ಬೆಂಗಳೂರು : ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಮಂಜುನಾಥ್‌ ಕೌರಿ ಬಿ.- ಎಸಿಬಿ, ಎನ್‌.ಎಚ್‌.ರಾಮಚಂದ್ರಯ್ಯ- ಸಿಸಿಬಿ (ಬೆಂಗಳೂರು), ಟಿ.ಮಂಜುನಾಥ್‌- ಹಲಸೂರು ಉಪ ವಿಭಾಗ, ಎನ್‌.ನವೀನ್‌ ಕುಮಾರ್‌- ಕೊಳ್ಳೇಗಾಲ ಉಪ ವಿಭಾಗ (ಚಾಮರಾಜನಗರ), ಬಸಪ್ಪ ಎಸ್‌.ಅಂಗಡಿ- ರಾಯಚೂರು ಉಪ ವಿಭಾಗ, ಆರ್‌.ವಿ.ಚೌಡಪ್ಪ- ಕೋಲಾರ ಉಪ ವಿಭಾಗ, ಮಲ್ಲೇಶಪ್ಪ ಮಲ್ಲಾಪುರ- ಕೂಡ್ಲಗಿ ಉಪ ವಿಭಾಗ (ಬಳ್ಳಾರಿ), ಎನ್‌.ಪ್ರತಾಪ್‌ ರೆಡ್ಡಿ- ಕಬ್ಬನ್‌ಪಾರ್ಕ್ ಉಪ ವಿಭಾಗ, ಹೆಚ್‌.ವೆಂಕಟೇಶ್‌ ಪ್ರಸನ್ನ- ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.