Asianet Suvarna News Asianet Suvarna News

ಚುನಾವಣೆ ಅಂದ್ರೆ ಶಾಸಕರಿಂದ ಕೋಟಿ ಖರ್ಚು, ವೈದ್ಯಕೀಯ ವೆಚ್ಚ ಮಾತ್ರ ಸರ್ಕಾರಕ್ಕೆ ಶಿಫ್ಟು!

ಚುನಾವಣೆ ಸಮಯದಲ್ಲಿ ಕೋಟಿಗಟ್ಟಲೆ ಖರ್ಚು ಮಾಡುವ ಶಾಸಕರು, ಕೆಲವೇ ಲಕ್ಷ ರೂಪಾಯಿಗಳ ವೈದ್ಯಕೀಯ ವೆಚ್ಚಕ್ಕೆ ಸರ್ಕಾರವನ್ನೇ ಅವಲಂಬಿಸಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡ ಮಾಹಿತಿಯಂತೆ, ಹಲವು ಶಾಸಕರು ತಮ್ಮ ಮತ್ತು ತಮ್ಮ ಕುಟುಂಬದ ವೈದ್ಯಕೀಯ ವೆಚ್ಚಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಸರ್ಕಾರದಿಂದ ಪಡೆದುಕೊಂಡಿದ್ದಾರೆ.

Karnataka mla medical expenses RTI Report  siddaramaiah government san
Author
First Published Sep 4, 2024, 1:25 PM IST | Last Updated Sep 4, 2024, 1:24 PM IST


ಬೆಂಗಳೂರು (ಸೆ.4): ಚುನಾವಣೆ ಟೈಮ್‌ನಲ್ಲಿ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುವ ಶಾಸಕರು, ಚುನಾವಣೆ ಗೆದ್ದ ಬಳಿಕ ಕೆಲ ಲಕ್ಷದಲ್ಲಿರುವ ವೈದ್ಯಕೀಯ ವೆಚ್ಚಕ್ಕಾಗಿ ಸರ್ಕಾರವನ್ನೇ ಅವಲಂಬಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ವಿಧಾನಸಭಾ ಸದಸ್ಯರ ವೈದ್ಯಕೀಯ ವೆಚ್ಚದ ಮಾಹಿತಿ ಆರ್‌ಐಟಿ ಮೂಲಕ ಬಹಿರಂಗವಾಗಿದೆ. ಚುನಾವಣೆಗಾಗಿ ಕೋಟಿ ಕೋಟಿ ಖರ್ಚು ಮಾಡುವ ಶಾಸಕರು, ವೈದ್ಯಕೀಯ ವೆಚ್ಚಕ್ಕೆ ಮಾತ್ರ ಸರ್ಕಾರದ ಮೇಲೆ ಅತಿಯಾಗಿ ಅವಲಂಬನೆಯಲ್ಲಿದ್ದಾರೆ. ಲಕ್ಷ ಲಕ್ಷ ವೈದ್ಯಕೀಯ ವೆಚ್ಚವನ್ನು ಶಾಸಕರು ಪಡೆದುಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಶಾಸಕರ ವೈದ್ಯಕೀಯ ವೆಚ್ಚದ ಮಾಹಿತಿ ಬಹಿರಂಗವಾಗಿದೆ. ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ ವೆಂಕಟೇಶ್ ಆರ್‌ಟಿಐ ಅಡಿ ಪಡೆದಿರುವ ಮಾಹಿತಿ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ವೈದ್ಯಕೀಯ ವೆಚ್ಚ ಪಡೆಯಲು ಇರುವ ಅವಕಾಶವನ್ನೇ ಬಳಸಿಕೊಂಡು ಶಾಸಕರು ಲಕ್ಷಾಂತರ ರೂಪಾಯಿ ಬಳಸಿಕೊಂಡಿದ್ದು ಗೊತ್ತಾಗಿದೆ.

ಯಾರ್ಯಾರು ಎಷ್ಟೆಷ್ಟು ವೈದ್ಯಕೀಯ ವೆಚ್ಚ ಪಡೆದಿದ್ದಾರೆ ಅನ್ನೋದನ್ನು ನೋಡೋದಾದರೆ, ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ 10.45 ಲಕ್ಷ ರೂಪಾಯಿ, ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ 8.93 ಲಕ್ಷ ರೂಪಾಯಿ, ಎಚ್ ಕೆ ಸುರೇಶ್, ಪತ್ನಿ ಕೋಮಲ, ತಾಯಿ ಸಾಕಮ್ಮ ಅವರಿಗಾಗಿ 10.11 ಲಕ್ಷ ರೂಪಾಯಿಯನ್ನು ಸರ್ಕಾರದಿಂದ ಕ್ಲೇಮ್‌ ಮಾಡಿಸಿಕೊಂಡಿದ್ದಾರೆ.

* ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10,45,657 ರೂಪಾಯಿ

* ಎಚ್ ಡಿ ರೇವಣ್ಣ ಇವರ ಪತ್ನಿ ಭವಾನಿ ರೇವಣ್ಣ ಅವರಿಗೆ 8,93,592

* ಕೆ ಹರೀಶ್ ಗೌಡ ಇವರ ಮಗ ಕಿಶನ್ ಗೌಡ ಹೆಚ್ 85,91,139

* ಪ್ರಸಾದ್ ಅಬ್ಬಯ್ಯ ಇವರ ತಾಯಿ ಧನಲಕ್ಷ್ಮಿ ಅಬ್ಬಯ್ಯ 31,79, 974

* ಎಂ ವೈ ಪಾಟೀಲ್ 11,53,250

* ಅರವಿಂದ್ ಬೆಲ್ಲದ ಅವರ ತಾಯಿಗೆ 7,70,000

* ಹೆಚ್ ಕೆ ಸುರೇಶ್ ಇವರ ತಂದೆ ಕೆಂಪೇಗೌಡರಿಗೆ 15,96,028

* ಎಸ್ ಸುರೇಶ್ ಕುಮಾರ್ 1,96,375

* ಸಿಸಿ ಪಾಟೀಲ್ 16,41,602

* ವಿ ಸುನಿಲ್ ಕುಮಾರ್ ವಿ ಸುನಿಲ್ 1,16,639

* ಹೆಚ್ ವಿ ವೆಂಕಟೇಶ್ 3,03,454

* ಪ್ರಕಾಶ್ ಕೋಳಿವಾಡ ಇವರ ಪತ್ನಿ ಪೂರ್ಣಿಮಾ ಪ್ರಕಾಶ್ ಕೋಳಿವಾಡವರಿಗೆ 3,79,580

* ಎಚ್ ಕೆ ಸುರೇಶ್, ಪತ್ನಿ ಕೋಮಲ, ತಾಯಿ ಸಾಕಮ್ಮ10,11,787

* ಜಿ ಹೆಚ್ ಶ್ರೀನಿವಾಸ್ ಇವರ ತಂದೆ ಜಿಹೆಚ್ ನಂಜುಂಡಪ್ಪ 7,91,923

* ಕೆ ಗೋಪಾಲಯ್ಯ, ಪತ್ನಿ ಹೇಮಲತಾ 2,33,634

* ಡಾ ಶೈಲೇಂದ್ರ ಬೆಲ್ದಾಳೆ 4,02,159

* ಭೀಮನಗೌಡ (ರಾಜು ಗೌಡ) ಬ ,ಪಾಟೀಲ್, ಇವರ ತಾಯಿ ನೀಲಾಬಾಯಿ ಗೌಡತಿ 7,49,057

* ಎಸ್ ಮಂಜುಳಾ 3,34,294

* ಪ್ರಭು ಬಿ ಚೌಹಾಣ್ 2,52,171

* ಜಿ ಹಂಪಯ್ಯ ನಾಯಕ್ 1,66,083

* ಉಮಾನಾಥ್ ಕೋಟ್ಯಾನ್ 5,43,859

* ಅಪ್ಪಾಜಿ ಸಿಎಸ್ ನಾಡಗೌಡ 1,70,248

ಪ್ರಧಾನಿ ವೈದ್ಯಕೀಯ ವೆಚ್ಚ ತಾವೇ ಭರಿಸಿರುವ ಮೋದಿ, RTI ಅಡಿ ಮಾಹಿತಿ ಬಹಿರಂಗ!

ಅನಾರೋಗ್ಯಕ್ಕಾಗಿ ಒಂದೇ ವರ್ಷದಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರದಿಂದ ಕ್ಲೇಮ್‌ ಮಾಡಿಕೊಂಡ ಶಾಸಕರು!

Karnataka mla medical expenses RTI Report  siddaramaiah government san

Latest Videos
Follow Us:
Download App:
  • android
  • ios