Asianet Suvarna News Asianet Suvarna News

ರಾಮ ಮಂದಿರ ಉದ್ಘಾಟನೆಗೆ ರಾಜ್ಯದಲ್ಲಿ ಸರ್ಕಾರಿ ರಜೆ ಕೊಡೊಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಹಾಗೂ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ರಜೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Karnataka govt does not given holiday for Ram Mandir inauguration said CM Siddaramaiah sat
Author
First Published Jan 21, 2024, 3:58 PM IST

ತುಮಕೂರು (ಜ.21): ಉತ್ತರ ಪ್ರದೇಶದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮಮಂದಿರದ ಉದ್ಘಾಟನೆ ಹಾಗೂ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ರಜೆಗಾಗಿ ಬಿಜೆಪಿ ನಾಯಕರು ಹಾಗೂ ಸ್ವಾಮೀಜಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ ಅವರು ನಾಳೆ ಸರ್ಕಾರಿ ರಜೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮ ಮಮದಿರ ಉದ್ಘಾಟನೆ ದಿನ ದೇಗುಲಗಳಲ್ಲಿ ದಾಸೋಹ ಮಾಡುವ ಬಗ್ಗೆ ಮಾಹಿತಿಯಿಲ್ಲ. ಜೊತೆಗೆ ಪಾನಕ- ಫಲಹಾರ ವ್ಯವಸ್ಥೆ ಬಗ್ಗೆ ಮಾಹಿತಿಯಿಲ್ಲ. ಇನ್ನು ರಾಮ ಮಂದಿರ ಉದ್ಘಾಟನೆ ಅಂತ ರಾಜ್ಯದಲ್ಲಿ ಸರ್ಕಾರಿ ರಜೆಯನ್ನು ನೀಡುವುದಿಲ್ಲ. ಆದರೆ, ರಾಜ್ಯಾದ್ಯಂತ ಎಲ್ಲ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ನಾಳೆ ನಾನು ಮಹದೇವಪುರದಲ್ಲಿ ನಿರ್ಮಾಣವಾಗುತ್ತಿರುವ ರಾಮ ದೇವಸ್ಥಾನ ಉದ್ಘಾಟನೆಗೆ ಹೋಗುತ್ತಿದ್ದೇನೆ. ಅವರು ಆಹ್ವಾನ ಕೊಟ್ಟಿದ್ದಾರೆ ಅದಕ್ಕಾಗಿ ಹೋಗುತ್ತಿದ್ದೇನೆ ಎಂದರು.

ತಮಿಳುನಾಡು ಸರ್ಕಾರದಿಂದ ರಾಮಮಂದಿರ ಉದ್ಘಾಟನೆಯ ನೇರ ಪ್ರಸಾರವನ್ನು ನಿಷೇಧ ಮಾಡಲಾಗುತ್ತಿದೆ (ಲೈವ್ ಬ್ಯಾನ್) ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಆದರೆ, ಬೆಂಗಳೂರಿನ ಮಧ್ಯದಲ್ಲಿರುವ ರೇಸ್ ಕೋರ್ಸ್ ಅನ್ನು ಕುಣಿಗಲ್ ಗೆ ಶಿಫ್ಟ್ ಮಾಡಲು ಸಲಹೆ ನೀಡಿದ್ದೇನೆ.‌ ಜೊತೆಗೆ, ಕೊಬ್ಬರಿ‌ಗೆ 1,500 ಹೆಚ್ಚು ಹಣ ನೀಡಲು ಸರ್ಕಾರ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ರಾಮ ಮಂದಿರ ನಿರ್ಮಾಣಕ್ಕೆ ಜೀವನಾಧಾರದ ಜಮೀನು ಬಿಟ್ಟುಕೊಟ್ಟ ದಲಿತ ರಾಮದಾಸ

ಜನವರಿ 22ರಂದು ಅಯೋಧ್ಯೆಯಲ್ಲಿ ನೂತನ ರಾಮಮಂದಿರದ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಬ್ಬದ ವಾತಾವರಣವಿದ್ದು, ರಾಜ್ಯದ ಜನತೆಯ ಈ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಜನವರಿ 22ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿದ್ದರು. ಇನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ ಸೇರಿ ಅನೇಕ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ವಾಮೀಜಿಗಳು, ಮಠ-ಮಂದಿರಗಳ ಮುಖ್ಯಸ್ಥರು ಸರ್ಕಾರಕ್ಕೆ ರಾಮ ಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ರಜೆ ಕೊಡುವುದಿಲ್ಲ ಎಂದು ಘೋಷಣೆ ಮಾಡಿದ್ದು, ರಾಜ್ಯದ ಕೋಟ್ಯಂತ ಜನರಿಗೆ ನಿರಾಸೆಯನ್ನುಂಟು ಮಾಡಿದೆ.

ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇವತ್ತು ನಾವೇಲ್ಲಾರು ಪೂಜ್ಯ ಡಾ. ಶಿವಕುಮಾರ ಶಿವಯೋಗಿಗಳನ್ನು ಸ್ಮರಿಸಲು ಸೇರಿದ್ದೇವೆ. ಅವರ ಜೀವನ ಆದರ್ಶಗಳನ್ನು ಪಾಲನೆ ಮಾಡುವ ಪ್ರಯತ್ನ ಮಾಡಬೇಕು. ಬಸವಾದಿ ಶರಣರು ದೊಡ್ಡ‌ಕಾಂತ್ರಿ ಮಾಡಿದರು. ಬಸವಾದಿ ಶರಣು ನಾಡಿನ ಜನರಿಗೆ ಬೋಧನೆ ಮಾಡಿದ್ದು ಭಾರತದ ಸಂವಿಧಾನದಲ್ಲಿ ನೋಡಲು ಸಿಗುತ್ತದೆ. ಸಮಾಜದ ಬದಲಾವಣೆಗೆ ಮಾಡಿದ ಬಸವಾದಿ ಶರಣರ ಹೋರಾಟಗಳು ಸಂವಿಧಾನದಲ್ಲಿ ಸಿಗುತ್ತದೆ. ಸಂವಿಧಾನ ಧರ್ಮ ಗ್ರಂಥವಿದ್ದಂತೆ. ಯಾವುದೇ ಸರ್ಕಾರ ಈ ಧರ್ಮಗ್ರಂಥದ ಆಧಾರದ ಮೇಲೆ ಬದಲಾವಣೆ ತರಲು ಎಲ್ಲಾ ಸರ್ಕಾರಗಳು ಪ್ರಯತ್ನಿಸಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಸಿಕ್ತು ಶ್ರೀರಾಮನ ಮತ್ತೊಂದು ಕುರುಹು: ತ್ರೇತಾಯುಗದಲ್ಲಿ ರಾಮ ಬಳಸಿದ ಬೃಹತ್ ಬಾಣ ಪತ್ತೆ

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನಕ್ಕಾಗಿ ಮನವಿ: ನಾನು ಶ್ರೀಗಳನ್ನು  ಮಠದಲ್ಲಿ ಎಷ್ಟು ಮಕ್ಕಳಿದ್ದಾರೆ ಕೇಳಿದೆ. 10 ಸಾವಿರ ವಿದ್ಯಾರ್ಥಿಗಳು ಇರಬಹುದು ಎಂದರು. ಹೆಚ್ಚಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿದ್ದಾರಂತೆ. ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕದ ನಡುವೆ ಅಸಮಾನತೆಗಳಿವೆ. ಸಮಾನತೆ ಇಲ್ಲ ಅಂತ ಹೇಳಲ್ಲ. ಬಸವಾದಿ ಶರಣರ ತತ್ವದಲ್ಲಿ ಅಚಲ‌ ನಂಬಿಕೆ ಇಟ್ಟುಕೊಂಡವನ್ನು ನಾನು. ಶಿವಕುಮಾರಸ್ವಾಮೀಜಿಗಳ ತತ್ವ ಆದರ್ಶಗಳು ಅಮರವಾಗಿದೆ. ಅವರ ದಾರಿಯಲ್ಲಿ ನಡೆಯುವುದೇ ಅವರಿಗೆ ನಾವು ಸಲ್ಲಿಸಿವ ಗೌರವವಾಗಿದೆ. ಬಸವಣ್ಣನವರನ್ನ ಸಾಂಸ್ಕೃತಿ ನಾಯಕ ಅಂತ ಘೋಷಿಸಬೇಕೆಂದು ಸ್ವಾಮೀಜಿಗಳ‌ ಒತ್ತಾಯ ಮಾಡಿದ್ದರು. ಈಗ ಅದನ್ನು ಕ್ಯಾಬಿನೆಟ್ ನಲ್ಲಿ ಪಾಸು ಮಾಡಿದ್ದೇವೆ. ಯಡಿಯೂರಪ್ಪನವರ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಸಹಾಯ ಮಾಡುವಂತೆ ಪತ್ರ ಕೊಟ್ಟಿದ್ದಾರೆ. ಸರ್ಕಾರ ಸಹಾಯ ಮಾಡುತ್ತದೆ. ಶ್ರೀಗಳಿಗೆ ಭಾರತ ರತ್ನ ಕೊಡುವಂತೆ ಒತ್ತಾಯಿಸಿ ಪತ್ರ ಬರೆಯುತ್ತೇವೆ ಎಂದರು.

 

Follow Us:
Download App:
  • android
  • ios