Karnataka News Live updates: ಮಂಗಳೂರು ಮೂಲಕ ಕೇರಳಕ್ಕೆ ತೆರಳಿದವನಿಗೆ ಮಂಕಿಪಾಕ್ಸ್
ಸಾರಾಂಶ
ಮಂಗಳೂರು ಮೂಲಕ ಕೇರಳಕ್ಕೆ ಆಗಮಿಸಿದ ಯುವಕನಿಗೆ ಮಂಕಿಪಾಕ್ಸ್. ಕೇರಳದಲ್ಲಿ ಪತ್ತೆಯಾದ ಎರಡನೇ ಮಂಕಿಪಾಕ್ಸ್ ಪ್ರಕರಣ. ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದ್ದ ಯುವಕ. ಕೇರಳದ ಕಣ್ಣೂರು ನಿವಾಸಿ 31 ವರ್ಷದ ಯುವಕ. ಕಳೆದ ಜುಲೈ 13ರಂದು ದುಬೈನಿಂದ ಮಂಗಳೂರಿಗೆ ಆಗಮನ. ಏರ್ ಪೋರ್ಟ್ನಿಂದ ನೇರವಾಗಿ ಕಣ್ಣೂರಿಗೆ ತೆರಳಿದ್ದ ಯುವಕ. ಬಳಿಕ ರೋಗ ಲಕ್ಷಣ ಪತ್ತೆ ಹಿನ್ನೆಲೆ ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆ. ಪುಣೆಯ ವೈರಾಲಜಿ ಲ್ಯಾಬ್ ಗೆ ಕಳುಹಿಸಿದ ಮಾದರಿಯಲ್ಲಿ ಮಂಕಿಪಾಕ್ಸ್ ಪತ್ತೆ. ದುಬೈನಿಂದ ಆಗಮಿಸಿದ ಈ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಇದರಲ್ಲಿ ದ.ಕ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರು 01 ಪ್ರಯಾಣಿಕರು ಇದ್ದರು. ರೋಗ ಲಕ್ಷಣ ಇದ್ದಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಗೆ ದಾಖಲಾಗಲು ಸೂಚನೆ
05:17 PM (IST) Jul 18
ತವರಿಗೆ ಆಗಮಿಸಿದ ಮಿಸ್. ಇಂಡಿಯಾ ಸಿನಿ ಶೆಟ್ಟಿ
ಮಂಗಳೂರು: ಮಂಗಳೂರಿಗೆ ಆಗಮಿಸಿದ ಮಿಸ್ ಇಂಡಿಯಾ ಸಿನಿ ಶೆಟ್ಟಿ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ. 2022 ಫೆಮಿನಾ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ. ಮಿಸ್ ಇಂಡಿಯಾ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮನ. ಸಿನಿ ಶೆಟ್ಟಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ. ಅರತಿ ಎತ್ತಿ, ಹೂಮಾಲೆ, ಗುಚ್ಛ ನೀಡಿ ಸ್ವಾಗತ. ಮಿರಮಿರ ಸಾರಿಯಲ್ಲಿ ಮಿಂಚುತ್ತಿದ್ದ ಮಿಸ್ ಇಂಡಿಯಾ ಸಿನಿ ಶೆಟ್ಟಿ. ಸಿನಿ ಶೆಟ್ಟಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು. ತುಳು ಭಾಷೆಯಲ್ಲಿ ಜನತೆಗೆ ಧನ್ಯವಾದ ತಿಳಿಸಿದ ಸಿನಿ ಶೆಟ್ಟಿ. ಮಿಸ್ ವಲ್ಡ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಒಳ್ಳೆ ಚಿತ್ರಕತೆ ಸಿಕ್ಕಿದ್ರೆ ಸಿನಿಮಾದಲ್ಲಿಯೂ ಆ್ಯಕ್ಟ್ ಮಾಡುವುದಾಗಿಯೂ ಹೇಳಿದ್ದಾರೆ.
04:42 PM (IST) Jul 18
ರಾಷ್ಟ್ರಪತಿ ಚುನಾವಣೆ: ಗೆದ್ದ ಮೇಲೆ ಭಾರತದ ಮೊದಲ ಪ್ರಜೆ ಪಕ್ಷಾತೀತವಾಗಿ ಕೆಲಸ ಮಾಡಬೇಕು!
ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಪಕ್ಷ ಆಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿಯವರು ಇರಬಹುದು. ಆದ್ರೆ ಅವ್ರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವ್ರು ಯಡಿಯೂರಪ್ಪ 2008ರಲ್ಲಿ ಆಪರೇಷನ್ ಕಮಲ ನಡೆಸಿದಾಗ ಯಡಿಯೂರಪ್ಪ ಜೊತೆ ಏನ್ ಮಾಡಿದ್ರಿ ನನಗೆ ಗೊತ್ತಿದೆ. ನಾನು ತಾಜ್ ವೆಸ್ಟ್ ಆಂಡ್ ನಲ್ಲಿ ಇಲ್ಲದೆ ಹೋಗಿದ್ರೆ ಸರ್ಕಾರ ಉಳಿಯುತ್ತಿತ್ತು ಅಂದ್ರು. ಆಯ್ತು ಹಾಗೇ ಅಂದುಕೊಳ್ಳೋಣ. ಆದ್ರೆ ಇವತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ಯಾಕೆ ಹೋಯ್ತು? ಇದನ್ನ ಜನರಿಗೆ ಹೇಳಿ.
ನಾನು ಏನು ಅಪರಾಧ ಮಾಡಿದ್ದೆ? ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ? ಇದು ಕೊನೆ ಚುನಾವಣೆ ಅಂತೀರಾ, ಭ್ರಷ್ಟಾಚಾರ ಸರ್ಕಾರ ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳ್ತಾರೆ. ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರ್ ಕಾರಣ? ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ? ಆದ್ರೆ ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಮರೆತು ಹೋಗಿದ್ದೀರಾ? ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡ್ತಿದ್ದಾರೆ. ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ.
ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನ್ ಮಾಡಿದ್ರಿ? ಯಾರ ಮೇಲೆ ಆಕ್ಷನ್ ಆಯ್ತು ಐಎಎಸ್ ಮನೆಯಲ್ಲಿ 5 ಕೋಟಿ ಸಿಕ್ತು ಅ ಅಧಿಕಾರಿಗೆ ಏನ್ ಮಾಡಿದ್ರಿ? ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ? ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ.ಬೇಕಾದ್ರೆ ಅ ಬಗ್ಗೆ ಚರ್ಚೆ ಮಾಡಬಹುದು. ಇವತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋದಾ?ಎಂದು ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
04:13 PM (IST) Jul 18
ರಾಜ್ಯದಲ್ಲಿ ಮುಗಿದ ರಾಷ್ಟ್ರಪತಿ ಚುನಾವಣೆ ಮತದಾನ
ರಾಷ್ಟ್ರಪತಿ ಚುನಾವಣೆಯ ಮತದಾನ ರಾಜ್ಯದಲ್ಲಿ ಮುಕ್ತಾಯಗೊಂಡಿದ್ದು, 224 ಶಾಸಕರು, ಒಬ್ಬರು ರಾಜ್ಯಸಭಾ ಸದಸ್ಯರು ಮತ್ತು ಒಬ್ಬರು ಲೋಕಸಭಾ ಸದಸ್ಯರಿಂದ ಮತದಾನ ಮಾಡಲಾಗಿದೆ. ಒಟ್ಟು 226 ಮತದಾರರಿಂದ ಮತದಾನವಾಗಿದೆ. ಅನಾರೋಗ್ಯದ ಹಿನ್ನೆಲೆ ಶ್ರೀನಿವಾಸ್ ಪ್ರಸಾದ್ ಕೂಡ ವಿಧಾನಸೌಧದಲ್ಲೇ ಮತದಾನ ಮಾಡಲು ಪೂರ್ವಾನುಮತಿ ಪಡೆದಿದ್ದರು. ಇನ್ನೂ, ಜೆಡಿಎಸ್ ಪ್ರತಿನಿಧಿಗಳು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರಿಗೆ ಬೆಂಬಲ ನೀಡಿದ್ದಾರೆ.
03:51 PM (IST) Jul 18
ಆಗಸ್ಟ್ 11 ಪರಿಷತ್ ಉಪಚುನಾವಣೆ, ಅಂದೇ ಫಲಿತಾಂಶ
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ನಂತರ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಚುನಾವಣಾ ಆಯೋಗ ಆಗಸ್ಟ್ 11ಕ್ಕೆ ಪರಿಷತ್ ಉಪ ಚುನಾವಣೆ ದಿನಾಂಕ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ಮತದಾನ ಮತ್ತು ಫಲಿತಾಂಶ ಎರಡೂ ಅಂದೇ ಇರಲಿದೆ ಎಂದು ಆಯೋಗ ತಿಳಿಸಿದೆ. ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
03:45 PM (IST) Jul 18
ಕಸ್ತೂರಿ ರಂಗನ್ ಪಶ್ಚಿಮಘಟ್ಟಗಳ ಕುರಿತ ವರದಿ ಅನುಷ್ಠಾನಕ್ಕೆ ವಿರೋಧ, ಜನಪ್ರತಿನಿಧಿಗಳ ಸಭೆ
ಪಶ್ಚಿಮ ಘಟ್ಟಗಳ ಕುರಿತಾದ ಕೇಂದ್ರ ಅರಣ್ಯ ಸಚಿವಾಲಯದ ಅಧಿಸೂಚನೆ ವಿರೋಧಿಸಿ ಶಾಸಕರ ಸಭೆ ಆರಂಭಿಸಲಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶದ ಜನ ಪ್ರತಿ ನಿಧಿ ಗಳ ಸಭೆ ಗೃಹ ಸಚಿವ ಅರಗ ಜ್ಙಾನೇಂದ್ರ ನೇತೃತ್ವದಲ್ಲಿ ನಡೆಯುತ್ತಿದೆ. ವಿಕಾಸ ಸೌಧದಲ್ಲಿ ನಡೆಯುತ್ತಿರುವ ಸಭೆ. ಕೇಂದ್ರ ಅರಣ್ಯ ಸಚಿವಾಲಯದ ಅಧಿಸೂಚನೆಗೆ ಪಶ್ಚಿಮ ಘಟ್ಟದ ಜನ ಮತ್ತು ಜನಪ್ರತಿನಿಧಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ. ಆಕ್ಷೇಪಣೆ ಇದ್ದಲ್ಲಿ ಎರಡೂ ತಿಂಗಳ ಒಳಗಾಗಿ ಸಲ್ಲಿಸಬಹುದು ಎಂದು ಸೂಚನೆ ನೀಡಿದ್ದ ಕೇಂದ್ರ ಸರ್ಕಾರ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸುತ್ತಿರುವ ಮಲೆನಾಡು ಹಾಗೂ ಕರಾವಳಿ ಭಾಗದ ಜನಪ್ರತಿನಿಧಿಗಳು, ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂಬ ಒಗ್ಗಟ್ಟಿನ ನಿಲುವು ತಳೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
03:08 PM (IST) Jul 18
ರಾಯಚೂರು: ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು
ರಾಯಚೂರು; ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ. ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಘಟನೆ. ಮೃತ ನಾಲ್ವರು ಮಧ್ಯಪ್ರದೇಶ ಮೂಲದವರು ಎಂದು ಗುರುತು. ರಸ್ತೆ ಅಪಘಾತದಿಂದ ಕೆಲ ಕಾಲ ಟ್ರಾಫಿಕ್ ಜಾಮ್. ಎರಡು ಜೆಸಿಬಿಯಿಂದ ಅಪಘಾತ ವಾಹನಗಳ ತೆರವು. ಸದ್ಯ ಮೃತದೇಹಗಳನ್ನು ಸಿಂಧನೂರು ಆಸ್ಪತ್ರೆಗೆ ರವಾನೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
03:06 PM (IST) Jul 18
ಚಿತ್ರದುರ್ಗ: ಕಾರಿಗೆ ಲಾರಿ ಡಿಕ್ಕಿ, ಇಬ್ಬರ ದುರ್ಮರಣ
ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರು ದುರ್ಮರಣ. ಕೊಳಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಫಘಾತ. ಚಿತ್ರದುರ್ಗ ಜಿಲ್ಲೆಯ ಕೊಳಾಳ್ ಸಮೀಪದ ಹೆದ್ದಾರಿ. ಇದುವರೆಗೂ ಮೃತರ ಗುರುತು ಪತ್ತೆ ಆಗಿಲ್ಲ. ಕಾರು ಚಾಲಕನ ಅಜಾಗರೂಕತೆಯಿಂದ ನಡೆದ ದುರ್ಘಟನೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ.
03:06 PM (IST) Jul 18
ಚಿತ್ರದುರ್ಗ: ಕಾರಿಗೆ ಲಾರಿ ಡಿಕ್ಕಿ, ಇಬ್ಬರ ದುರ್ಮರಣ
ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರು ದುರ್ಮರಣ. ಕೊಳಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಫಘಾತ. ಚಿತ್ರದುರ್ಗ ಜಿಲ್ಲೆಯ ಕೊಳಾಳ್ ಸಮೀಪದ ಹೆದ್ದಾರಿ. ಇದುವರೆಗೂ ಮೃತರ ಗುರುತು ಪತ್ತೆ ಆಗಿಲ್ಲ. ಕಾರು ಚಾಲಕನ ಅಜಾಗರೂಕತೆಯಿಂದ ನಡೆದ ದುರ್ಘಟನೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ.
