ದಕ್ಷಿಣ ಭಾರತದ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ತಾಯಿ-ಮರಣ ಪ್ರಮಾಣ ಹೆಚ್ಚಿದೆ: ಸಚಿವ ದಿನೇಶ್‌ ಗುಂಡೂರಾವ್‌ 

ವಿಧಾನ ಪರಿಷತ್‌(ಜು.11): ಎಸ್‌ಆರ್‌ಎಸ್‌ ಸಮೀಕ್ಷೆ ವರದಿ 2018-20ರ ಪ್ರಕಾರ ಕರ್ನಾಟಕದಲ್ಲಿ ತಾಯಿ-ಮರಣ ಪ್ರಮಾಣ ಪ್ರತಿ 1 ಲಕ್ಷಕ್ಕೆ 69 ಇದೆ. ಇದನ್ನು ಮತ್ತಷ್ಟುಕಡಿಮೆಗೊಳಿಸಲು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮೇಲ್ಮನೆಯಲ್ಲಿ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ದಕ್ಷಿಣ ಭಾರತದ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ತಾಯಿ-ಮರಣ ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದಾರೆ. 

ಆರೋಗ್ಯ ಇಲಾಖೆ ಚೆನ್ನಾಗಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು: ಸಚಿವ ದಿನೇಶ್‌ ಗುಂಡೂರಾವ್‌

2015-17ರಲ್ಲಿ ಕರ್ನಾಟಕದಲ್ಲಿ ತಾಯಿ-ಮರಣ ಪ್ರಮಾಣ 97 ಇತ್ತು. 2018-20ರ ವೇಳೆಗೆ ಅದು 69ಕ್ಕೆ ಇಳಿಕೆಯಾಗಿದೆ. 2025ರೊಳಗೆ ತಾಯಿ-ಮರಣ ಪ್ರಮಾಣ ಮತ್ತಷ್ಟುಕಡಿಮೆಗೊಳಿಸಲು ಆದ್ಯತೆ ಮೇರೆಗೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.