Asianet Suvarna News Asianet Suvarna News

ನಾಳೆಯಿಂದ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ; ಕಾಫಿ ಟೀ ಬೆಲೆಯೂ ಹೆಚ್ಚಳ!

ನಾಳೆಯಿಂದ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 3ರಂತೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

Karnataka news Milk price increase from tomorrow in kannada news rav
Author
First Published Jul 31, 2023, 8:12 AM IST

ಬೆಂಗಳೂರು (ಜು.31): ನಾಳೆಯಿಂದ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 3ರಂತೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀ. ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಿದ್ದ ಸರ್ಕಾರ ಇದೀಗ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು ಮತ್ತು ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆಯೇ ನಾಳೆಯಿಂದ ಪ್ರತಿ ಲೀಟರ್‌ನ ಹಾಲಿನ ದರ ಹೆಚ್ಚಳವಾಗಲಿದೆ.ಅದ್ಯಾಗೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ರ್ಯಾಂಡ್‌ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಕಡಿಮೆಯಾಗಿದೆ.

ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್‌ ತಿಂಡಿ-ತಿನಿಸು ದರ ಏರಿಕೆ

ಯಾವ ಯಾವ ಪ್ಯಾಕೇಜ್ ಹಾಲು ಎಷ್ಟಿದೆ ಈಗ ಎಷ್ಟಾಗಲಿದೆ?

ಹಾಲು                 ಬೆಲೆ ಎಷ್ಟು

ಸಮೃದ್ದಿ ಹಾಲು      48 ರಿಂದ 51
ಸ್ಪೆಷಲ್ ಹಾಲು       43 ರಿಂದ 46
ಸಂತೃಪ್ತಿ ಹಾಲು        50  ರಿಂದ 53
ಶುಭಂ ಹಾಲು          43 ರಿಂದ 46
ಟೋನ್ಡ್ ಹಾಲು         37 ರಿಂದ 40
ಡಬಲ್ಟೋನ್ಡ್ ಹಾಲು 36 ರಿಂದ 39  
ಹೊಮೋಜಿನೈಸ್ಡ್      38 ರಿಂದ 41
ಹೊಮೋಜಿನೈಸ್ಡ್      42 ರಿಂದ 45 
( ಹಸುವಿನ ಹಾಲು) 

ಹಾಲು, ಆಲ್ಕೋಹಾಲಿನ ದರ ಏರಿಕೆಗೆ ಕುಮಾರಸ್ವಾಮಿ ಕಿಡಿ

ಕಾಫಿ, ಟೀ ಪ್ರಿಯರಿಗೆ ಶಾಕ್

ಕಳೆದ ಜುಲೈ 22ರಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಚಿವ ಸಂಪುಟ ಸಭೆಯಲ್ಲೂ ಹಾಲಿನ ದರ ಏರಿಕೆಗೆ ಅನುಮೋದನೆ ನೀಡಲಾಗಿತ್ತು.ಹೀಗಾಗಿ ನಾಳೆಯಿಂದ ಹಾಲಿನದರ 3ರೂ ಹೆಚ್ಚಳ ಮಾಡಲು ನಿರ್ಧರಿಸಿರುವ ಸರ್ಕಾರ.

ಹಾಲಿನ ದರ ಹೆಚ್ಚಳ ಹಿನ್ನೆಲೆ ಕಾಫಿ-ಟೀ ಬೆಲೆಯೂ ಹೆಚ್ಚಳವಾಗಲಿದ್ದು ಪ್ರಿಯರ ನಾಲಗೆ ಸುಡಲಿದೆ.  ಹೋಟೆಲ್ ಕಾಫಿ ಟೀ ದರದಲ್ಲಿ 1% ದರ ಹೆಚ್ಚಿಸಲು ನಿರ್ಧಿರಿಸಿರುವ ಹೋಟೆಲ್ ಮಾಲೀಕರ ಸಂಘ. ಇದು ನಾಳೆಯಿಂದಲೇ ದರ ಅನ್ವಯವಾಗಲಿದ್ದು, ಕಾಫಿ- ಟೀ ಬೆಲೆಯಿಂದ ಗ್ರಾಹಕರ ಜೇಬಿಗೆ ಬಿಸಿ ತಟ್ಟಲಿದೆ.

Follow Us:
Download App:
  • android
  • ios