Asianet Suvarna News Asianet Suvarna News

ರಾಜ್ಯ 90% ಅನ್‌ಲಾಕ್‌, 45% ನಾರ್ಮಲ್..!

ರಾಜ್ಯಾ​ದ್ಯಂತ ಜನ​ಜೀ​ವನ ಶೇ.90ರಷ್ಟು ಅನ್‌​ಲಾಕ್‌ ಆಗಿದೆ. ಆದರೆ, ಕೋವಿ​ಡ್‌ಗೆ ಮೊದ​ಲಿದ್ದ ವ್ಯಾಪಾರ ವಹಿ​ವಾಟಿಗೆ ಹೋಲಿ​ಸಿ​ದರೆ ಸದ್ಯ ಶೇ.45ರಷ್ಟೇ ಚೇತ​ರಿಕೆ ಕಂಡಿ​ದೆ. ಪ್ರವಾ​ಸೋ​ದ್ಯ​ವನ್ನೇ ನಂಬಿಕೊಂಡಿ​ರುವ ಕೊಡಗು, ಚಿಕ್ಕ​ಮ​ಗ​ಳೂ​ರು, ಮೈಸೂ​ರಿ​ನ ಆರ್ಥಿ​ಕತೆ ಮಾತ್ರ ಸಂಪೂರ್ಣ ನೆಲ​ಕ​ಚ್ಚಿ​ದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Karnataka now 90 percent Unlock and 45 percent normal situation
Author
Bengaluru, First Published Sep 8, 2020, 7:57 AM IST
  • Facebook
  • Twitter
  • Whatsapp

ಬೆಂಗ​ಳೂ​ರು(ಸೆ.08): ಕೊರೋನಾ ಆತಂಕ ಮುಂದು​ವ​ರಿ​ದಿ​ರುವ ನಡು​ವೆ​ಯೇ ರಾಜ್ಯಾ​ದ್ಯಂತ ಜನ​ಜೀ​ವನ ನಿಧಾ​ನ​ವಾಗಿ ಸಹಜ ಸ್ಥಿತಿಗೆ ಮರ​ಳು​ತ್ತಿ​ದೆ. ಶಾಲಾ-ಕಾಲೇ​ಜು​ಗಳು, ಪಾರ್ಕ್‌ಗಳು, ಸಿನಿಮಾ ಮಂದಿ​ರ​, ಮನರಂಜನಾ ಕೇಂದ್ರ, ಸಂಪೂರ್ಣ ರೈಲು ಹಾಗೂ ವಿಮಾನ ಸಂಚಾರ ಹೊರ​ತು​ಪ​ಡಿಸಿ ರಾಜ್ಯಾ​ದ್ಯಂತ ಜನ​ಜೀ​ವನ ಶೇ.90ರಷ್ಟು ಅನ್‌​ಲಾಕ್‌ ಆಗಿದೆ. ಆದರೆ, ಕೋವಿ​ಡ್‌ಗೆ ಮೊದ​ಲಿದ್ದ ವ್ಯಾಪಾರ ವಹಿ​ವಾಟಿಗೆ ಹೋಲಿ​ಸಿ​ದರೆ ಸದ್ಯ ಶೇ.45ರಷ್ಟೇ ಚೇತ​ರಿಕೆ ಕಂಡಿ​ದೆ. ಪ್ರವಾ​ಸೋ​ದ್ಯ​ವನ್ನೇ ನಂಬಿಕೊಂಡಿ​ರುವ ಕೊಡಗು, ಚಿಕ್ಕ​ಮ​ಗ​ಳೂ​ರು, ಮೈಸೂ​ರಿ​ನ ಆರ್ಥಿ​ಕತೆ ಮಾತ್ರ ಸಂಪೂರ್ಣ ನೆಲ​ಕ​ಚ್ಚಿ​ದೆ.

