LIVE NOW
ಬಂಡೀಪುರದಲ್ಲಿ ಉರುಳಿಗೆ ಸಿಕ್ಕಿ ಹುಲಿ ಸಾವು, ಆನೆ ದಂತ ನಾಪತ್ತೆ - ತನಿಖೆಗೆ ಅರಣ್ಯ ಸಚಿವರ ಆದೇಶ

ಸಾರಾಂಶ
ರಾಜ್ಯ ರಾಜಕಾರಣದಲ್ಲಿ ‘ಸ್ಟಿಂಗ್ ಆಪರೇಷನ್’ ಜಟಾಪಟಿ ಈಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಸ್ಟಿಂಗ್ ಕೇಸ್ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಕ್ಕೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಸಂಶಯವಿದ್ದವರನ್ನು ಕರೆಸಿದ್ದೇವೆ, ಕುಮಾರಸ್ವಾಮಿ ಮೇಲೆ ಸಂಶಯ ಬಂದರೆ ಅವರನ್ನೂ ವಿಚಾರಣೆಗೆ ಕರೆಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಕ್ಕೆ ಭರ್ಜರಿ ವಾಕ್ಸಮರವೇ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
08:04 AM (IST) Oct 16
Karnataka Live News Today; ಬಂಡೀಪುರದಲ್ಲಿ ಉರುಳಿಗೆ ಸಿಕ್ಕಿ ಹುಲಿ ಸಾವು, ಆನೆ ದಂತ ನಾಪತ್ತೆ - ತನಿಖೆಗೆ ಅರಣ್ಯ ಸಚಿವರ ಆದೇಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿರುವ ಹಾಗೂ ಕಾಡಾನೆ ದಂತ ನಾಪತ್ತೆಯಾಗಿರುವ ಬಗ್ಗೆ ಸಮಗ್ರ ತನಿಖೆಗೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ. ಕಳ್ಳಬೇಟೆಗಾರರ ಕೈವಾಡ ಮತ್ತು ಅರಣ್ಯ ಸಿಬ್ಬಂದಿಯ ಕರ್ತವ್ಯಲೋಪದ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
Read Full Story 08:02 AM (IST) Oct 16
Karnataka Live News Today; ಸರ್ಕಾರಿ ನೌಕರಿ ಬಯಸೋರಿಗೆ ಗುಡ್ನ್ಯೂಸ್! ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಸಂಪುಟ ಉಪಸಮಿತಿ ನಿರ್ಧರಿಸಿದೆ. ಅನುದಾನಿತ ಶಾಲಾ-ಕಾಲೇಜುಗಳಲ್ಲಿನ ಹಿಂಬಾಕಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡದಿದ್ದರೆ ಅನುದಾನ ಸ್ಥಗಿತದ ಎಚ್ಚರಿಕೆ ನೀಡಲಾಗಿದೆ.
07:49 AM (IST) Oct 16
Karnataka Live News Today; ಡ್ರಿಪ್ಸ್ ತೆಗೆವಾಗ 6 ತಿಂಗಳ ಮಗುವಿನ ಕೈ ಬೆರಳು ಕಟ್ - ಖಾಸಗಿ ಆಸ್ಪತ್ರೆ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡ್ರಿಪ್ ತೆಗೆಯುವಾಗ ಆರು ತಿಂಗಳ ಮಗುವಿನ ಕಿರುಬೆರಳು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ತಜ್ಞರ ನೆರವಿನೊಂದಿಗೆ ವಸ್ತುನಿಷ್ಠ ತನಿಖೆ ನಡೆಸುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
Read Full Story