ಗಡೀಪಾರಾದ ತಿಮರೋಡಿ ರಾಯಚೂರಿಗೆ ಬೇಡ, ಕಾಡಿಗೆ ಕಳುಹಿಸಿ ಎಂದು ಪ್ರತಿಭಟನೆ ಶುರುವಾಗಿದೆ. ಧರ್ಮಸ್ಥಳ ವಿರುದ್ದ ಬುರುಡೆ ಷಡ್ಯಂತ್ರ ರೂಪಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಹಲವೆಡೆಗಳಿಂದ ಪ್ರತಿಭಟನೆ ಬಿಸಿ ಹೆಚ್ಚಾಗತೊಡಗಿದೆ.

ವಿವಾದ, ಗೊಂದಲಗಳ ನಡುವೆಯೇ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದೆ. ಮೊದಲ ದಿನದಾಂತ್ಯಕ್ಕೆ ನಿರೀಕ್ಷಿತ 20 ಲಕ್ಷ ಜನರ ಬದಲು 2765 ಕುಟುಂಬಗಳ ಕೇವಲ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿದೆ. ಇಂಟರ್ನೆಟ್ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್ ಕೆಲಸ ಮಾಡದೇ ಇರುವುದು, ಮೊದಲ ದಿನ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಕಿಟ್ ವಿತರಣೆ ಆಗದ್ದು, ಕೆಲವು ಕಡೆ ಕಿಟ್ಗಳು ಸಂಜೆ ವೇಳೆಗೆ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್ಗಳು ದೊರೆತರೂ ಮೊಬೈಲ್ ನೆಟ್ವರ್ಕ್ ಕೈಕೊಟ್ಟಿದ್ದು, ಇವೆರಡೂ ಇದ್ದರೂ, ಗಣತಿದಾರರಿಗೇ ಆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಗಣತಿಗೆ ಅಡ್ಡಿಯಾಗಿದೆ ಎನ್ನಲಾಗಿದೆ.
ಗಡೀಪಾರಾದ ತಿಮರೋಡಿ ರಾಯಚೂರಿಗೆ ಬೇಡ, ಕಾಡಿಗೆ ಕಳುಹಿಸಿ ಎಂದು ಪ್ರತಿಭಟನೆ ಶುರುವಾಗಿದೆ. ಧರ್ಮಸ್ಥಳ ವಿರುದ್ದ ಬುರುಡೆ ಷಡ್ಯಂತ್ರ ರೂಪಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಹಲವೆಡೆಗಳಿಂದ ಪ್ರತಿಭಟನೆ ಬಿಸಿ ಹೆಚ್ಚಾಗತೊಡಗಿದೆ.
ಕಾರಲ್ಲ, ಸ್ಕೂಟರ್ ಮೇಲೆ 6 ಮಂದಿ ಪ್ರಯಾಣ, ಬೆಂಗಳೂರಲ್ಲಿ ಯುವಕರ ಹುಚ್ಚಾಟ ವರದಿಯಾದಿದೆ. ಸ್ಥಳೀಯರ ಮೊಬೈಲ್‌ನಲ್ಲಿ ದೃಶ್ಯ ಸೆರೆಯಾಗಿದೆ. ಈ ರೀತಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.
ಸಿಂಧನೂರಿನಲ್ಲಿ 11 ದಿನಗಳ ದಸರಾ ಉತ್ಸವಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ, ರೈತರು ಕಾಲಕ್ಕೆ ತಕ್ಕಂತೆ ಹೊಸ ಬೆಳೆಗಳಿಗೆ ಬದಲಾಗಬೇಕು ಎಂದು ಸಲಹೆ ನೀಡಿದ್ದು, ಈ ಬಾರಿ ಗ್ರಾಮೀಣ, ರೈತ, ಆರೋಗ್ಯ, ಶಿಕ್ಷಣ ಎಂದು ವಿನೂತನವಾಗಿ ಆಯೋಜಿಸಲಾಗಿದೆ.