"

ದೇಶಾ​ದ್ಯಂತ ಕೋವಿಡ್‌ ಆತಂಕ ಕಾಣಿ​ಸಿ​ಕೊಂಡಾಗ ಮಾ.25ರಿಂದ ದೇಶದ ಉಳಿದ ಭಾಗ​ದಂತೆ ರಾಜ್ಯ​ದಲ್ಲೂ ಲಾಕ್‌​ಡೌನ್‌ ಜಾರಿಗೊಳಿ​ಸ​ಲಾ​ಗಿತ್ತು. ಆ ನಂತರ ಹಂತ ಹಂತ​ವಾಗಿ ಲಾಕ್‌​ಡೌನ್‌ ಅನ್ನು ತೆರ​ವು​ಗೊ​ಳಿ​ಸ​ಲಾ​ಗಿದ್ದು, ಸೆಪ್ಟೆಂಬರ್‌ನಿಂದ ಸಾರ್ವಜನಿಕ ಕಾರ್ಯಕ್ರಮಗಳು, ಮೆಟ್ರೋ ರೈಲು, ಬಾರ್‌ ಮತ್ತು ರೆಸ್ಟೋರೆಂಟ್‌, ಕ್ಲಬ್‌ ಸೇರಿ ಅನೇಕ ನಿರ್ಬಂಧಿತ ಕ್ಷೇತ್ರಗಳಿಗೂ ಷರತ್ತು ವಿಧಿಸಿ ಅನುವು ಮಾಡಿಕೊಡಲಾಗಿದೆ.

ಸಾರ್ವ​ಜ​ನಿಕ ಸಾರಿಗೆಯಿಂದ ದೂರ: ಇತ್ತ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚು​ತ್ತಲೇ ಇದ್ದ​ರೂ ನಾಲ್ಕೈದು ತಿಂಗ​ಳಿಂದ ಮನೆ​ಯಲ್ಲೇ ಕೂತಿದ್ದ ಜನ ಆಗಸ್ಟ್‌ ತಿಂಗ​ಳಿಂದೀಚೆಗೆ ಎಂದಿನ ಚಟುವಟಿಕೆಯತ್ತ ಮರಳುತ್ತಿದ್ದಾರೆ. ಹಾಗಂತ ಸಂಪೂರ್ಣವಾಗಿ ಜನ ಕೊರೋನಾ ಪೂರ್ವ ಸ್ಥಿತಿಗೆ ಮರಳಿಲ್ಲ. ಸಾರ್ವ​ಜ​ನಿಕ ಸಾರಿಗೆ ಬಳ​ಸಲು ಈಗಲೂ ಹಿಂದೇಟು ಹಾಕು​ತ್ತಿ​ದ್ದಾರೆ. ರಾಜ್ಯಾ​ದ್ಯಂತ ಶೇ.45ರಷ್ಟು ಸರ್ಕಾರಿ ಬಸ್‌, ಸುಮಾರು ಶೇ.40ರಷ್ಟುಖಾಸಗಿ ಬಸ್‌​ಗಳ ಓಡಾಟ ಆರಂಭ​ವಾ​ಗಿದ್ದರೂ ಬಸ್‌ ಹತ್ತುವ ಮಂದಿ ಶೇ.30 ದಾಟು​ತ್ತಿಲ್ಲ ಎನ್ನು​ತ್ತಾರೆ ಸಾರಿಗೆ ಉದ್ಯ​ಮದ ಮಂದಿ.

ಆದರೆ, ಜನರ ಓಡಾಟ ಹೆಚ್ಚು​ತ್ತಿ​ದ್ದಂತೆ ಆಗಸ್ಟ್‌ಗೂ ಮೊದಲು ಶೇ.30ರ ಆಸು​ಪಾ​ಸಿನಲ್ಲಿದ್ದ ವಾಣಿ​ಜ್ಯ ವಹಿ​ವಾಟಲ್ಲಿ ದಿಢೀರ್‌ ಹೆಚ್ಚಳವಾಗಿ​ದೆ. ಕಳೆ​ದೊಂದು ತಿಂಗ​ಳಲ್ಲೇ ಶೇ.20ರಷ್ಟು ವಹಿ​ವಾಟು ಹೆಚ್ಚ​ಳ​ವಾ​ಗಿದೆ ಎಂದು ಸಂತಸ ವ್ಯಕ್ತ​ಪ​ಡಿ​ಸು​ತ್ತಾರೆ ವರ್ತ​ಕರು. ಪರಿ​ಸ್ಥಿತಿ ಇದೇ ರೀತಿ ಮುಂದು​ವ​ರಿ​ದರೆ ದೀಪಾ​ವಳಿ ಹೊತ್ತಿಗೆ ಪರಿ​ಸ್ಥಿತಿ ಸಹಜ ಸ್ಥಿತಿಗೆ ಮರ​ಳುವ ಆಶಾ​ಭಾ​ವ​ನೆ​ಯನ್ನೂ ಅವರು ವ್ಯಕ್ತ​ಪ​ಡಿ​ಸು​ತ್ತಿ​ದ್ದಾ​ರೆ.

