11:39 PM (IST) Oct 18

Karnataka News Live 18th October: ಚಿಕ್ಕಮಗಳೂರು - ಭಾರೀ ಮಳೆ ನಡುವೆಯೂ ದೇವೀರಮ್ಮನ ಬೆಟ್ಟ ಹತ್ತಲು ಭಕ್ತರ ಸಜ್ಜು!

ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯ ಎಚ್ಚರಿಕೆಯ ನಡುವೆಯೂ, ಸಾವಿರಾರು ಭಕ್ತರು 3800 ಅಡಿ ಎತ್ತರದ ದೇವೀರಮ್ಮನ ಬೆಟ್ಟ ಹತ್ತಲು ಸಜ್ಜು ಸಂಭಾವ್ಯ ಅಪಾಯ ಹಿನ್ನೆಲೆ, ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಅಗ್ನಿಶಾಮಕ ಪೊಲೀಸ್ ಇಲಾಖೆ ಸನ್ನದ್ಧ

Read Full Story
11:03 PM (IST) Oct 18

Karnataka News Live 18th October: ದೀಪಾವಳಿ ಹಬ್ಬದ ಹೊತ್ತಲ್ಲೇ ಅಚ್ಚರಿ - ದೆಹಲಿಯಲ್ಲಿ ಚಿನ್ನದ ದರ ಭಾರೀ ಕುಸಿತ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ, ದೇಶಾದ್ಯಂತ ಬಂಗಾರಕ್ಕೆ ಬೇಡಿಕೆ ಹೆಚ್ಚಿದ್ದರೂ ದೆಹಲಿಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಶನಿವಾರ 10 ಗ್ರಾಂ ಚಿನ್ನದ ಬೆಲೆ 2,400 ರೂ. ಕಡಿಮೆಯಾಗಿ 1,32,400 ರೂ.ಗೆ ತಲುಪಿದ್ದು, ಇದು ಹಬ್ಬದ ಖರೀದಿದಾರರಿಗೆ ಸಮಾಧಾನ ತಂದಿದೆ. ಬೆಲೆ ಏರಿಳಿತಕ್ಕೆ ಕಾರಣವೇನು?.

Read Full Story
10:36 PM (IST) Oct 18

Karnataka News Live 18th October: ಉತ್ತರಕನ್ನಡ - ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ, ತಪ್ಪಿದ ಭಾರೀ ಅನಾಹುತ!

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ವಡ್ಡಿ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದೆ. ಬಳ್ಳಾರಿಯಿಂದ ಕುಮಟಾಕ್ಕೆ ತೆರಳುತ್ತಿದ್ದ ಬಸ್‌ನಲ್ಲಿದ್ದ ಚಾಲಕ, ನಿರ್ವಾಹಕ ಸೇರಿದಂತೆ 49 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story
09:59 PM (IST) Oct 18

Karnataka News Live 18th October: ಗಂಗಾವತಿ ಪ್ರಾಣೇಶ್ ತಾಯಿ ನಿಧನ, ಬದುಕು ಕಲಿಸಿದ ನನ್ನಮ್ಮ ಸೂರ್ತಿ ಎಂದ ಹಾಸ್ಯ ಭಾಷಣಕಾರ

ಗಂಗಾವತಿ ಪ್ರಾಣೇಶ್ ತಾಯಿ ನಿಧನ, ಬದುಕು ಕಲಿಸಿದ ನನ್ನಮ್ಮ ಸೂರ್ತಿ ಎಂದ ಹಾಸ್ಯ ಭಾಷಣಕಾರ, ಕನ್ನಡ ಜನತೆಗೆ ಹಾಸ್ಯ ಉಣಬಡಿಸುತ್ತಾ ಅತ್ಯಂತ ಜನಪ್ರಿಯ ಹಾಸ್ಯ ಭಾಷಣಕಾರರಾಗಿ ಗುರುತಿಸಿಕೊಂಡಿರುವ ಪ್ರಾಣೇಶ್‌ಗೆ ಮಾತೃವಿಯೋಗ.

