Asianet Suvarna News Asianet Suvarna News

ರಾಜ್ಯದಲ್ಲಿ ಅಧಿಕ ಮಳೆ, ಬತ್ತಿ ಬರಡಾಗಿದ್ದ ತುಂಗಭದ್ರಾ ಸೇರಿ ಎಲ್ಲಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಿರಂತರ ಮಳೆ ಹಿನ್ನೆಲೆ ಬಹುತೇಕ ಎಲ್ಲಾ ಜಲಾಶಯಗಳಲ್ಲಿ ನೀರು ಭರ್ತಿಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

Karnataka Heavy rains pound Malnad region increased water level in all reservoirs including Tungabhadra Dam gow
Author
First Published Jul 5, 2024, 11:58 AM IST

ಬೆಂಗಳೂರು (ಜು.5): ಮಧ್ಯಕರ್ನಾಟಕದ ಶಿವಮೊಗ್ಗ ,ತೀರ್ಥಹಳ್ಳಿ, ಚಿಕ್ಕಮಗಳೂರು ಭಾಗವಾದ ಮಲೆನಾಡಿನಲ್ಲಿ ಅಧಿಕ ಪ್ರಮಾಣ ಮಳೆಯಾಗುತ್ತಿದ್ದು, ಬತ್ತಿ ಬರಡಾಗಿದ್ದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

ಕಳೆದ ನಾಲ್ಕೈದು ದಿನದಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು,  ನಾಲ್ಕಕ್ಕೂ ಅಧಿಕ ಟಿಎಂಸಿ ನೀರು ಹರಿದು ಬಂದಿದೆ. ಈ ಮೂಲಕ ಬತ್ತಿ ಬರಡಾಗಿದ್ದ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಮರುಜೀವ ಬಂದಂತಾಗಿದೆ. ಜುಲೈ 4ರಂದು ಜಲಾಶಯದಲ್ಲಿ 10.082 ಟಿಎಂಸಿ ನೀರಿದ್ದ ಮಟ್ಟ ಇಂದು ಜುಲೈ 5ಕ್ಕೆ 11.714 ಟಿಎಂಸಿಗೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ಸರಾಸರಿ ಒಳಹರಿವಿನ ಪ್ರಮಾಣದಲ್ಲೂ ಕೂಡಾ ಹೆಚ್ಚಳವಾಗಿದೆ.

ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ ಬಯಲು: ಹೆಚ್‌ಡಿಕೆ ಸ್ಫೋಟಕ ಹೇಳಿಕೆ!

ತುಂಗಭದ್ರಾ ಜಲಾಶಯ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಸದ್ಯ ತುಂಗಭದ್ರಾ ಜಲಾಶಯದಲ್ಲಿ 11.714 ಟಿಎಂಸಿ ನೀರು ಸಂಗ್ರಹ ಇದೆ. ಹೊಸಪೇಟೆ  ಹೊರವಲಯದಲ್ಲಿ ಈ ತುಂಗಭದ್ರಾ ಜಲಾಶಯವಿದ್ದು, ತಾಲೂಕಿನ ರೈತರಿಗೆ ವರದಾನವಾಗಿದೆ. ಬಿತ್ತನೆ ಮಾಡಿದ ಫಸಲಿಗೆ ಜೀವಕಳೆ ಬಂದಿದ್ದು. ಲಕ್ಕವಳ್ಳಿ ಭದ್ರಾ ಜಲಾಶಯಕ್ಕೂ ನೀರು ಹರಿದುಬರುತ್ತಿರುವುದು, ಭದ್ರಾ ಜಲಾಶಯ ಬೇಗ ಭರ್ತಿಯಾಗಲಿ ಎಂದು ರೈತರು ದೇವರನ್ನು ನಿತ್ಯ ಪ್ರಾರ್ಥಿಸುತ್ತಿದ್ದಾರೆ.

ಕೆಆರ್‌ಎಸ್‌ ಜಲಾಶಯ:
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 100.30 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 23.047 ಟಿಎಂಸಿ
ಒಳ ಹರಿವು - 9,686 ಕ್ಯೂಸೆಕ್
ಹೊರ ಹರಿವು - 546 ಕ್ಯೂಸೆಕ್

ಭದ್ರಾ:
ಗರಿಷ್ಟ ಮಟ್ಟ: 186 ಅಡಿ
ಇಂದಿನ ಮಟ್ಟ: 127 ಅಡಿ
ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯ: 71.53 ಟಿಎಂಸಿ
ಇಂದಿನ ನೀರು ಸಂಗ್ರಹಣೆ: 18.98 ಟಿಎಂಸಿ (ಶೇ.26.53)
ಒಳಹರಿವು : 4908 ಕ್ಯುಸೆಕ್
ಹೊರ ಹರಿವು : 348 ಕ್ಯುಸೆಕ್