vijayapura mango farmer ವಿಜಯಪುರದ ಪದವೀಧರ ಯುವ ರೈತ ನವೀನ ಮಂಗಾನವರ, ಥೈಲ್ಯಾಂಡ್ ಮೂಲದ ಮಾವನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ವರ್ಷಪೂರ್ತಿ ಇಳುವರಿ ನೀಡುವ ಈ ಮಾವಿಗೆ ನೇರ ಮಾರುಕಟ್ಟೆ ಸೃಷ್ಟಿಸಿಕೊಂಡು, ಸಚಿವರಿಂದ ಹಾಗೂ ಥಾಯ್ ರೈತರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಜಾತಿ ಜನಗಣತಿ ವಿಚಾರವಾಗಿ ಬಿಜೆಪಿಗೆ ತಿರುಗೇಟು ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಜಾತಿ ಗಣತಿ ಮಾಡಬೇಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲು ವಿಜಯೇಂದ್ರ ಗೆ ಸವಾಲು ಹಾಕಿದ್ದಾರೆ. ಇದು ಜಾತಿ ಗಣತಿಯಲ್ಲ, ಬದಲಿಗೆ ವೈಜ್ಞಾನಿಕ ಅಂಕಿ-ಅಂಶ ಸಂಗ್ರಹಿಸಲು ನಡೆಸುತ್ತಿರುವ ಸಮೀಕ್ಷೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಹೇಶ್ ಶೆಟಿ ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು, ನಿರೀಕ್ಷಣಾ ಜಾಮೀನಿಗೆ ಅರ್ಜಿ, ಶಾಂತಿ ಕದಡುವ ಪ್ರಯತ್ನ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಳಗಾವಿಗೆ ಗಡೀಪಾರು ಮಾಡಲು ಆದೇಶ ನೀಡಲಾಗಿದೆ. ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು?
ಮೈಸೂರಿನಲ್ಲಿ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಒತ್ತು ನೀಡಿದೆ.
ರುಡ್ಸೆಟ್ ಸಂಸ್ಥೆಯು ಗ್ರಾಮೀಣ ನಿರುದ್ಯೋಗಿ ಯುವತಿಯರಿಗಾಗಿ 30 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ನವೆಂಬರ್ 5 ರಿಂದ ಆಯೋಜಿಸಿದೆ. ಇದು ವಸತಿಯುತವಾಗಿದ್ದು, ಊಟ ಮತ್ತು ವಸತಿ ಉಚಿತ. 18-45 ವರ್ಷ ವಯಸ್ಸಿನ, ಕನ್ನಡ ಬಲ್ಲ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ. ಈ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತಗೊಳಿಸಲಾಗುವುದು.
ರೋಡ್, ರೋಡಲ್ಲಿ ರೀಲ್ಸ್ ಮಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದ ಯುವತಿ ಇದೀಗ ಸ್ಟಾರ್ ನಟಿ. ಎಂಥಾ ಗ್ಲಾಮರ್‌ಗೂ ಸೈ ಎಂದ ನಟಿ ಚಿತ್ರರಂಗದಲ್ಲಿ ಕಿಚ್ಚೆಬ್ಬಿಸಿದ್ದಾಳೆ. ಈ ನಟಿಗಾಗಿ ನಿರ್ದೇಶಕರು ಕಾಲ್‌ಶೀಟ್‌ಗೆ ವೇಟಿಂಗ್ ಮಾಡ್ತಿದ್ದಾರೆ. ಕನ್ನಡ ಡೈರೆಕ್ಟರ್ಸ್ ಕಾಯ್ತಿದ್ದಾರೆ.
ಕಲಾವಿದ ಭರತ್ ಭೂಪತಿ ಅವರು, ನಟ ಸುದೀಪ್ ಅವರ ನಿಧನರಾದ ತಾಯಿ ಸರೋಜಾ ಅವರ ಚಿತ್ರವನ್ನು ರಚಿಸಿದ್ದಾರೆ. ಈ ಚಿತ್ರದಲ್ಲಿ ತಾಯಿ ಮಗನ ಮಡಿಲಲ್ಲಿ ಮಲಗಿದ್ದು, ಇದನ್ನು ಸ್ವೀಕರಿಸಿದ ಸುದೀಪ್ ಅರೆಕ್ಷಣ ಭಾವುಕರಾದರು. ತಮ್ಮ ತಾಯಿಯ ಬಗ್ಗೆ ಸುದೀಪ್ ಹೊಂದಿದ್ದ ಪ್ರೀತಿ ಈ ಲೇಖನ ವಿವರಿಸುತ್ತದೆ.
ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸೋಗಿನಲ್ಲಿ ಬಂದು ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಓರ್ವ ಬಾಲಕ ಸೇರಿದಂತೆ ಇಬ್ಬರು ಸಿಕ್ಕಿಬಿದ್ದಿದ್ದು, ಅವರಿಂದ ಅಪಾರ ಪ್ರಮಾಣದ ಶ್ರೀಗಂಧದ ತುಂಡುಗಳ ವಶ.
Govt Spending ₹5 Lakh Per Bengaluru Pothole ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರ ₹750 ಕೋಟಿ ಮೀಸಲಿಟ್ಟಿದೆ. ಆದರೆ, ಪ್ರತಿ ಗುಂಡಿಗೆ ₹5 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂಬ ಲೆಕ್ಕಾಚಾರವು ಪಾರದರ್ಶಕತೆ ಮತ್ತು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
'ಕಾಂತಾರ: ಚಾಪ್ಟರ್ 1' ಟ್ರೇಲರ್, ದೈವದ ಮೂಲ, ಕಾಡಿನ ಜನರ ಹೋರಾಟ ಮತ್ತು ನಾಯಕ-ರಾಣಿಯ ಪ್ರೇಮಕಥೆಯ ಸುಳಿವು ನೀಡುತ್ತದೆ. ರಾಜ ಮತ್ತು ಕಾಡಿನ ಜನರ ನಡುವಿನ ಯುದ್ಧ, ದೈವದ ಪ್ರವೇಶ ಹಾಗೂ ಅದ್ಭುತ ದೃಶ್ಯ ವೈಭವವಿದೆ. ಇದರ ನಡುವೆ ಇತ್ತೀಚೆಗೆ ನಿಧನ ಹೊಂದಿದ ರಾಕೇಶ್ ಪೂಜಾರಿ ನಟನಾ ದೃಶ್ಯವೂ ಸದ್ದು ಮಾಡುತ್ತಿದೆ.
'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ ಅವರು ಬಾಡಿ ಷೇಮಿಂಗ್ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ದಪ್ಪ, ಸಣ್ಣ ಎಂದು ಟೀಕಿಸುವವರಿಗೆ, ನಮ್ಮ ದೇಹದ ಬಗ್ಗೆ ನಮಗೆ ಅರಿವಿದೆ ಮತ್ತು ನಮ್ಮ ಮನೆಯಲ್ಲೂ ಕನ್ನಡಿ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾಂತಾರ ಚಾಪ್ಟರ್ 1 ಚಿತ್ರದ ಬಜೆಟ್ 135 ಕೋಟಿ ಎಂದು ಹೇಳಲಾಗುತ್ತಿದ್ದು, ಚಿತ್ರದ ಪ್ರಮುಖ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?
ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ₹24 ಕೋಟಿ ವೆಚ್ಚದ ಎರಡು ಅತ್ಯಾಧುನಿಕ, ಕಂಪ್ಯೂಟರೀಕೃತ ಅಗ್ನಿಶಾಮಕ ವಾಹನಗಳು ಬಂದಿವೆ. ಈ ವಾಹನಗಳ ಆಗಮನದಿಂದ ವಿಮಾನ ನಿಲ್ದಾಣದ ಸುರಕ್ಷತಾ ಮಾನದಂಡಗಳು ಪೂರ್ಣಗೊಂಡಿದ್ದು, ಪರಿಸರ ಅನುಮತಿ ದೊರೆತ ತಕ್ಷಣ ಉದ್ಘಾಟನೆಗೆ ಸಿದ್ಧವಾಗಲಿದೆ.
ಬೆಂಗಳೂರಿನ ತೀವ್ರ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಗೆ ಪತ್ರ ಬರೆದಿದ್ದಾರೆ. ಇಬ್ಲೂರು ಜಂಕ್ಷನ್ ಬಳಿಯ ದಟ್ಟಣೆ ಕಡಿಮೆ ಮಾಡಲು, ಪೀಕ್ ಅವರ್ ನಲ್ಲಿ ವಿಪ್ರೋ ಕ್ಯಾಂಪಸ್ ಮೂಲಕ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಳಿದ್ದಾರೆ