ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರು, (ಡಿ.09): ಕರ್ನಾಕಟದಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದು, ಹೊಸ ವರ್ಷ ಸಂಭ್ರಮಾಚರಣೆ ವೇಳೆ ಏರಿಕೆಯಾಗಹುದು ಎಂದು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

ಹೊಸ ವರ್ಷಾಚರಣೆ ಸಂಭ್ರಮಾಚರಣೆ ಹಿನ್ನೆಲೆ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಗಳನ್ನ ಜಾರಿಗೊಳಿಸಿ ಇದು (ಬುಧವಾರ) ಮಹತ್ವದ ಆದೇಶ ಹೊರಿಡಿಸಿದೆ. 

ಗ್ರಾಹಕರು ಮಾಸ್ಕ್‌ ಧರಿಸದಿದ್ದರೆ ನಮಗೇಕೆ ದಂಡ?

ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ, ಕೊರೋನಾ ನಿಯಮ ಉಲ್ಲಂಘನೆ ಮಾಡಿದರೆ 10,000 ರೂ ದಂಡ ವಿಧಿಸಲಿದೆ. 

ಎಸಿ ಹಾಲ್, ಅಂಗಡಿ ಮಾಲ್ ಗಳಲ್ಲಿ ಕೊರೋನಾ ನಿಯಮ ಬ್ರೇಕ್ ಮಾಡಿದರೆ 10,000 ರೂ ದಂಡ ಹಾಗೂ ನಾನ್ ಎಸಿ ಹಾಲ್ ಗಳಲ್ಲಿ ನಿಯಮ ಉಲ್ಲಂಘಿಸಿದರೆ 5000 ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

Scroll to load tweet…

ಇದರ ಜೊತೆಗೆ ಕೊರೋನಾ ಪರೀಕ್ಷಾ ದರವನ್ನು ಕೂಡ ನಿಗದಿ ಮಾಡಿದ್ದು, ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದರೆ 500 ರೂ., ಖಾಸಗಿ ಆಸ್ಪತ್ರೆಯಲ್ಲಿಯೇ ಕೊರೋನಾ ಟೆಸ್ಟ್‌ಗೆ 800 ರೂ, ಲ್ಯಾಬ್ ಗಳಿಗೆ 1,250 ರೂ., ಕೊರೋನಾ ಟೆಸ್ಟ್ ಗೆ ಗರಿಷ್ಟ ಮೊತ್ತ 2,500 ಹಾಗೂ ರ್ಯಾಪಿಡ್ ಟೆಸ್ಡ್ ಗೆ 400 ರೂ ಫಿಕ್ಸ್ ಮಾಡಿ ಸುತ್ತೋಲೆ ಹೊರಡಿಸಿದೆ.

Scroll to load tweet…