Read Full Story
09:46 PM (IST) Oct 18

Karnataka News Live 18th October: ನಿಮ್ಮ ಕುತ್ತಿಗೆಯ ಮೇಲೆ ಈ ಚಿಹ್ನೆಗಳು ಕಾಣಿಸಿಕೊಂಡರೆ, ಕಿಡ್ನಿಗೆ ಅಪಾಯ ಎಚ್ಚರ!

early signs kidney problem symptoms on face: ಇಂದಿನ ಜೀವನಶೈಲಿಯಿಂದ ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗುತ್ತಿವೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅದರ ಕೆಲವು ಆರಂಭಿಕ ಚಿಹ್ನೆಗಳು ಮುಖ ಮತ್ತು ಕುತ್ತಿಗೆಯ ಮೇಲೆ ಕಾಣಿಸಿಕೊಳ್ಳಬಹುದು. ಅವುಗಳನ್ನು ಗುರುತಿಸುವುದು ಹೇಗೆ ತಿಳಿಯಿರಿ

Read Full Story
09:19 PM (IST) Oct 18

Karnataka News Live 18th October: ಲೋಹದ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ತಿರುವು, ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ! ಕಾರಣವೇನು?

ಅಮೆರಿಕ-ಚೀನಾ ವ್ಯಾಪಾರ ಸಂಘರ್ಷದ ಆತಂಕ ಕಡಿಮೆಯಾಗಿದ್ದು ಮತ್ತು ಹೂಡಿಕೆದಾರರು ಲಾಭ ವಸೂಲಿಗೆ ಮುಂದಾಗಿದ್ದರಿಂದ ಬೆಳ್ಳಿಯ ಬೆಲೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಜಾಗತಿಕ ಆರ್ಥಿಕ ನೀತಿಗಳಿಂದಾಗಿ ದೀರ್ಘಾವಧಿಯಲ್ಲಿ ಈ ಲೋಹಗಳ ಮೌಲ್ಯ ಬಲವಾಗಿಯೇ ಉಳಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read Full Story
09:12 PM (IST) Oct 18

Karnataka News Live 18th October: ಖ್ಯಾತ ಸಾಹಿತಿ, ನಾಟಕಕಾರ ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ದುಬೈಯಲ್ಲಿ ಶ್ರದ್ಧಾಂಜಲಿ ಸಭೆ

ಖ್ಯಾತ ಬರಹಗಾರ ಮತ್ತು ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿಧನದ ಸ್ಮರಣಾರ್ಥ, ಧ್ವನಿ ಪ್ರತಿಷ್ಠಾನವು ದುಬೈಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಅವರ ಸಾಹಿತ್ಯ ಮತ್ತು ರಂಗಭೂಮಿ ಕೊಡುಗೆಗಳನ್ನು ಸ್ಮರಿಸಿ, ಅವರ ಅಪೂರ್ಣ ಕನಸುಗಳನ್ನು ಮುಂದುವರಿಸುವ ಸಂಕಲ್ಪ ಮಾಡಲಾಯಿತು.
Read Full Story
08:20 PM (IST) Oct 18

Karnataka News Live 18th October: ಆರ್‌ಎಸ್‌ಎಸ್‌ ಬಿಸಿಬಿಸಿ ಚರ್ಚೆಗೆ ಕಿಚ್ಚು ಹಚ್ಚಿದ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ

ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಆರ್ ಎಸ್ ಎಸ್ ಬೆಂಬಲಿಸುವವರು ದೇಶ ವಿರೋಧಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ನವರು ಗಾಂಧಿ, ಬಸವಣ್ಣ, ಅಂಬೇಡ್ಕರ್, ರಾಷ್ಟ್ರ ಧ್ವಜವನ್ನು ಒಪ್ಪುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

Read Full Story
08:05 PM (IST) Oct 18

Karnataka News Live 18th October: ಟ್ರಾಫಿಕ್ ಪೊಲೀಸರಿಗೆ ನೂತನ ಬೈಕ್ ವಿತರಿಸಿದ ಗೃಹ ಸಚಿವ ಪರಮೇಶ್ವರ್

ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹೋಂಡಾ ಇಂಡಿಯಾ ಫೌಂಡೇಶನ್ ನೀಡಿದ 50 ಗಸ್ತು ವಾಹನಗಳನ್ನು ಹಸ್ತಾಂತರಿಸಿದರು. ಈ ವೇಳೆ, ಬೆಂಗಳೂರಿನ ಸಂಚಾರ ವ್ಯವಸ್ಥೆ, ಹೊಸ 'ಬಿಟಿಪಿ ಅಸ್ತ್ರಂ ಇ-ಆ್ಯಕ್ಸಿಡೆಂಟ್' ಆವಿಷ್ಕಾರ, ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಬಗ್ಗೆ ಮಾತನಾಡಿದರು.

Read Full Story
07:43 PM (IST) Oct 18

Karnataka News Live 18th October: ಡಿಸಿಎಂ ಡಿಕೆಶಿ ಜೊತೆಗೆ ಸಭೆ - ಗುತ್ತಿಗೆದಾರರ ಹೋರಾಟಕ್ಕೆ ಜಯ, ಶೇ.10 ಎಫ್‌ಡಿಆರ್ ವಾಪಸ್ಸು ಕೊಡುವ ಭರವಸೆ

ಗುತ್ತಿಗೆದಾರರ ಸಂಘದ ತೀವ್ರ ಒತ್ತಡದ ನಂತರ, ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿ ಡಿಸೆಂಬರ್ ಒಳಗೆ ಬಿಬಿಎಂಪಿ ವ್ಯಾಪ್ತಿಯ 10% ಎಫ್‌ಡಿಆರ್ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಾಕಿ ಹಣ ಬಿಡುಗಡೆ ಮತ್ತು ಟೆಂಡರ್ ಪ್ಯಾಕೇಜ್ ಸಿಸ್ಟಮ್ ಬಗ್ಗೆಯೂ ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

Read Full Story
07:01 PM (IST) Oct 18

Karnataka News Live 18th October: ಬೆಂಗಳೂರು ಪೊಲೀಸರಿಗೆ ಸರ್ಕಾರದಿಂದ ಮತ್ತಷ್ಟು ಬಲ, ಅಪಘಾತದ ಬಗ್ಗೆ ತಿಳಿಯಲು ಅಸ್ತ್ರಂ ಆ್ಯಪ್ ಬಿಡುಗಡೆ

ಬೆಂಗಳೂರು ನಗರದ ಸಂಚಾರ ನಿರ್ವಹಣೆ ಸುಧಾರಿಸಲು, ಟ್ರಾಫಿಕ್ ಪೊಲೀಸರಿಗೆ 50 ಹೊಸ ಗಸ್ತು ಬೈಕ್‌ಗಳನ್ನು ವಿತರಿಸಲಾಗಿದೆ. ಇದರೊಂದಿಗೆ, ಸಾರ್ವಜನಿಕರು ಅಪಘಾತಗಳನ್ನು ವರದಿ ಮಾಡಲು 'ಅಸ್ತ್ರಂ' ಎಂಬ ಹೊಸ ಮೊಬೈಲ್ ಆಪ್ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬಿಡುಗಡೆ ಮಾಡಿದ್ದಾರೆ. 

Read Full Story
06:59 PM (IST) Oct 18

Karnataka News Live 18th October: ತುಮಕೂರು - 4 ಕಿಮೀ ಉದ್ದ, 5 ಸಾವಿರ ಕಾರ್ಯಕರ್ತರು, ಸರ್ಕಾರಕ್ಕೆ ಸವಾಲು ಹಾಕಿ ಆರೆಸ್ಸೆಸ್ ಪಥಸಂಚಲ!

ashtriya Swayamsevak Sangh Tumkur: ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳ ನಿಷೇಧದ ಚರ್ಚೆಯ ನಡುವೆಯೇ, ತುಮಕೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಬೃಹತ್ ಪಥಸಂಚಲನ ನಡೆಸಿತು. 4 ಕಿಮೀ ಉದ್ದ, 5 ಸಾವಿರ ಕಾರ್ಯಕರ್ತರು, ಸರ್ಕಾರಕ್ಕೆ ಸವಾಲು ಹಾಕಿ ಆರೆಸ್ಸೆಸ್ ಪಥಸಂಚಲ!