02:23 PM (IST) Jul 18
ಜಿಎಸ್‌ಟಿ ಏರಿಕೆ ವಿರುದ್ಧ ಎಚ್‌ಡಿಕೆ ಗರಂ: ಜನವಿರೋಧಿ ಸರ್ಕಾರ ಎಂದ ಮಾಜಿ ಸಿಎಂ
ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಇದಾಗಿದೆ ಎಂದು ಖಂಡಿಸಿದ್ದಾರೆ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆ ಆಗಿದೆ. ಈಗ ಆಹಾರ ಪದಾರ್ಥಗಳಿಗೆ GST ಏರಿಕೆ ಮಾಡಲಾಗಿದೆ. ಇದು ಜನ ವಿರೋಧಿ ಸರ್ಕಾರ. ಮೋದಿ ಅವ್ರು ಉಚಿತ ಕಾರ್ಯಕ್ರಮ ಬೇಡ ಅಂತಾರೆ. ಈ ದೇಶದಲ್ಲಿ 1.7 ಮಿಲಿಯನ್ ಆಹಾರದ ಕೊರತೆಯಿಂದ ಸಾವು ಆಗ್ತಿದೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಸರಿಯಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ರೇಖೆ ಬಡ ದೇಶಕ್ಕಿಂತ ಹಿಂದೆ ಇದೆ. GDP ಜೊತೆ ಬಡತನ ರೇಖೆ ಕಡಿಮೆ ಮಾಡಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ. ಹಾಲು,ಮೊಸರು, ಉಪ್ಪಿನಕಾಯಿ ಮೇಲೆ ಟ್ಯಾಕ್ಸ್ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
GST ಹೆಚ್ಚಳ ಬಡವರ ಮೇಲೆ ಪ್ರಭಾವ ಬೀರೋದು. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತೆ. ಬಿಜೆಪಿ ಸಮರ್ಥನೆ ಮಾಡಿಕೊಳ್ಳಬೇಕು. ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡೋದು ಅವ್ರ ಗುಣ. 8 ವರ್ಷದಿಂದ ಎಲ್ಲಿ ಒಳ್ಳೆ ದಿನಗಳು ಬಂತು. ಡಾಲರ್ ಮುಂದೆ ರೂಪಾಯಿ ಬೆಲೆ ಏನಾಗಿದೆ. ಫಾರಿನ್ ಎಕ್ಸ್ ಚೇಂಜ್ ಕೂಡಾ ಖಾಲಿ ಆಗ್ತಿದೆ. ನಮ್ಮ ಕೇಂದ್ರ ಸರ್ಕಾರದ ನೀತಿಯಿಂದ ವಿದೇಶದವರು ಬಂಡವಾಳ ಹೂಡಿಕೆ ವಾಪಸ್ ಪಡೆದಿದ್ದಾರೆ. ಇದು ಚರ್ಚೆ ಮಾಡಬೇಕು. ಕೋವಿಡ್ ನಿಂದ ಅನೇಕ ಕುಟುಂಬ ಬೀದಿಗೆ ಬಂದಿದೆ. ಇಂತಹ ಜನರ ಮೇಲೆ ಹೊರೆ ಹಾಕ್ತಿದ್ದೀರಾ. GST ಬಗ್ಗೆ ನಾನು ಮೊದಲೇ ವಿರೋಧ ಮಾಡಿದ್ದೆ. ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿದ್ದೀರಾ ಅಂತ ಹೇಳಿದ್ದೆ. ಈ ನೀತಿಯನ್ನ ಪುನರ್ ಪರಿಶೀಲನೆ ಮಾಡಬೇಕು. ಕೇಂದ್ರಕ್ಕೆ ಕುಮಾರಸ್ವಾಮಿ ಒತ್ತಾಯ. ರಾಷ್ಟ್ರಪತಿ ಚುನಾವಣೆ ಪಕ್ಷ ಆಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿ ಅವ್ರು ಇರಬಹುದು. ಆದ್ರೆ ಅವ್ರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವ್ರು ಯಡಿಯೂರಪ್ಪ 2008 ರಲ್ಲಿ ಆಪರೇಷನ್ ಕಮಲ ನಡೆಸಿದಾಗ ಯಡಿಯೂರಪ್ಪ ಜೊತೆ ಏನ್ ಮಾಡಿದ್ರಿ ನನಗೆ ಗೊತ್ತಿದೆ. ನಾನು ತಾಜ್ ವೆಸ್ಟ್ ಆಂಡ್ ನಲ್ಲಿ ಇಲ್ಲದೆ ಹೋಗಿದ್ರೆ ಸರ್ಕಾರ ಉಳಿಯುತ್ತಿತ್ತು ಅಂದ್ರು. ಆಯ್ತು ಹಾಗೇ ಅಂದುಕೊಳ್ಳೋಣ. ಆದ್ರೆ ಇವತ್ತು ಮಹಾರಾಷ್ಟ್ರ ರಲ್ಲಿ ಸರ್ಕಾರ ಯಾಕೆ ಹೋಯ್ತು. ಇದನ್ನ ಜನರಿಗೆ ಹೇಳಿ. ನಾನು ಏನು ಅಪರಾಧ ಮಾಡಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ. ಇದು ಕೊನೆ ಚುನಾವಣೆ ಅಂತೀರಾ. ಭ್ರಷ್ಟಾಚಾರ ಸರ್ಕಾರ ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳ್ತಾರೆ. ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರ್ ಕಾರಣ. ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ. ಆದ್ರೆ ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಮರೆತು ಹೋಗಿದ್ದೀರಾ? ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನ್ ಮಾಡಿದ್ರಿ. ಯಾರ ಮೇಲೆ ಆಕ್ಷನ್ ಆಯ್ತು. ಐಎಎಸ್ ಮನೆಯಲ್ಲಿ 5 ಕೋಟಿ ಸಿಕ್ತು ಅ ಅಧಿಕಾರಿಗೆ ಏನ್ ಮಾಡಿದ್ರಿ. ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ. ಬೇಕಾದ್ರೆ ಅ ಬಗ್ಗೆ ಚರ್ಚೆ ಮಾಡಬಹುದು. ಇವತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋದಾ? ಎಂದು ಸಿದ್ದರಾಮಯ್ಯರನ್ನು ಎಚ್‌ಡಿಕೆ ಪ್ರಶ್ನಿಸಿದ್ದಾರೆ.
01:26 PM (IST) Jul 18
ಎಂಟೇ ದಿನಕ್ಕೆ ಜವಾಬ್ದಾರಿ ಮರೆಯಿತಾ ಕೊಡಗು ಜಿಲ್ಲಾಡಳಿತ..?