ಹಾಸನ  ಹೇಮಾವತಿ ಜಲಾಶಯ:
ಇಂದಿನ‌ ಮಟ್ಟ - 2894
ಗರಿಷ್ಠ ಮಟ್ಟ - 2922
ಒಟ್ಟು ಸಂಗ್ರಹ ಸಾಮರ್ಥ್ಯ - 37.103 ಟಿಎಂಸಿ
ಇಂದಿನ ಸಂಗ್ರಹ ಸಾಮರ್ಥ್ಯ - 16.529 ಟಿಎಂಸಿ 
ಒಳಹರಿವು - 8447 ಕ್ಯೂಸೆಕ್ 
ಹೊರಹರಿವು - 250 ಕ್ಯೂಸೆಕ್

ಲಿಂಗನಮಕ್ಕಿ:
ಗರಿಷ್ಟ ಮಟ್ಟ: 1819 ಅಡಿ
ಇಂದಿನ ಮಟ್ಟ: 1760.10 ಅಡಿ
ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯ: 151.64 ಟಿಎಂಸಿ
ಇಂದಿನ ನೀರು ಸಂಗ್ರಹಣೆ: 27.73 ಟಿಎಂಸಿ (ಶೇ.18.29)
ಒಳಹರಿವು: 60238 ಕ್ಯುಸೆಕ್
ಹೊರ ಹರಿವು: ಶೂನ್ಯ

ಯಾದಗಿರಿ ಬಸವ ಸಾಗರ ಜಲಾಶಯ:
ಗರಿಷ್ಠ ನೀರಿನ ಮಟ್ಟ :33.31 ಟಿಎಂಸಿ.
ಇಂದಿನ ನೀರಿನ ಮಟ್ಟ : 21.16 ಟಿಎಂಸಿ.
ಗರಿಷ್ಠ ಮಟ್ಟ : 492.25 ಮೀ.
ಇಂದಿನ ಮಟ್ಟ : 489.20 ಮೀ.
ಒಳಹರಿವು : 217 ಕ್ಯೂಸೆಕ್‌
ಹೊರಹರಿವು : 95 ಕ್ಯೂಸೆಕ್‌

ಕಬಿನಿ ಜಲಾಶಯ ನೀರಿನ ಮಟ್ಟ
ಇಂದಿನ ಮಟ್ಟ- 2281 ಅಡಿ (17,25)
ಒಳ ಹರಿವು- 8,321 ಕ್ಯುಸೆಕ್
ಹೊರ ಹರಿವು-  2,917 ಕ್ಯುಸೆಕ್
ಗರಿಷ್ಠ ಮಟ್ಟ- 2284 ಅಡಿ

ಹಾರಂಗಿ ಜಲಾಶಯ ಮಟ್ಟ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಹಿನ್ನೆಲೆ ಹಾರಂಗಿ 2313 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯ ಭರ್ತಿಗೆ 15 ಅಡಿ ಮಾತ್ರವೇ ಬಾಕಿ ಇದೆ. 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 4.42 ಟಿಎಂಸಿ ಅಡಿ ನೀರು ಸಂಗ್ರಹ. ಕಳೆದ ವರ್ಷ ಇದೇ ವೇಳೆಗೆ ಕೇವಲ 2 ಟಿಎಂಸಿ ಅಡಿ ನೀರು ಮಾತ್ರವೇ ಸಂಗ್ರಹವಾಗಿತ್ತು.
ಗರಿಷ್ಠ ಮಟ್ಟ 2,859 ಅಡಿಗಳು.
ಇಂದಿನ ನೀರಿನ ಮಟ್ಟ 2842.27 ಅಡಿಗಳು.
ಒಳಹರಿವು 1649 ಕ್ಯುಸೆಕ್.
ಹೊರ ಹರಿವು 200 ಕ್ಯುಸೆಕ್.

ಉತ್ತರಕನ್ನಡ ಜಿಲ್ಲೆಯ ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಕಾಳಿ ನದಿ ಕಾನೇರಿ ಆಣೆಕಟ್ಟು ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ಸೂಚನೆ ಇದ್ದು, ಅಪ್ಪರ್ ಕಾನೇರಿ ಜಲಾಶಯದ ಒಳ ಹರಿವು ನೀರಿನ ಪ್ರಮಾಣ ಹೆಚ್ಚಳವಾಗಿದೆ. 
ಗರಿಷ್ಠ ಮಟ್ಟ 615.50 ಅಡಿಗಳು.
ಇಂದಿನ ನೀರಿನ ಮಟ್ಟ  605.85  ಅಡಿಗಳು.
ಒಳಹರಿವು 1649 ಕ್ಯುಸೆಕ್.
ಹೊರ ಹರಿವು 200 ಕ್ಯುಸೆಕ್.

Latest Videos
Follow Us:
Download App:
  • android
  • ios