ಬಜರಂಗದಳ, VHPಯಿಂದ ನಾಳೆಯಿಂದ ಕೇರಳ ಸ್ಟೋರಿ ಚಿತ್ರ ಪ್ರದರ್ಶನ, ರಾಜ್ಯದಲ್ಲಿ ಹೈ ಅಲರ್ಟ್!

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ರಾಜ್ಯದ ಹಲೆವೆಡೆ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನ ಮಾಡಲು ಸಜ್ಜಾಗಿದೆ. ಇದನ್ನು ವಿರೋಧಿ ಮುಸ್ಲಿಮ್ ಸಮುದಾಯ ಪ್ರತಿಭಟನೆ ನಡಸುವ ಸಾಧ್ಯತೆ ದಟ್ಟವಾಗಿರುವ ಕಾರಣ ಇದೀಗ ರಾಜ್ಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ.

Karnataka Police issues high alert after VHP Bajarangdal offers screening of The Kerala story ckm

ಬೆಂಗಳೂರು(ಮೇ.22): ಐಸಿಸ್ ಭಯೋತ್ಪಾದನೆ, ಲವ್ ಜಿಹಾದ್ ಷಡ್ಯಂತ್ರ ಸೇರಿದಂತೆ ದೇಶದ ಭದ್ರತೆಗೆ ಸವಾಲೊಡ್ಡುವ ಕಥಾಹಂದರ ಹೊಂದಿರುವ ದಿ ಕೇರಳ ಸ್ಟೋರಿ ಚಿತ್ರ ಭಾರಿ ಸಂಚಲನ ಸೃಷ್ಟಿಸಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯ ಸರ್ಕಾರಗಳು ಈ ಚಿತ್ರವನ್ನು ವಿರೋಧಿಸಿದ್ದರೆ, ಹಲವು ರಾಜ್ಯಗಳು ತೆರಿಗೆ ಮುಕ್ತ ಮಾಡಿದೆ. ಇದೀಗ ಕರ್ನಾಟಕದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಇದು ಮುಸ್ಲಿಮ್ ಸಮುದಾಯವನ್ನು ಕೆರಳಿಸುವ ಸಾಧ್ಯತೆ ಇದೆ. ಇದು ಪ್ರತಿಭಟನೆ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಾಧ್ಯತೆ ಮನಗಂಡಿರುವ ರಾಜ್ಯ ಪೊಲೀಸರು ಇದೀಗ ಅಲರ್ಟ್ ಆಗಿದ್ದಾರೆ.

ಕೇರಳ ಸ್ಟೋರಿ ಚಿತ್ರ ಪ್ರದರ್ಶನದಿಂದ ಸೃಷ್ಟಿಯಾಗಬಲ್ಲ ಪ್ರತಿಭಟನೆ, ಹಿಂಸಾಚಾರ ತಪ್ಪಿಸಲು ಎಡಿಜಿಪಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಲಾಗಿದೆ.  ಬೆಂಗಳೂರು ನಗರ,ಮೈಸೂರು,ಹುಬ್ಬಳಿ ಧಾರವಾಡ ,ಮಂಗಳೂರು,ಬೆಳಗಾವಿ ,ಕಲಬುರಗಿ ನಗರ  ಸೇರಿದಂತೆ ಎಲ್ಲಾ ಜಿಲ್ಲಾ ಎಸ್ಪಿಗಳು ಮುನ್ನೆಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ.

ದಿ ಕೇರಳ ಸ್ಟೋರಿ ಬಳಿಕ ಭುಗಿಲೆದ್ದ 'ಫರ್ಹಾನಾ' ವಿವಾದ: ನಟಿಗೆ ಜೀವ ಬೆದರಿಕೆ

ಚಿತ್ರ ಪ್ರದರ್ಶನದ ವೇಳೆ ಮುಸ್ಲಿಂ ಮಹಿಳೆಯರು ಫ್ಲೆಕ್ಸ್, ಬ್ಯಾನರ್ ಹರಿದು ಹಾಕುವ ಸಾಧ್ಯತೆಯನ್ನು ಹಿಂದೂಪ ಪರ ಸಂಘಟನೆಗಳು ಹೇಳಿವೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಹಿಂದೂಪರ ಸಂಘಟನೆಗಳು ಚಲನಚಿತ್ರ ಪ್ರದರ್ಶನ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಸಾಧ್ಯತೆ ಇರುವ ಕಾರಣ ಪೊಲೀಸರು ಸೂಕ್ತ ಭದ್ರತೆ ಹಾಗೂ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.

ಮಣಿಪಾಲ್‌ದ ಕೆನಾರಾ ಮಾಲ್‌ನಲ್ಲಿ ಸುರೇಶ್ ಮಂಡನ್ ನೇತೃತ್ವದಲ್ಲಿ ದಿ ಕೇರಳ ಸ್ಟೋರಿ ಚಿತ್ರಪ್ರದರ್ಶನ ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟ ಹಿಂದೂ ಯುವತಿಯರಿಗಾಗಿ ಈ ಚಿತ್ರ ಪ್ರದರ್ಶನ ಆಯೋಜನೆ ಮಾಡಲಾಗಿದೆ. 

 

ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆ, ಕೇರಳ ಸ್ಟೋರಿ ಪ್ರದರ್ಶನಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್!

ದಿ ಕೇರಳ ಸ್ಟೊರಿ’ ಸಿನಿಮಾ ಇದೀಗ ಭಾರತದಲ್ಲಿ ಬರೋಬ್ಬರಿ 200 ಕೋಟಿ ರು. ಗಳಿಸಿದೆ. ತೀವ್ರ ವಿವಾದದ ನಡುವೆಯೂ ಮೇ.5 ರಂದು ಬಿಡುಗಡೆಯಾಗಿದ್ದ ಸಿನಿಮಾ, 17 ದಿನಗಳಲ್ಲೇ 200 ಕೋಟಿ ರು. ಗಡಿ ದಾಟಿದೆ.ಸಿನಿಮಾ ಗಳಿಕೆ ಕುರಿತು ನಿರ್ಮಾಣ ಸಂಸ್ಥೆ ಸನ್‌ಶೈನ್‌ ಪಿಕ್ಚ​ರ್‍ಸ್ ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ನಿರ್ದೇಶಕ ಸುದೀಪ್ತೋ ಸೇನ್‌ ನಿರ್ದೇಶಿಸಿದ್ದ ಚಿತ್ರದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ನಿಷೇಧಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ಆದೇಶಕ್ಕೆ ಇತ್ತೀಚೆಗೆ ಸುಪ್ರೀಂಕೋರ್ಚ್‌ ತಡೆ ನೀಡಿತ್ತು.

ಕೇರಳದಲ್ಲಿ ಸಾವಿರಾರು ಹಿಂದೂ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಸಿರಿಯಾ, ಅಷ್ಘಾನಿಸ್ತಾನದಂತಹ ಇಸ್ಲಾಂ ರಾಷ್ಟ್ರಗಳಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಆತ್ಮಾಹುತಿ ಬಾಂಬ್‌ ದಾಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥೆಹಂದರದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಇದು ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

Latest Videos
Follow Us:
Download App:
  • android
  • ios