ಎಂಟೇ ದಿನಕ್ಕೆ ಕಾಳಜಿ ಕೇಂದ್ರದಿಂದ ಜನರ ಹೊರಹಾಕಲು ಸಿದ್ಧತೆ ಮಾಡಿಕೊಂಡಿದೆ. ಕೊಡಗಿನ ಚೆಟ್ಟಳ್ಳಿಯಲ್ಲಿ ಅಧಿಕಾರಿಗಳಿಂದ ಅಮಾನವೀಯ ನಡವಳಿಕೆ ಕಂಡುಬಂದಿದೆ. ಅಧಿಕಾರಿಗಳು ಮನುಷ್ಯತ್ವ ಮರೆತು ನಡೆದುಕೊಳ್ಳುತ್ತಿದ್ದಾರ ಎಂಬ ಪ್ರಶ್ನೆ ಇದರಿಂದ ಎದುರಾಗಿದೆ. ಮಳೆ ಕಡಿಮೆ ಆಗಿದೆ ಮನೆಗೆ ಹೋಗಿ ಎಂದು ನೊಟೀಸ್ ನೀಡಲಾಗಿದ್ದು, ರಾತ್ರೋ ರಾತ್ರಿ ಕಾಳಜಿ ಕೇಂದ್ರದಲ್ಲಿರುವವರು ದಿಗ್ಭ್ರಮೆಗೊಳಗಾಗಿದ್ದಾರೆ. ನಿನ್ನೆ ರಾತ್ರಿ ನೊಟೀಸ್ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು. ಇಂದು ಬೆಳಿಗ್ಗೆಯಿಂದ ಆಹಾರ ಕೂಡ ನೀಡದ ಅಧಿಕಾರಿಗಳು. ಬೆಳಿಗ್ಗೆಯಿಂದ ಕಾಳಜಿ ಕೇಂದ್ರದಲ್ಲಿ ಆಹಾರವಿಲ್ಲ. ಕಾಳಜಿ ಕೇಂದ್ರದಿಂದ ತೆರಳಲು ಸಂತ್ರಸ್ತರಿಗೆ ಕಂದಾಯ ಇಲಾಖೆ ನೋಟಿಸ್. ರಾತ್ರೋರಾತ್ರಿ ಕಾಳಜಿ ಕೇಂದ್ರದಿಂದ ತೆರಳು ಸಂತ್ರಸ್ತರಿಗೆ ನೋಟಿಸ್. ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್.ಎಸ್.ಚೆಟ್ಟಳ್ಳಿ (ಪೊನ್ನತ್ತ್ ಮೊಟ್ಟೆ) ಯಲ್ಲಿರುವ ಕಾಳಜಿ ಕೇಂದ್ರ. ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ಘಟನೆ. ಕಾಳಜಿ ಕೇಂದ್ರದಲ್ಲಿ ಇರುವ 30ಕ್ಕೂ ಹೆಚ್ಚು ಸಂತ್ರಸ್ತರು. ಶಾಲೆಯಿಂದ ತೆರಳಲು ಸಂತ್ರಸ್ತರಿಗೆ ನೋಟಿಸ್. ಸೂಕ್ತ ವ್ಯವಸ್ಥೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವವರೆಗೆ ಕಾಳಜಿ ಕೇಂದ್ರಬಿಟ್ಟು ತೆರಳಲ್ಲ ಎಂದು ಸಂತ್ರಸ್ತರು ಪಟ್ಟು. ಮಧ್ಯರಾತ್ರಿ ಕಂದಾಯ ಇಲಾಖೆಯಿಂದ ನೋಟಿಸ್. ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಯಲ್ಲಿ ಜೀವನ ನಡೆಸುತ್ತಿದ್ದ 07 ಕುಟುಂಬಗಳು. ಪೊನ್ನತ್ ಮೊಟ್ಟೆಯಲ್ಲಿ ಭೂಕುಸಿತದ ಆತಂಕದಲ್ಲಿದ್ದ ಕುಟುಂಬಗಳು. ಏಳು ಕುಟುಂಬಗಳನ್ನು ಅಧಿಕಾರಿಗಳೇ ಅಲ್ಲಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಕಂದಾಯ ಇಲಾಖೆಯ ನಿರ್ಧಾರಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
01:20 PM (IST) Jul 18
ಶಿರಾಡಿ ಘಾಟ್ ಬಳಿಕ ಚಾರ್ಮಾಡಿ ಘಾಟ್ ನಲ್ಲೂ ಸಂಚಾರ ಅಪಾಯ
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ರಸ್ತೆಯಲ್ಲಿ ಸಣ್ಣ ಬಿರುಕು ಕಂಡುಬಂದಿದೆ. ಘಾಟ್ ರಸ್ತೆಯ ಕಿರು ಸೇತುವೆ ಬಳಿ ರಸ್ತೆ ಕುಸಿದು ಬಿರುಕುಗೊಂಡಿದ್ದು, ಅಪಾಯಕಾರಿಯಾಗುವ ಮುನ್ಸೂಚನೆಯಿದೆ. ಭಾರೀ ಪ್ರಪಾತದ ಮೇಲ್ಭಾಗದಲ್ಲಿರೋ ಕಿರು ಸೇತುವೆಯ ರಸ್ತೆ. ಸೇತುವೆ ತಡೆಗೋಡೆ ಮತ್ತು ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲ್ಯಾಬ್ ಕುಸಿತವಾಗಿದೆ. ಸದ್ಯ ಬ್ಯಾರಿಕೇಡ್ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ನೋಡಿಕೊಳ್ಳಲಾಗುತ್ತಿದೆ. ಬ್ಯಾರಿಕೇಡ್ ಅಳವಡಿಸಿದ ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯಾದಗಿರಿ:
ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ಛಾಯಾ ಜಗವತಿಗೆ ಜಲಕಂಟಕದ ಭಯ ಶುರುವಾಗಿದೆ. ಕೃಷ್ಣೆಯ ಅಬ್ಬರಕ್ಕೆ ಛಾಯಾ ಭಗವತಿ ದೇವಸ್ಥಾನದ ದರ್ಶನಕ್ಕೆ ನಿರ್ಬಂಧ, ದೇವಸ್ಥಾನದೊಳಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಮುಂಜಾಗ್ರತೆ ವಹಿಸಿ ದೇವಸ್ಥಾನದೊಳಗೆ ತೆರಳಿ ದೇವರ ದರ್ಶನಕ್ಕೆ ಅವಕಾಶ ನಿಷೇಧ ಹೇರಲಾಗಿದೆ. ಮೆಟ್ಟಿಲುಗಳ ಮೇಲೆ ಮೂರ್ತಿ ಇಟ್ಟು ಅರ್ಚಕರಿಂದ ಪೂಜೆ ನೆರವೇರಿಸಲಾಗಿದ್ದು, ಭಕ್ರತು ಮೆಟ್ಟಿಲುಗಳ ಮೇಲೆ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ಚಾಮರಾಜನಗರ:
ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಕಳ್ಳ ದಾರಿ ಹಿಡಿದ ಪ್ರವಾಸಿಗರು. ಕಾವೇರಿ ನದಿಯಲ್ಲಿ ನೀರು ಹೆಚ್ಚಾದ ಹಿನ್ನೆಲೆ. ಪ್ರವಾಸಿತಾಣಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತ. ಚಾಮರಾಜನಗರ ಜಿಲ್ಲಾಡಳಿತದಿಂದ ಹೋಗೆನಕಲ್, ಭರಚುಕ್ಕಿ ಹಾಗೂ ವೆಸ್ಲಿ ಸೇತುವೆಗೆ ನಿರ್ಬಂಧ. ನಿರ್ಬಂಧದ ನಡುವೆ ಕಳ್ಳ ದಾರಿಯಲ್ಲಿ ಪ್ರವಾಸಿತಾಣಕ್ಕೆ ತೆರಳುತ್ತಿರುವ ಪ್ರವಾಸಿಗರು. ಕೊಳ್ಳೆಗಾಲದ ಬೂದಗಟ್ಟದೊಡ್ಡಿ ಅರಣ್ಯ ಪ್ರದೇಶದಿಂದ ಭರಚುಕ್ಕಿಗೆ ಅತಿಕ್ರಮ ಪ್ರವೇಶ. ಜಲಪಾತದ ತುದಿಗೆ ಹೋಗಿ ನಿಲ್ಲುತ್ತಿರುವ ಪ್ರವಾಸಿಗರು. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.
