಿ ನೀರು ಏರಿಕೆಯಾಗಿದ್ದು, ಮಹಾರಾಷ್ಟ್ರ ಮಹಾ ಮಳೆಗೆ ಕೃಷ್ಣಾ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಹವಾಮಾನ ವರದಿಯ ಪ್ರಕಾರ, ಈ ಭಾಗದಲ್ಲಿ ಮಳೆಯ ತೀವ್ರತೆ ಇನ್ನೂ ಎರಡು ದಿನ ಇರುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ, ನದಿತಟದಲ್ಲಿ ವಾಸವಿರುವ ಜನರು ಪ್ರವಾಹ ಭೀತಿಯಲ್ಲಿದ್ದಾರೆ. 

10:59 AM (IST) Jul 06

ಮಳೆಯ ಆರ್ಭಟಕ್ಕೆ ಹಾಸನದಲ್ಲಿ ಹಲವು ಮನೆಗಳು ಕುಸಿತ

ಹಾಸನ ಜಿಲ್ಲೆಯ ಹಲವೆಡೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಲವು ಮನೆಗಳು ಕುಸಿದಿವೆ. ಭಾರಿ‌ ಮಳೆಗೆ ವಾಸದ ಮನೆಯ ಅರ್ಧ ಭಾಗದ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ವೃದ್ದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಕಲಗೂಡು ತಾಲ್ಲೂಕಿನ ಸಂತೆಮರೂರು ಗ್ರಾ.ಪಂ. ವ್ಯಾಪ್ತಿಯ ದುಮ್ಮಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಳಮ್ಮ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಆಗಷ್ಟೇ ಮನೆಯಿಂದ ಹೊರ ಬಂದು ದನಕರುಗಳನ್ನು ಹೊರಗೆ ಕಟ್ಟುತ್ತಿದ್ದರು. ಈ ವೇಳೆ ಮನೆಯ ಗೋಡೆ ಕುಸಿದು ಬಿದ್ದಿದೆ. ಸೂಕ್ತ ಪರಿಹಾರ ನೀಡುವಂತೆ ಕಾಳಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

10:05 AM (IST) Jul 06

Bengaluru: ಸಿಲಿಕಾನ್ ಸಿಟಿಯಲ್ಲಿಯೂ ಮಳೆಯ ಸಿಂಚನ, ಜನರಿಗೆ ಕಿರಿಕಿರಿ

ಬೆಂಗಳೂರಲ್ಲಿಯೂ ಬುಧವಾರ ಬೆಳಗ್ಗೆಯಿಂದ ತುಂತುರು ಮಳೆಯಾಗುತ್ತಿದ್ದು ದ್ವಿ ಚಕ್ರ ವಾಹನ ಸವಾರರು ಹಾಗೂ ಕಚೇರಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಸಂಜೆ ವೇಳೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಜನರು ಮನೆಯಿಂದ ಹೊರ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗಲು ಮರೆಯಬಾರದು. 

09:52 AM (IST) Jul 06

Shivamogga: ವರುಣನ ಆರ್ಭಟದ ಮಧ್ಯೆ ಬಿರುಕು ಬಿಟ್ಟ ರಸ್ತೆ

ವರುಣನ ಆರ್ಭಟದ ಮದ್ಯೆ ರಸ್ತೆಗಳು ಬಿರುಕು ಬಿಟ್ಟಿವೆ. ಬಿರುಕು ಬಿಡುವ ಮೊದಲು ಕೇಳಿ ಬಂದ ಶಬ್ದದಿಂದ ಜನರು ಆತಂಕಗೊಂಡಿದ್ದರು. ಸಾಗರ ಪಟ್ಟಣದ ನೆಹರು ನಗರದಲ್ಲಿ ನಡೆದ ಘಟನೆ. ಕಳೆದ ಮೂರು ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ. ಸಾಗರ ನಗರಸಭೆಯ 24ನೇ ವಾರ್ಡಿನ ಜನರಲ್ಲಿ ಆತಂಕ ಹುಟ್ಟಸಿದೆ. ನೆಹರು ನಗರದ ಮೊದಲನೇ ಕ್ರಾಸ್ ರಸ್ತೆಯಲ್ಲಿ ಜೋರಾದ ಶಬ್ದ ಕೇಳಿ ಬಂದಿದೆ. ನಂತರ ರಸ್ತೆಯ ಮದ್ಯೆ ಜೋರಾಗಿ ಉಕ್ಕಿ ಹರಿದ ನೀರು. ಭೂಮಿಯಿಂದ ಬಂದು ಮನೆಗಳಿಗೆಲ್ಲ ನೀರು ನುಗ್ಗಿದೆ. ಸ್ವಲ್ಪ ಸಮಯ ರಸ್ತೆ ಮೇಲೆ ನೀರು ಹರಿದು ಬೇರೆ ಕಡೆ ಹೋಗಿದೆ. ನೆಹರು ನಗರ ನಿವಾಸಿಗಳಲ್ಲಿ ಆಶ್ಚರ್ಯ ಮೂಡಿಸಿದ ಈ ಘಟನೆ. ನೀರು ಹೇಗೆ ಬಂತು, ಎಲ್ಲಿಂದ ಬಂತು ಇದರಿಂದ ನಮ್ಮ ಮನೆಗಳಿಗೆ ಹಾನಿ ಏನಾದ್ರೂ ಅಗುತ್ತದೆಯೇ ಎಂದು ಸ್ಥಳೀಯರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಆಗ್ರಹಿಸಿದ್ದಾರೆ. 

