ಬೆಂಗಳೂರು, (ಜುಲೈ.24) : ಕೊರೋನಾ ಸಂಕಷ್ಟದಲ್ಲಿದ್ದ ರಾಜ್ಯ ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರ ಬಾಕಿ ಉಳಿದಿದ್ದ ನೌಕರರ ವೇತನದ ಹಣ ಬಿಡುಗಡೆ ಮಾಡಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆ ರಾಜ್ಯದ ಸಾರಿಗೆ ನೌಕರರಿಗೆ ಕಳೆದ ಕೆಲವು ತಿಂಗಳಿನಿಂದ ವೇತನ ಸಿಕ್ಕಿರಲಿಲ್ಲ. ಕೊರೋನಾ ಆರ್ಥಿಕ ನಷ್ಟದಿಂದ ನೌಕರರಿಗೆ ವೇತನ ಬಿಡುಗಡೆಯಾಗಿರಲಿಲ್ಲ.

ಇದೀಗ ರಾಜ್ಯ ಸರ್ಕಾರ 961 ಕೋಟಿ ಹಣ ಬಿಡುಗಡೆ ಮಾಡಿದ್ದು, ಇದರಿಂದ ಬಿಎಂಟಿಸಿ, ವಾಯುವ್ಯ ಸಾರಿಗೆ, ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಅನುಕೂಲವಾಗಲಿದೆ.

'ಸಂಬಳವಿಲ್ಲದೇ KSRTC ಸಿಬ್ಬಂದಿ ಪರದಾಟ'

 ಜೂನ್ ನಿಂದ ಸೆಪ್ಟೆಂಬರ್ ವರೆಗೆ ನೌಕರರಿಗೆ ಸಂಬಳ ನೀಡಲು 961 ಕೋಟಿ ಹಣ ಬಿಡುಗಡೆ ಮಾಡಿದೆ. ಆದ್ರೆ, ಜೂನ್ ಮತ್ತು ಜುಲೈ ತಿಂಗಳ ಸಂಬಳಕ್ಕಾಗಿ ತಕ್ಷಣ 426 ಕೋಟಿ ರೂ ರಿಲೀಸ್ ಮಾಡಿದೆ. 

ಕೊರೋನಾ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳು ಕಾಲ ಕರ್ನಾಟಕ ಸಾರಿಗೆ ಬಸ್‌ಗಳು ರಸ್ತೆಗಿಳಿದಿಲ್ಲ. ಇದೀಗ ಅನ್‌ಲಾಕ್ ಇದ್ದು, ಬಸ್‌ಗಳು ಸಂಚರಿಸುತ್ತಿವೆ. ಆದ್ರೆ, ಕೊರೋನಾ ಭೀತಿ ಹಿನ್ನೆಯಲ್ಲಿ ಪ್ರಯಾಣಿಕರು ಬಸ್ ಏರಲು ಮುಂದೆ ಬರುತ್ತಿಲ್ಲ. ಇದರಿಂದ ರಾಜ್ಯ ಸಾರಿಗೆ ಇಲಾಖೆ ಬಾರೀ ಹೊಡೆತಬಿದ್ದಿದೆ.