01:15 PM (IST) Jul 18
ಮಕ್ಕಳ ಭಿಕ್ಷಾಟನೆ ತಡೆಗೆ ಸರ್ಕಾರ ಬದ್ಧ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಗೃಹಸಚಿವ ಜಂಟಿ ಸುದ್ದಿಗೋಷ್ಟಿ ನಡೆಸಿ, ಮಕ್ಕಳ ಭಿಕ್ಷಾಟನೆ ಸಂಬಂಧ ಮಾತನಾಡಿದರು. ಐದನೇ ಬಾರಿ ಸಭೆ ಕರೆದು ಭಿಕ್ಷಾಟನೆ ನಿಲ್ಲಿಸಲು ಕ್ರಮ. ಮೂರು ರೀತಿ ಭಿಕ್ಷುಕರು ಕಾಣ್ತಾರೆ. ವಯೋ ಸಹಜ, ಮಾನಸಿಕ ಅಸ್ವಸ್ಥರು, ತೃತಿಯ ಲಿಂಗಿಗಳು ಹಾಗೂ ಮಕ್ಕಳ ಭಿಕ್ಷಾಟನೆ ಕಂಡುಬರುತ್ತೆ. ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದು ಕಂಡುಬರ್ತಿದೆ. ಮಕ್ಕಳಿಗೆ ಮತ್ತು ಬರುವ ಅಂಶ ನೀಡಿ ತಾಯಿಯರಿಂದ ಭಿಕ್ಷೆ ಬೇಡುವುದು ಕಂಡುಬರ್ತಿದೆ. ಕಾರ್ಮಿಕ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. 80 ಮಕ್ಕಳನ್ನ ರಕ್ಷಿಸಿ ನಿರ್ಭಯ ಕೇಂದ್ರಕ್ಕೆ ಸೇರಿಸಲಾಗಿದೆ. ತಾಯಿ, ಮಗು ಸಂರಕ್ಷಣೆ ಮಾಡಿ, ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಕೊಡುವುದು. ನ್ಯಾಯಾಲಯದ ಸೂಚನೆ ಮೇರೆಗೆ ನಗರ ಪ್ರದೇಶಕ್ಕೆ ಸೀಮಿತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. 18 ವರ್ಷದ ಒಳಗಿನ 720 ಮಕ್ಕಳನ್ನ ಗುರ್ತಿಸಿ ಅವರನ್ನ ರಕ್ಷಣೆ ಮಾಡಿದ್ದೇವೆ. ಬೆಂಗಳೂರಿನ 8 ಡಿವಿಜನ್‌ಗಳಲ್ಲಿ ಎಸಿಪಿಗಳನ್ನ ನೇಮಕ ಮಾಡಲಾಗಿದೆ. ಎಸಿಪಿಗಳು ಮಕ್ಕಳನ್ನ ರಕ್ಷಿಸಿ, ಮಕ್ಕಳ ರಕ್ಷಣಾ ಕೇಂದ್ರಕ್ಕೆ ಸೇರಿಸಬೇಕು ಎಂಬ ಆದೇಶ ನೀಡಲಾಗಿದೆ. ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ತರಲು ಸಮಾಜ ಕಲ್ಯಾಣ ಇಲಾಖೆ ಸಂಪೂರ್ಣ ಬದ್ದವಾಗಿದೆ. ತಾಯಿ, ಮಗು ಬೀದಿಯಲ್ಲಿ ಭಿಕ್ಷೆ ಬೇಡುವುದು ತಪ್ಪಿಸಬೇಕಿದೆ. ಇದಕ್ಕೆ ಬೇಕಾದ ವಾಹನ, ಊಟ ಎಲ್ಲಾ ಆರ್ಥಿಕ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.