ಅನ್‌ಲಾಕ್‌ 4.0 ಗೆ ಕರ್ನಾಟಕ ತೆರೆದುಕೊಂಡ ರೀತಿ

ಹೋಟೆಲ್‌ ಉದ್ಯ​ಮಕ್ಕೆ ಪೆಟ್ಟು: ಕೊರೋನಾ ಹಿನ್ನೆ​ಲೆ​ಯಲ್ಲಿ ಹೆಚ್ಚು ಪೆಟ್ಟು ತಿಂದ ಕ್ಷೇತ್ರ​ವೆಂದರೆ ಅದು ಹೋಟೆಲ್‌ ಮತ್ತು ಪ್ರವಾ​ಸೋ​ದ್ಯಮ. ಲಾಕ್‌​ಡೌನ್‌ ಜಾರಿ​ಯಾದ ಮೊದ​ಲೆ​ರಡು ತಿಂಗ​ಳಲ್ಲಿ ಹೋಟೆಲ್‌ ಉದ್ಯಮ ಸಂಪೂರ್ಣ ಮಕಾಡೆ ಮಲ​ಗಿ​ತ್ತು. ರಾಜ್ಯಾ​ದ್ಯಂತ ಹಲವು ಸಣ್ಣ, ಮಧ್ಯಮ ಹೋಟೆ​ಲ್‌​ಗಳು ಬಾಗಿಲು ಮುಚ್ಚಿದ್ದೂ ಆಯ್ತು. ಆದರೆ, ಇದೀಗ ಉದ್ಯ​ಮ​ದಲ್ಲಿ ನಿಧಾ​ನ​ಗ​ತಿ​ಯಲ್ಲಿ ಚೇತ​ರಿಕೆ ಕಾಣು​ತ್ತಿದ್ದು, ಸಣ್ಣ ಹೋಟೆ​ಲ್‌​ಗ​ಳಲ್ಲಿ ಶೇ.30ರಿಂದ 40ರಷ್ಟುವಹಿ​ವಾಟು ನಡೆ​ಯು​ತ್ತಿದೆ ಎಂದು ಮಾಲೀ​ಕರು ಹೇಳಿ​ಕೊ​ಳ್ಳು​ತ್ತಾ​ರೆ. ದೊಡ್ಡ ಹೋಟೆ​ಲ್‌​ಗಳು ಸಹಜ ಸ್ಥಿತಿಗೆ ಮರ​ಳಲು ಹಲವು ತಿಂಗ​ಳು​ಗಳೇ ಬೇಕಾ​ಗ​ಬ​ಹು​ದು ಎನ್ನುವು​ದು ಬಹು​ತೇ​ಕರ ಅಭಿ​ಪ್ರಾಯ.

ಏತ​ನ್ಮಧ್ಯೆ, ಕೋವಿ​ಡ್‌​ನಿಂದಾಗಿ ಕಳೆ​ಗುಂದಿ​ರುವ ಪ್ರವಾ​ಸೋ​ದ್ಯಮ ಮಾತ್ರ ಚೇತ​ರಿಕೆ ಕಾಣಲು ಇನ್ನಷ್ಟುದಿನ ಕಾಯು​ವುದು ಅನಿ​ವಾ​ರ್ಯ. ಪ್ರವಾ​ಸೋ​ದ್ಯ​ಮವನ್ನೇ ನಂಬಿ​ಕೊಂಡಿ​ರುವ ಮೈಸೂರು, ಕೊಡಗು ಮತ್ತು ಚಿಕ್ಕ​ಮ​ಗ​ಳೂ​ರಿ​ನಂಥ ಜಿಲ್ಲೆ​ಗ​ಳಲ್ಲಿ ವ್ಯಾಪಾರ ವಹಿ​ವಾ​ಟಿಗೆ ಭಾರೀ ಹೊಡೆ​ತವೇ ಬಿದ್ದಿದೆ. ಕೊಡ​ಗಿ​ನಲ್ಲೇ ಶೇ. 35ರಷ್ಟುರೆಸಾ​ರ್ಟ್‌ಗಳು, ಹೋಮ್‌ ಸ್ಟೇಗ​ಳಷ್ಟೇ ಬಾಗಿಲು ತೆರೆ​ದಿವೆ. ಇವೂ ಗ್ರಾಹ​ಕ​ರಿ​ಲ್ಲದೆ ಬಿಕೋ ಎನ್ನು​ತ್ತಿವೆ. ಸದಾ ಪ್ರವಾ​ಸಿ​ಗ​ರಿಂದ ಗಿಜಿ​ಗು​ಡು​ತ್ತಿದ್ದ ಮೈಸೂ​ರಿನ ಅರ​ಮನೆ, ಮೃಗಾ​ಲ​ಯಕ್ಕೆ ಭೇಟಿ ಕೊಡು​ವ​ವರ ಪ್ರಮಾ​ಣ ಬಹು​ತೇಕ ಕ್ಷೀಣಿ​ಸಿ​ದೆ. ಕಾಫಿ​ನಾಡು ಚಿಕ್ಕ​ಮ​ಗ​ಳೂ​ರಲ್ಲಿ ಇತ್ತೀ​ಚೆಗೆ ವಾರಾಂತ್ಯ​ದಲ್ಲಷ್ಟೇ ಪ್ರವಾ​ಸಿ​ಗರ ಉಪ​ಸ್ಥಿತಿ ಕಾಣು​ತ್ತ​ದೆ. ಈ ಜಿಲ್ಲೆ​ಗ​ಳಲ್ಲಿ ವ್ಯಾಪಾರ, ವಹಿ​ವಾ​ಟಿನ ಚೇತ​ರಿಕೆ ಶೇ.45ರೊಳಗೆ ಇದೆ.