09:47 AM (IST) Jul 06

Hassan: ಜಿಲ್ಲೆಯಲ್ಲಿಯೂ ಮುಂದುವರಿದ ಮಳೆ

ಎಡಬಿಡದೆ ಸುರಿಯುತ್ತಿರುವ ವರ್ಷಧಾರೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡನಲ್ಲಿ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತ. ಆದರೂ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಹಾಸನ ಜಿಲ್ಲೆಯ ಮಲೆನಾಡು ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಹೆಚ್ಚಳವಾಗಿದೆ. 
ಹೇಮಾವತಿ ನದಿಗೆ 11969 ಕ್ಯೂಸೆಕ್ ಒಳಹರಿವು
ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ
ಇಂದು ಜಲಾಶಯದಲ್ಲಿನ ನೀರಿನ ಮಟ್ಟ 2911.85 ಅಡಿ
ಜಲಾಶಯದ ನೀರಿನ ‌ಸಂಗ್ರಹ ಪ್ರಮಾಣ 37.103 ಟಿಎಂಸಿ
ಇಂದು ಜಲಾಶಯದಲ್ಲಿರುವ ನೀರಿನ ಪ್ರಮಾಣ 28.099 ಟಿಎಂಸಿ

09:44 AM (IST) Jul 06

ಕರ್ನಾಟಕ ಕರಾವಳಿಯಲ್ಲಿ ಮುಂದಿನ 5 ದಿನ ಭಾರಿ ಮಳೆ!

ಮಧ್ಯಭಾರತದಲ್ಲಿ ಉಂಟಾದ ಕಡಿಮೆ ಒತ್ತಡ ಪ್ರದೇಶದ ನೆರವಿನಿಂದ ನೈಋುತ್ಯ ಮುಂಗಾರು ವೇಗ ಪಡೆದುಕೊಂಡಿದೆ. ಖಾರಿಫ್‌ ಬೆಳೆ ಬಿತ್ತನೆಗೆ ಸಾಕಾಗುವಷ್ಟುಮಳೆ ಸುರಿಯುತ್ತಿದೆ. ಮುಂಗಾರು ಆರಂಭ ಕಾಲದಿಂದ ಉಂಟಾಗಿದ್ದ ಮಳೆ ಕೊರತೆಯ ಪ್ರಮಾಣವನ್ನು ಶೇ.2ರಷ್ಟುಕಡಿಮೆ ಮಾಡಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ. ಮುಂದಿನ 5 ದಿನಗಳವರೆಗೆ ಮಧ್ಯ ಭಾರತ ಮತ್ತು ಭಾರತದ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಸಕ್ರಿಯವಾಗಿರಲಿದೆ. ಭಾರತದ ವಾಯುವ್ಯ ಭಾಗ ಬುಧವಾರದಿಂದ ತನ್ನ ಋುತುಮಾನದ ಮಳೆಯನ್ನು ಪಡೆದುಕೊಳ್ಳಲಿದೆ. ಮಧ್ಯಪ್ರದೇಶದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶದಿಂದಾಗಿ ಕರ್ನಾಟಕದ ಕರಾವಳಿ, ತೆಲಂಗಾಣ, ಕೇರಳ ಮತ್ತು ಒಡಿಶಾಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ.

Read More

09:42 AM (IST) Jul 06

Yadgiri: ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ

ಯಾದಗಿರಿ:

ಯಾದಗಿರಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆ..! ಭಾರಿ ಮಳೆ ಅಪಾರ ಪ್ರಮಾಣದ ಬೆಳೆ ಹಾನಿ. ಯಾದಗಿರಿ ತಾಲೂಕಿನ ಎಸ್.ಹೊಸಳ್ಳಿ ತಾಂಡಾ, ಎಸ್.ಹೊಸಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆ ಹಾನಿ/eifoz. ಮಳೆ ನೀರಿನಲ್ಲಿ ಬೆಳೆ ಕೊಚ್ಚಿ ಹೋಗಿದ್ದು, ಹತ್ತಿ, ಹೆಸರು ಬೆಳೆ ನೀರು ಪಾಲಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟದಿಂದ ಕಂಗೆಟ್ಟಿದ್ದಾರೆ ರೈತರು. ಇನ್ನೂ ಮಳೆ ಎರಡು ದಿನ ಮುಂದುವರಿಯುವ ಮುನ್ಸೂಚನೆ ನೀಡಿದ್ದು, ಸ್ವಲ್ಪನಾದರೂ ಅಬ್ಬರ ತಗ್ಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಜನರು. 

09:30 AM (IST) Jul 06

Bidar: ಬೀದರ್‌ನಲ್ಲಿ ರಾತ್ರಿಯಿಂದ ಸುರಿಯುತ್ತಿದೆ ಮಳೆ

ಗಡಿ ಜಿಲ್ಲೆ ಬೀದರ್‌ನಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ. ನಿನ್ಮೆ ಸಂಜೆಯಿಂದ ಸುರಿಯುತ್ತಿದೆ ಮಳೆ. ಬೀದರ್, ಔರಾದ್, ಭಾಲ್ಕಿ ಸೇರಿದಂತೆ ಹಲವೆಡೆ ಮಳೆರಾಯನ ಆರ್ಭಟ ಹೆಚ್ಚಾಗಿದೆ. ಹಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೀದರ್‌ನ ಕಮಠಾಣಾ, ಬಗದಲ್ ಗ್ರಾಮದ ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ಉಕ್ಕಿ ಹರಿಯುತ್ತಿರುವ ನದಿ, ಹಳ್ಳ- ಕೊಳ್ಳಗಳು, ರೈತರ ಜಮೀನುಗಳಿಗೆ ನುಗ್ಗಿದ ನೀರು, ನಷ್ಟ ಸಂಭವಿಸಿದೆ.