01:11 PM (IST) Jul 18
ಮತ್ತೆ ಸಿಎಂ ಆಗಬೇಕೆಂಬ ಹುಚ್ಚಿಲ್ಲ, ಆದರೆ ಜನರಿಗಾಗಿ ಅಧಿಕಾರಕ್ಕೆ ಬರಬೇಕು: ಎಚ್‌ಡಿಕೆ
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಒಂದು ವಾರದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ಆರೋಗ್ಯ ಸಮಸ್ಯೆ ಆಗಿತ್ತು. ಹೆಮ್ಮಿಗೆಪುರ ವಾರ್ಡ್ ವಿಚಾರದಲ್ಲಿ ನೀವೆಲ್ಲಾ ಒಗ್ಗಟ್ಟಾಗಿದೀರ. 2006 ರಲ್ಲಿ ನಾನು ಸಿಎಂ ಆದಾಗ 198 ವಾರ್ಡ್ ಮಾಡಲು ಕಾರಣ ಇತ್ತು. ಹಣದ ಬಳಕೆ ಮಾಡಬೇಕು ಎಂಬ ನಿಟ್ಟಿನಲ್ಲಿ ಮೈಸೂರು-ಬೆಂಗಳೂರು ಅಭಿವೃದ್ಧಿ ಮಾಡಲು ಮುಂದಾದೆ. ಹಾಗಾಗಿ 98 ವಾರ್ಡ್ ಗಳನ್ನು 198 ವಾರ್ಡ್ ಮಾಡಿದೆ. ಮುಂದೆ ಬಂದ ಜನಪ್ರತಿನಿಧಿಗಳು ಹಣ ಲೂಟಿ ಮಾಡಿದ್ರು. ಕೆಲಸ ಮಾಡದೇ ಬಿಲ್ ಮಾಡಿಕೊಂಡ್ರು. ನಿತ್ಯ 40 ಪರ್ಸೆಂಟ್ ದು ಮಾಧ್ಯಮದಲ್ಲಿ ಬರ್ತಾನೇ ಇವೆ. ಇಂದು ಜಿಎಸ್ ಟಿ ಏರಿಕೆ ಮಾಡಿದ್ದಾರೆ. ಹಾಲು, ಮೊಸರು ಹೀಗೆ ಜನರು ಉಪಯೋಗಿಸುವ ವಸ್ತು ಪದಾರ್ಥಗಳ ಮೇಲೆ ಏರಿಕೆ ಮಾಡಿದ್ದಾರೆ. ಹೆಮ್ಮಿಗೆ ಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ. ನಮ್ಮ ಪಕ್ಷ ಅಪಪ್ರಚಾರ ಮಾಡಿದ್ರು ಅದರಿಂದ ನಾವು ಸೋಲಿಸಿದ್ವಿ. ಕುತಂತ್ರ ಮಾಡಿ ನಮ್ಮನ್ನು ಸೋಲಿಸಲು ಮುಂದಾದರು. ಜೆಡಿಎಸ್ ನ ಪ್ರಾಮಾಣಿಕವಾಗಿ ಗೆಲ್ಲಿಸಲು ಶ್ರಮ ಪಡಬೇಕಾಗಿದೆ. ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ಮತ್ತೆ ಸಿಎಂ ಆಗಬೇಕು ಅನ್ನೋ ಹುಚ್ಚಿಲ್ಲ. ಆದರೆ ಬಡವರಿಗಾಗಿ ನಾವು ಅಧಿಕಾರಕ್ಕೆ ಬರಬೇಕು. ಪ್ರತಿವಾರ್ಡ್ ನಲ್ಲೂ ಇಂಗ್ಲೀಷ್ ಶಾಲೆ ತೆರೆಯಬೇಕು. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗ್ತಾ ಇದೆ. ಅದಕ್ಕೆ ಹೇಳೋವ್ರು ಕೇಳೋವ್ರು ಯಾರೂ ಇಲ್ಲ ಅನ್ಸುತ್ತೆ. ನಾನು ಎರಡು ಬಾರಿ ಸಿಎಂ ಆಗಿದ್ದು ಕೂಡ ಬೇರೆಯವರ ಹಂಗಲ್ಲಿ. ಹಾಗಾಗಿ ನಮಗೆ ಸ್ವತಂತ್ರ ಸರ್ಕಾರ ಬೇಕಿದೆ. ಯಶವಂತಪುರ ಕ್ಷೇತ್ರವನ್ನು ಗೆಲ್ಲಿಸಬೇಕು ನೀವು ಎಂದು ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.
12:26 PM (IST) Jul 18
ಚಿಕ್ಕಮಗಳೂರಿನಲ್ಲಿ ಸೇತುವೆ ಕುಸಿತ
ಮಲೆನಾಡಿನಲ್ಲಿ ಮಳೆ ಬಿಡುವು ನೀಡಿದ್ರು ಅನಾಹುತ ಮಾತ್ರ ನಿಲ್ಲುತ್ತಿಲ್ಲ. ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕೊಗ್ರೆ ಸೇತುವೆ ಕುಸಿತಗೊಂಡಿದ್ದು ಸಂಚಾರ ಬಂದಾಗಿದೆ. ಶೃಂಗೇರಿಯಿಂದ ಹೊರನಾಡು ಸಂಪರ್ಕಿಸುವ ಬೈಪಾಸ್ ರಸ್ತೆ ಇದಾಗಿದ್ದು, ಮಳೆ ನಿಂತ ನಂತರ ಸೇತುವೆ ಕುಸಿದಿದೆ. ಕಳೆದ ವರ್ಷವೂ ಕುಸಿತವಾಗಿದ್ದ ಸೇತುವೆ. ತಾತ್ಕಾಲಿಕವಾಗಿ ಲಘುವಾಹನಕ್ಕೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅಧಿಕ ಮಳೆಯಿಂದ ಸೇತುವೆ ಕುಸಿತವಾಗಿದೆ. ಕೊಗ್ರೆ ಹೊರನಾಡು ಮಧ್ಯೆ ಹಲವು ಗ್ರಾಮಗಳ ಜನ್ರಿಗೆ ಸಮಸ್ಯೆ ತಂದಿಟ್ಟ ಸೇತುವೆ ಕುಸಿತವಾಗಿದ್ದು, ಆಟೊ ಬೈಕ್ ಕಾಲ್ನಡಿಗೆ ಕಿರು ಸೇತುವೆ ಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಕೊಗ್ರೆ ಸೇತುವೆ.
12:23 PM (IST) Jul 18
ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಈ ದಿನ ಶಿವಮೊಗ್ಗ ಜಿಲ್ಲೆಯ ಜಲಾಶಯಗಳಲ್ಲಿ ಎಷ್ಟು ನೀರಿನ ಒಳಹರಿವಿದೆ ಮತ್ತು ಒಟ್ಟೂ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ತುಂಗಾ ಜಲಾಶಯ:
ದಿನಾಂಕ: 18/07/2022
ಇಂದಿನ ಮಟ್ಟ: 588.02 mtr
ಗರಿಷ್ಠ ಮಟ್ಟ : 588.24 Mtr ಒಳಹರಿವು: 44497 cusecs
ಹೊರಹರಿವು: 40678 cusecs
ನೀರು ಸಂಗ್ರಹ: 3.112 Tmc
ಸಾಮರ್ಥ್ಯ: 3.24 Tmc ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 Mtr
ಭದ್ರಾ ಜಲಾಶಯ:
ದಿನಾಂಕ: 18/07/2022
ಇಂದಿನ ಮಟ್ಟ: 182'3½" ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 33891 cusecs
ಹೊರಹರಿವು: 33301 cusecs
ನೀರು ಸಂಗ್ರಹ: 66.939 Tmc
ಸಾಮರ್ಥ್ಯ: 71.535 Tmc ಕಳೆದ ವರ್ಷ ಈ ದಿನದ ನೀರು ಸಂಗ್ರಹ 163'0" ಅಡಿ
ಲಿಂಗನಮಕ್ಕಿ ಜಲಾಶಯ: ದಿನಾಂಕ: 18/07/2022
ಇಂದಿನ ಮಟ್ಟ: 1795.60 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 41604 cusecs
ಹೊರಹರಿವು: 4799.17
ನೀರು ಸಂಗ್ರಹ: 85.38 TMC
ಸಾಮರ್ಥ್ಯ: 151.64 Tmc ಕಳೆದ ವರ್ಷ ಈ ದಿನ ನೀರು ಸಂಗ್ರಹ: 1791.20 ಅಡಿ
12:21 PM (IST) Jul 18
ಮಳೆಯಿಂದ ರಸ್ತೆ ಹಾನಿ, ಬೆಳಗಾವಿಯಲ್ಲಿ ಪ್ರತಿಭಟನೆ
ಮಳೆಗೆ ರಸ್ತೆಗಳು ಹಾಳು, ಬೈಲಹೊಂಗಲ ತಾಲೂಕಾಡಳಿತ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಬೈಲಹೊಂಗಲ-ಧಾರವಾಡ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಬೈಲಹೊಂಗಲ ಪಟ್ಟಣದ ನಿವಾಸಿಗಳಿಂದ ರಸ್ತೆ ತಡೆ ಅಭಿಯಾನ ಆರಂಭವಾಗಿದ್ದು, ಬೈಲಹೊಂಗಲ ಪುರಸಭೆಯ 27 ವಾರ್ಡ್‌ಗಳಲ್ಲಿ ರಸ್ತೆಗಳು ಹಾಳಾಗಿದ್ದು ದುರಸ್ಥಿ ಕಾರ್ಯ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಕಳಪೆ ಕಾಮಗಾರಿಯಿಂದ ಮಳೆಗೆ ರಸ್ತೆಗಳು ಹಾಳಾಗಿವೆ. ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮೇಲೆ ಕುಳಿತು ಸ್ಥಳೀಯ ಮಹಿಳೆಯರು, ನಾಗರಿಕರಿಂದ ಪ್ರತಿಭಟನೆ ನಡೆಯುತ್ತಿದೆ. ರಸ್ತೆ ತಡೆಯಿಂದ ಟ್ರಾಫಿಕ್ ಸಮಸ್ಯೆಯಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.
