ಬೆಂಗಳೂರು (ಡಿ.10):  ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಕಾಯ್ದೆಯನ್ನು (ಪ್ರಾಹಿಬಿಷನ್‌ ಆಫ್‌ ಎಂಪ್ಲಾಯಿಮೆಂಟ್‌ ಆ್ಯಸ್‌ ಮ್ಯಾನ್ಯುಯೆಲ್‌ ಸ್ಕ್ಯಾವೆಂಜರ್‌ ಅಂಡ್‌ ದೇರ್‌ ರಿಹ್ಯಾಬಿಲಿಟೇಷನ್‌ ಆಕ್ಟ್-2013) ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಎಲ್ಲಾ ಸ್ಥಳೀಯ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತು ಎಐಸಿಸಿಟಿಯುನ ಕರ್ನಾಟಕ ಘಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಲಾಕ್‌ಡೌನ್‌ನಿಂದಾಗಿ ರಾಜ್ಯಕ್ಕೆ ಎದುರಾಗಿದೆ ಆರ್ಥಿಕ ಸಂಕಷ್ಟ: ಬಿಎಸ್‌ವೈ ..

ಅಲ್ಲದೆ, ಕಾಯ್ದೆಯಡಿ ದಾಖಲಿಸಿದ ಎಫ್‌ಐಆರ್‌ಗಳ ಸಂಖ್ಯೆ ಹಾಗೂ ಅವುಗಳ ದಾಖಲೆ, ದೋಷಾರೋಪ ಪಟ್ಟಿಸಲ್ಲಿಸಿದ, ಶಿಕ್ಷೆಯಾದ, ವಿಚಾರಣೆಗೆ ಬಾಕಿಯಿರುವ, ಖುಲಾಸೆಯಾದ ಪ್ರಕರಣಗಳ ವಿವರಗಳನ್ನು ಸಲ್ಲಿಸಬೇಕು. 

ಕಾಯ್ದೆಯ ಸಂಬಂಧ 2018ರ ಫೆ.23ರಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷೆಯಲ್ಲಿ ಕೈಗೊಂಡ ನಿರ್ಣಯದ ವಿವರ, ಮ್ಯಾನ್ಯುಯೆಲ್‌ ಸ್ಕಾ್ಯವೆಂಜರ್‌ (ಸಫಾಯಿ ಕರ್ಮಚಾರಿ) ಸಮೀಕ್ಷೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಚಿಸಿದ ಸಮಿತಿಗಳು, ಅವುಗಳ ನಡೆಸಿದ ಸಭೆ ಮತ್ತುಕಾರ್ಯ ನಿರ್ವಹಣೆ ಕುರಿತು ವಿವರಗಳನ್ನು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.