ಮಾಲ್‌​ಗಳು ಬಣ​ಬ​ಣ: ಬೆಂಗ​ಳೂ​ರಲ್ಲಿ ಬಹು​ತೇಕ ಐಟಿ ಕಂಪ​ನಿ​ಗಳು ವರ್ಕ್ ಫ್ರಂ ಹೋಮ್‌ ಅನ್ನು ಕಟ್ಟು​ನಿ​ಟ್ಟಾಗಿ ಪಾಲಿ​ಸು​ತ್ತಿವೆ. ಹೀಗಾಗಿ ಇಲ್ಲಿ ಹೋಟೆಲ್‌ ಉದ್ಯ​ಮಕ್ಕೆ ಕೊಂಚ ಜಾಸ್ತಿಯೇ ಏಟು ಬಿದ್ದಿ​ದೆ. ಓಲಾ, ಉಬ​ರ್‌​ನಂಥ ಕ್ಯಾಬ್‌ ಸೇವೆ ಬಳ​ಸಲು ಜನ ಇನ್ನೂ ಧೈರ್ಯ ತೋರು​ತ್ತಿಲ್ಲ. ಮಾಲ್‌​ಗಳಲ್ಲೂ ಮೊದ​ಲಿ​ನಷ್ಟುಜನ​ಜಂಗುಳಿ ಇಲ್ಲ.

ಕರಾ​ವ​ಳಿ​ಯಲ್ಲಿ ಆತಂಕ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ​ಗ​ಳಲ್ಲಿ ಹೆಚ್ಚು​ತ್ತಿ​ರುವ ಕೋವಿಡ್‌ ಪ್ರಕ​ರ​ಣ​ಗಳಿಂದಾಗಿ ಮೀನು​ಗಾ​ರಿ​ಕೆ ಉದ್ಯ​ಮಕ್ಕೆ ಪೆಟ್ಟು ಬಿದ್ದಿದೆ. ಮೀನು​ಮಾ​ರು​ಕ​ಟ್ಟೆ​ಯಲ್ಲಿ ಮೊದ​ಲಿ​ನಷ್ಟುವ್ಯವ​ಹಾ​ರ​ವಿಲ್ಲ. ಇನ್ನು ಈ ಜಿಲ್ಲೆ​ಗ​ಳಲ್ಲಿ ಶೇ.50ರಷ್ಟುಹೋಟೆ​ಲ್‌​ಗಳ ಬಾಗಿಲು ತೆರೆ​ದಿ​ದ್ದರೂ ಮೊದ​ಲಿ​ನಷ್ಟುಗ್ರಾಹ​ಕ​ರಿಲ್ಲ. ಬಹು​ತೇಕ ದೇವ​ಸ್ಥಾ​ನ​ಗಳು ಬಾಗಿಲು ಹಾಕಿ​ರುವ ಕಾರಣ ಧಾರ್ಮಿಕ ಪ್ರವಾ​ಸೋ​ದ್ಯ​ಮಕ್ಕೂ ಹೊಡೆತ ಬಿದ್ದಿದೆ. ಬೀಚ್‌​ಗ​ಳೂ ಖಾಲಿ​ಹೊ​ಡೆ​ಯು​ತ್ತಿ​ವೆ.

Follow Us:
Download App:
  • android
  • ios