12:14 PM (IST) Jul 18
ಪೋಷಕರು ಗಾಬರಿಯಾಗಬೇಡಿ: ಬಾಂಬ್ ಬೆದರಿಕೆಗೆ ಡಿಕೆಶಿ ಪ್ರತಿಕ್ರಿಯೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಡೆತನದ ಖಾಸಗಿ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಇಂದು ಮುಂಜಾನೆ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಇಂದು ಬೆಳಗ್ಗೆ ನಮ್ಮ ಶಾಲೆಯಲ್ಲಿ ಸ್ಟಾಫ್, ಪ್ರಿನ್ಸಿಪಲ್ ಎಲ್ಲ ಶಾಲೆಗೆ ಹೋಗಿದ್ದಾರೆ. ಆಗ ಬಾಂಬ್ ಇಟ್ಟಿರೋದಾಗಿ ಮೇಲ್ ಬಂದಿದೆ. ಬೆದರಿಕೆ ಬಗ್ಗೆ ತಕ್ಷಣ ನಮಗೆ ತಿಳಿಸಿದ್ರು. ಸ್ಕೂಲ್ ಕ್ಯಾಂಪಸ್ ನಲ್ಲಿ ಇರೋರನ್ನ ಶಿಪ್ಟ್ ಮಾಡಿದೆವು. ಕೂಡಲೆ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದೆವು. 70% ತಾಪಸಣೆ ಮಾಡಿದ್ದಾರೆ ಇನ್ನೂ, ತಪಾಸಣೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಪೋಷಕರು ಗಾಬರಿ ಆಗೋದು ಬೇಡ. ನಮ್ಮಲ್ಲಿ ಹೈ ಸೆಕ್ಯೂರಿಟಿ ಇದೆ. ಪ್ರತಿ ಮೂಮೆಂಟ್ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಿದೆ. ನಿನ್ನೆ ಒಂದು ಎಗ್ಸಾಂ ಇತ್ತು. ಹಾಗಾಗಿ ಬೇರೆಯವರು ಬರಲಿಕ್ಕೆ ಅವಕಾಶ ನೀಡಲಾಗಿತ್ತು. ಸಮಸ್ಯೆ ಆಗೋದು ಬೇಡ ಅಂತ ಪೊಲೀಸರಿಗೆ ತಿಳಿಸಿದೆವು. ಅವರು ನಾವೇ ಎಲ್ಲಾ ನೋಡಿಕೊಳ್ಳೋದಾಗಿ ಹೇಳಿದ್ದಾರೆ. ಹಾಗಾಗಿ ನಾನು ತಡವಾಗಿ ಮತದಾನಕ್ಕೆ ಆಗಮಿಸಿದ್ದೇನೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.
11:55 AM (IST) Jul 18
ಮಳೆ ಕಡಿಮೆಯಾದರೆ ಶಿರಾಡಿ ಘಾಟ್ ಮತ್ತೆ ಸಂಚಾರಕ್ಕೆ ಮುಕ್ತ
ಕಳೆದೆರಡು ವಾರಗಳಿಂದ ಹಾಸನ ಜಿಲ್ಲೆಯಲ್ಲಿ ವರುಣನ ಅಬ್ಬರ ಹಿನ್ನೆಲೆ, ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ. ಜು.10 ರಿಂದ ಜು.16 ರವರೆಗೆ ವಾಡಿಕೆ ಮಳೆ 56 ಮಿಮಿ ಆಗಬೇಕಿತ್ತು, 170 ಮಿಮಿ ಮಳೆಯಾಗಿದೆ. ಶೇ.202 ರಷ್ಟು ಹೆಚ್ಚು ಮಳೆಯಾಗಿದೆ. ಅರಕಲಗೂಡು, ಹೊಳೆನರಸೀಪುರ, ಆಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಜೂ.1 ರಿಂದ ಇಲ್ಲಿಯವರೆಗೂ 421 ಮನೆಗಳಿಗೆ ಹಾನಿಯಾಗಿದೆ. 28 ಮನೆಗಳು ಸಂಪೂರ್ಣ ಕುಸಿದಿದೆ, 218 ಮನೆಗಳಿಗೆ ಭಾಗಶಃ ಹಾನಿಯಾಗಿದೆ, 175 ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಇವರೆಲ್ಲರಿಗೂ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಗಂಜಿ ಕೇಂದ್ರ ತೆರೆದಿಲ್ಲ. ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಿಗೆ ಹಾಳಾಗಿದೆ, ಅವುಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಎನ್‌ಎಚ್ 75 ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಎಲ್ಲಾ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಲಘು ವಾಹನಗಳನ್ನು ಚಾರ್ಮಡಿಘಾಟ್, ಸಂಪಾಜೆ ಮೂಲಕ ತೆರಳಲು ಸೂಚಿಸಿದ್ದೆವು. ಅದು ದೂರವಾಗುತ್ತಿರುವ ಕಾರಣ ನಿನ್ನೆ ಮತ್ತೆರಡು ಬದಲಿ ಮಾರ್ಗಗಳನ್ನು ಸೂಚಿಸಿದ್ದೇವೆ. ಕ್ಯಾನಹಳ್ಳಿ ಮೂಲಕ ಮತ್ತು ಕಾಡುಮನೆ ಮೂಲಕ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಮಳೆ ನಿರಂತರವಾಗಿ ಬರುತ್ತಿರುವುದರಿಂದ ದುರಸ್ತಿ ಕಾರ್ಯ ಕಷ್ಟವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮಳೆ ಕಡಿಮೆಯಾದರೆ ಇನ್ನೊಂದು ವಾರದಲ್ಲಿ ಶಿರಾಡಿ ಘಾಟ್ ಸಂಚಾರ ಆರಂಭಿಸುತ್ತೇವೆ. 224 ಹೆಕ್ಟೇರ್ ರಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಕಾಫಿ ಬೆಳೆಯೂ ಹಾನಿಯಾಗುತ್ತಿದೆ. ಕಾಫಿ ಮಂಡಳಿ ಅಧಿಕಾರಿಗಳಿಗೆ ವರದಿ ಕೊಡಲು ಹೇಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
