ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕನ್ನಡ ಪ್ರಭದ ತುಮಕೂರು ವರದಿಗಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಉಗಮ ಶ್ರೀನಿವಾಸ ಸೇರಿದಂತೆ ಇತರರು ನೇಮಕವಾಗಿದ್ದಾರೆ. ಅಕಾಡೆಕಮಿ ಅಧ್ಯಕ್ಷರು, ಸದಸ್ಯರ ಪಟ್ಟಿ ಇಲ್ಲಿದೆ 

ಬೆಂಗಳೂರು (ಮಾ.16): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡ ಅಭಿವೃದ್ಧಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಒಟ್ಟು 19 ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ ಸದಸ್ಯರನ್ನು ನೇಮಕ ಮಾಡಿರುವ ಸರ್ಕಾರ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಮೂರು ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿ ನೇಮಕ

ತುಮಕೂರು ಕನ್ನಡಪ್ರಭ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಉಗಮ ಶ್ರೀನಿವಾಸ್ ಸೇರಿದಂತೆ ಇತರರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ನೇಮಕವಾಗಿದ್ದಾರೆ.

ವಿವಿಧ ಅಕಾಡೆಮಿ, ಪ್ರಾಧಿಕಾರಿಗಳ ಅಧ್ಯಕ್ಷರು

  • ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಡಾ. ಪುರುಷೋತ್ತಮ ಬಿಳಿಮಲೆ
  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಡಾ. ಚನ್ನಪ್ಪ ಕಟ್ಟಿ
  • ಕನ್ನಡ ಪುಸ್ತಕ ಪ್ರಾಧಿಕಾರ- ಮೈಸೂರು ಮಾನಸ
  • ಕರ್ನಾಟಕ ನಾಟಕ ಅಕಾಡೆಮಿ- ಕೆವಿ ನಾಗರಾಜಮೂರ್ತಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿ- ಎಲ್ ಎನ್ ಮುಕುಂದರಾಜ್
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ- ಕೃಪಾ ಫಡಕಿ
  • ಲಲಿತ ಕಲಾ ಅಕಾಡಮಿ- ಡಾ.ಪಸ ಕುಮಾರ್