Read Full Story
06:20 PM (IST) Oct 18

Karnataka News Live 18th October: ಶಿಕ್ಷಕರ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್, ಸರ್ಕಾರದಿಂದ ದೀಪಾವಳಿಗೆ ಭರ್ಜರಿ ಗಿಫ್ಟ್!

Government teacher jobs in Karnataka: ಶಿಕ್ಷಣ ಇಲಾಖೆಯು ಶಿಕ್ಷಕರ ಅರ್ಹತಾ ಪರೀಕ್ಷೆಗೆ (TET) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 23 ರಿಂದ ನವೆಂಬರ್ 9ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆಯು ಡಿಸೆಂಬರ್ 7 ರಂದು ನಡೆಯಲಿದೆ..

Read Full Story
06:20 PM (IST) Oct 18

Karnataka News Live 18th October: ಅತ್ಯುತ್ತಮ ಖಳನಟಿ ಪ್ರಶಸ್ತಿ ಪಡೆದ Brahmagantu ಸೌಂದರ್ಯ ರಿಯಲ್​ ಫ್ಯಾಮಿಲಿ ಜೊತೆ ಕಾಣಿಸಿಕೊಂಡಾಗ

'ಬ್ರಹ್ಮಗಂಟು' ಧಾರಾವಾಹಿಯ ಖಳನಟಿ ಸೌಂದರ್ಯ ಪಾತ್ರಧಾರಿ ಪ್ರೀತಿ ಶ್ರೀನಿವಾಸ್, ಇತ್ತೀಚೆಗೆ ಅತ್ಯುತ್ತಮ ಖಳನಟಿ ಪ್ರಶಸ್ತಿ ಪಡೆದಿದ್ದಾರೆ. ತೆರೆಯಲ್ಲಿ ಮಕ್ಕಳನ್ನು ದ್ವೇಷಿಸುವ ಇವರು, ನಿಜ ಜೀವನದಲ್ಲಿ ಓರ್ವ ಮಗನ ತಾಯಿಯಾಗಿದ್ದು, ಹಲವು ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
Read Full Story
06:11 PM (IST) Oct 18

Karnataka News Live 18th October: ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ ಗುಜರಾತ್ ಉದ್ಯಮಿ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆ

ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ ಗುಜರಾತ್ ಉದ್ಯಮಿ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆ, ಈ ಉದ್ಯಮಿ ಕೇರಳಕ್ಕೆ ವ್ಯವಹಾರ ಸಲುವಾಗಿ ತೆರಳಿದ್ದ, ಬಳಿಕ ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ, ಇದೀಗ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆಯಾಗಿ ರೋಚಕ ಘಟನೆ ಬಹಿರಂಗವಾಗಿದೆ.

Read Full Story
05:30 PM (IST) Oct 18

Karnataka News Live 18th October: ಮರ್ಯಾದೆ ಅನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ; ಸುದೀಪ್​ ಕೆಂಡಾಮಂಡಲ- Bigg Boss ಸ್ಪರ್ಧಿಗಳಿಗೆ ಕ್ಲಾಸ್​

ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ, ಅಶ್ವಿನಿ ಮತ್ತು ಜಾನ್ವಿ ನಡುವೆ ಮಧ್ಯರಾತ್ರಿ ನಡೆದ ಜಗಳ ವೈಯಕ್ತಿಕ ನಿಂದನೆಯ ಹಂತ ತಲುಪಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 'ಮರ್ಯಾದೆ ಯಾರ ಅಪ್ಪನ ಆಸ್ತಿನೂ ಅಲ್ಲ' ಎಂದಿದ್ದಾರೆ. 