11:50 AM (IST) Jul 18
ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೇರಿಕೆ ಕುರಿತಂತೆ ಕೇಂದ್ರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಲು, ಮೊಸರು, ಮೊಟ್ಟೆ, ಮೀನು, ಮಂಡಕ್ಕಿ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಮಾಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಬಡವರ ಮೇಲೆ ಯುದ್ಧ ಸಾರಿದೆ. ಮೊದಲೇ ನಿರುದ್ಯೋಗದಿಂದ ಕುಟುಂಬದ ಆದಾಯ ಕಡಿಮೆಯಾಗಿದೆ, ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಗಗನಕ್ಕೇರಿತ್ತು. ಇದೀಗ ಜಿಎಸ್‌ಟಿ ಹೇರಿಕೆ ಮಾಡುತ್ತಿವುದು ಬಡವರನ್ನು ಸುಲಿಗೆ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Scroll to load tweet…
ಬ್ರಾಂಡೆಡ್ ಅಲ್ಲದ ಪ್ಯಾಕ್ ಮಾಡಲಾಗಿರುವ ಅಕ್ಕಿ, ಗೋಧಿ, ಹಾಲು ಮೊಸರು, ಮಜ್ಜಿಗೆಯಂತಹ ದಿನಬಳಕೆಯ ವಸ್ತುಗಳ ಮೇಲೆ ನರೇಂದ್ರ ಮೋದಿ ಸ್ಕಾರ ಜಿಎಸ್‌ಟಿ ಹೇರಿರುವುದು ಬ್ರಾಂಡೆಡ್ ಕಂಪೆನಿಗಳ ಒತ್ತಡಕ್ಕೆ ಮಣಿದು ಎನ್ನುವುದು ಸ್ಪಷ್ಟ. ತಮ್ಮದು ಸೂಟ್ ಬೂಟ್ ಸರ್ಕಾರ ಎನ್ನುವುದನ್ನು ಮತ್ತೆ ಮತ್ತೆ ಅವರು ಸಾಬೀತುಪಡಿಸುತ್ತಿದ್ದಾರೆ, ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
Scroll to load tweet…
11:42 AM (IST) Jul 18
ರೈತರಿಗೆ ಬೇಗ ಮಳೆಹಾನಿ ಪರಿಹಾರ ನೀಡುತ್ತೇವೆ: ಆರ್ ಅಶೋಕ್
ಕಂದಾಯ ಸಚಿವ ಆರ್ ಅಶೋಕ್ ಅತೀವೃಷ್ಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಶೀಘ್ರ ಬೆಳೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಈಗಾಗಾಲೇ ನಾನು ಕೂಡ ಡಿಸ್ಯಾಸ್ಟರ್ ಮ್ಯಾನೇಜ್ಮೆಂಟ್ ಜೊತೆ ಚರ್ಚೆ ಮಾಡಿದ್ದೇನೆ. ಬೆಳೆ ಹಾನಿ ಪ್ರದೇಶ, ಮಳೆ ಹಾನಿ ಪ್ರದೇಶಗಳಿಗೆ ಎಲ್ಲಾ ಮಂತ್ರಿಗಳು ಭೇಟಿ ನೀಡಿದ್ದಾರೆ. ಸಿಎಂ ಕೂಡ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದಾರೆ. ಈ ಬಾರಿ ರೈತರಿಗೆ ನಷ್ಟವಾದ ಬೆಳೆಹಾನಿ ಪರಿಹಾರ ಕೊಡಲಾಗುವುದು. ಡಬಲ್ ಬೆನಿಫಿಟ್ ಬರುವ ರೀತಿ ಪ್ಲಾನ್ ಆಗಿದೆ. ಕಂದಾಯ ಹೊಸ ಯೋಜನೆ ರೂಪಿಸಿದೆ. ಕಾಂಗ್ರೆಸ್ ಕಾಲದಲ್ಲಿ ಗಂಜಿ ಕೇಂದ್ರ ಅಂತ ಮಾಡಿದ್ರು, ಈಗ ಅದರ ಬದಲು ಕಾಳಜಿ ಕೇಂದ್ರ ಅಂತ ಮಾಡಿದ್ದೇವೆ. ಆಗ ಅನ್ನ ಸಾಂಬಾರ್ ಕೊಡ್ತಿದ್ರು, ಈಗ ಚಪಾತಿ, ಮೊಟ್ಟೆ ಸೇರಿದಂತೆ ಪೌಷ್ಟಿಕ ಆರೋಗ್ಯ ಊಟ ನೀಡುತ್ತಿದ್ದೇವೆ. ಮನೆಗೆ ಹೋದಾಗ ಏನು ಇರಲ್ಲ ನೆಂದು ಹೋಗಿರಲಿದೆ. ಹಾಗಾಗಿ ಅವರಿಗೆ ಹತ್ತು ದಿನಕ್ಕೆ ಆಗುವ ಕಿಟ್ ಕೊಡಲಾಗುವುದು. ಕಾಳಜಿ ಕೇಂದ್ರಕ್ಕೆ ಬರಲು ಹಿಂಜರಿಯುವವರು ನೆಂಟರ ಮೆನೆಗೆ ಹೋಗ್ತಾರೆ. ಅವರಿಗೂ ಕಿಟ್ ಕೊಡುತ್ತೇವೆ. ಇನ್ನೂ ಮಳೆ ನಿಂತಿಲ್ಲ. ಮಳೆ ಸಂಪೂರ್ಣ ನಿಂತ ಬಳಿಕ ಸಂಪೂರ್ಣ ಸಮೀಕ್ಷೆ ಮಾಡಿ ವರದಿ ನೀಡ್ತೀವಿ. ರಾಜ್ಯ ಸರ್ಕಾರ ಪರಿಹಾರ ಹಣ ಕೊಟ್ಟುಬಿಡ್ತೀವಿ. ಬಳಿಕ ಕೇಂದ್ರದಿಂದ ಬರುವ ಹಣ ನಾವು ಬಳಕೆ ಮಾಡಿಕೊಳ್ತೀವಿ. ಅಂದಾಜು ಎಷ್ಟು ನಷ್ಟ ಆಗಿದೆ ಅನ್ನೋದು ಗೊತ್ತಿಲ್ಲ. ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ಅಶೋಕ್ ಹೇಳಿದ್ದಾರೆ.