ಕರ್ನಾಟಕ ಲಾರಿ ಡ್ರೈವರ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ತಮಿಳನಾಡು ಟ್ರಾಫಿಕ್ ಪೊಲೀಸ್!

ಕ್ಷುಲ್ಲಕ ಕಾರಣಕ್ಕೆ ಕರ್ನಾಟಕದ ಬಡಪಾಯಿ ಲಾರಿ ಡ್ರೈವರ್‌ ಮೇಲೆ ತಮಿಳನಾಡು ಟ್ರಾಫಿಕ್ ಪೊಲೀಸ್ ಪೇದೆ ಹಲ್ಲೆ ಮಾಡಿದ ಘಟನೆ ಕರ್ನಾಟಕ-ತಮಿಳನಾಡು ಗಡಿಭಾಗದ ಹೊಸೂರುನಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

Karnataka lorry driver assaulted by Tamil Nadu traffic police constable at hosuru raod bengaluru rav

ಬೆಂಗಳೂರು (ಅ.28): ಕ್ಷುಲ್ಲಕ ಕಾರಣಕ್ಕೆ ಕರ್ನಾಟಕದ ಬಡಪಾಯಿ ಲಾರಿ ಡ್ರೈವರ್‌ ಮೇಲೆ ತಮಿಳನಾಡು ಟ್ರಾಫಿಕ್ ಪೊಲೀಸ್ ಪೇದೆ ಹಲ್ಲೆ ಮಾಡಿದ ಘಟನೆ ಕರ್ನಾಟಕ-ತಮಿಳನಾಡು ಗಡಿಭಾಗದ ಹೊಸೂರುನಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

 ರ್ಯಾಷ್ ಡ್ರೈವಿಂಗ್ ಮಾಡ್ತಿದ್ದಿಯಾ ಅಂತ ಆರೋಪಿಸಿ ಲಾರಿ ಅಡ್ಡಗಟ್ಟಿ  ಚಾಲಕನನ್ನ ಕೆಳಗಿಳಿಸಿ ರೌಡಿಯಂತೆ ವರ್ತಿಸಿರುವ ತಮಿಳನಾಡು ಟ್ರಾಫಿಕ್ ಪೊಲೀಸ್ ಪೇದೆ. ಚಾಲಕನಿಗೆ ಮನಸೋ ಇಚ್ಛೆ ಥಳಿಸುತ್ತಿರುವು ವಿಡಿಯೋ ಕಾರು ಚಾಲಕನೋರ್ವ ಸೆರೆಹಿಡಿದಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕರ್ನಾಟಕ ಕನ್ನಡಿಗರ ಮೇಲೆ ತಮಿಳನಾಡು ಪೊಲೀಸರ ದೌರ್ಜನ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಮಫಲಕದಲ್ಲಿ ಕನ್ನಡ ಕಟ್ಟುನಿಟ್ಟಿನ ಅನುಷ್ಠಾನವಾಗಬೇಕು: ಬಳಿಮಲೆ

ವಿಡಿಯೋದಲ್ಲಿ ಏನಿದೆ?

ಕರ್ನಾಟಕ-ತಮಿಳನಾಡಿನ ಹೊಸೂರು ಬಾರ್ಡರ್‌ನಲ್ಲಿನ ಹೆದ್ದಾರಿಗೆ ಲಾರಿ ಅಡ್ಡಗಟ್ಟಿದ ರೌಡಿ ಟ್ರಾಫಿಕ್ ಪೊಲೀಸ್. ಲಾರಿ ಚಾಲಕ ರ್ಯಾಷ್ ಡ್ರೈವಿಂಗ್ ಮಾಡಿದ್ರೆ ಸೌಜನ್ಯದಿಂದ ವರ್ತಿಸಿ, ಕೇಸ್ ದಾಖಲಿಸಬಹುದಿತ್ತು. ಅದುಬಿಟ್ಟು ಗೂಂಡಾ ರೀತಿ ಲಾರಿ ಚಾಲಕನ ಮೇಲೆ  ಹಲ್ಲೆ ನಡೆಸಿರುವ ಪೊಲೀಸ್ ಪೇದೆ. ಹೊಟ್ಟೆ, ಮುಖ ಎಲ್ಲೆಂದರೆ ಪಂಚ್ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸ್ ಪೇದೆ ಹಲ್ಲೆ ವೇಳೆ, ಬಿಟ್ಬಿಡಿ ಸರ್ ನನ್ನದು ತಪ್ಪಿಲ್ಲ ಅಂತಾ ಅಂಗಲಾಚಿದ್ರೂ ಬಿಡದೇ ಕತ್ತಲಿದ್ದೆಡೆ ಕರೆದೊಯ್ದು ಹಲ್ಲೆ ನಡೆಸಿದ ತಮಿಳನಾಡು ಟ್ರಾಫಿಕ್ ಪೊಲೀಸ್ ಪೇದೆ. ಈ ಘಟನೆ ವೇಳೆ ಹೊಸೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿನ ಚಾಲಕನೋರ್ವ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವಿಡಿಯೋ ಮಾಡುತ್ತಿರುವುದು ಕಂಡು ಕಾರು ಚಾಲಕನ ಮೇಲೆಯೂ ಹಲ್ಲೆಗೆ ಮುಂದಾಗಿ ವಿಡಿಯೋ ದಾಖಲಾಗಿದೆ.
 

Latest Videos
Follow Us:
Download App:
  • android
  • ios