Read Full Story
05:30 PM (IST) Oct 18

Karnataka News Live 18th October: ಸೀನಿಯರ್ ಪ್ರೀತಿಸುವಂತೆ ಕಿರುಕುಳ, ಬೆಂಗಳೂರಿನಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್ ನೇಣಿಗೆ ಶರಣು!

ಬೆಂಗಳೂರಿನಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್, ಸೀನಿಯರ್ ವಿದ್ಯಾರ್ಥಿ ಪ್ರೀತಿಸುವಂತೆ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ತನ್ನ ಪಿಜಿಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ಮೂಲದ ಯುವತಿಯ ಪೋಷಕರು ಕೇರಳ ಮೂಲದ ಯುವಕ ರೀಫಾಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

Read Full Story
05:14 PM (IST) Oct 18

Karnataka News Live 18th October: ಮಸೀದಿಯ ಗಂಧ ಮಹೋತ್ಸವದಲ್ಲಿ ಪೊಲೀಸರ ಮೇಲೆ ಹಣ ಎರಚಿ ಸನ್ಮಾನ! ವಿಡಿಯೋ ವೈರಲ್

Channapatna mosque controversy: ಚನ್ನಪಟ್ಟಣದ ಮಸೀದಿಯೊಂದರಲ್ಲಿ ನಡೆದ ಗಂಧ ಮಹೋತ್ಸವದಲ್ಲಿ, ಪೊಲೀಸ್ ಸಿಬ್ಬಂದಿಯ ಮೇಲೆ ಹಣದ ಮಳೆ ಸುರಿಸಿದ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರಿ ನೌಕರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ತೀವ್ರ ಚರ್ಚೆ.. 

Read Full Story
05:11 PM (IST) Oct 18

Karnataka News Live 18th October: ವಾರದ ಭವಿಷ್ಯ; ಹಂಸ ರಾಜಯೋಗದಿಂದ ಬೆಳಗಲಿದೆ 5 ರಾಶಿಗಳ ಅದೃಷ್ಟ, ಸಂಸಾರದಲ್ಲಿ ಸುಖ, ಸಂಪತ್ತು

Weekly Horoscope Tarot Reading 20 to 26 October 2025: ಹಂಸ ರಾಜಯೋಗ ಸೃಷ್ಟಿಯಾಗಿದ್ದು, ಇದು ಆರ್ಥಿಕ ಲಾಭ ಮತ್ತು ಸಾಂಸಾರಿಕ ಸುಖಕ್ಕೆ ಕಾರಣವಾಗಲಿದೆ. ಈ ಯೋಗದಿಂದ ವಿಶೇಷವಾಗಿ 5 ರಾಶಿಗಳಿಗೆ ಅದೃಷ್ಟ ಒಲಿಯಲಿದ್ದು, ಈ ಲೇಖನವು ಎಲ್ಲಾ 12 ರಾಶಿಗಳ ಮೇಲಿನ ಇದರ ಪ್ರಭಾವವನ್ನು ವಿವರಿಸುತ್ತದೆ.

Read Full Story
04:34 PM (IST) Oct 18

Karnataka News Live 18th October: ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುವವರು ಸಂಸ್ಕೃತಿ ರಕ್ಷಕರಾ? ಆರೆಸ್ಸೆಸ್ ವಿರುದ್ಧ ಯತೀಂದ್ರ ವಾಗ್ದಾಳಿ!

ತುಮಕೂರಿನಲ್ಲಿ ಮಾತನಾಡಿದ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಆರೆಸ್ಸೆಸ್ ಒಂದು ನೋಂದಣಿ ಆಗದ ರಾಜಕೀಯ ಸಂಘಟನೆ ಎಂದು ವಾಗ್ದಾಳಿ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆಗೆ ಬಂದಿರುವ ಜೀವ ಬೆದರಿಕೆಯನ್ನು ಖಂಡಿಸಿದರು ತಮ್ಮನ್ನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂಬ ಹೇಳಿಕೆಗೆ ವೈಯಕ್ತಿಕ ಅಭಿಪ್ರಾಯ ಎಂದರು.

Read Full Story