ಮುಡಾ ಹಗರಣ: ನಿಷ್ಪಕ್ಷಪಾತ ತನಿಖೆ ಅಗತ್ಯ, ಹೀಗಾಗಿ ಅನುಮತಿ, ರಾಜ್ಯಪಾಲ ಗೆಹಲೋತ್

ಆರ್‌ಟಿಐ ಕಾರ್ಯಕರ್ತರಾದ ಟಿ. ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ದೂರಿನ ಅನ್ವಯ ರಾಜ್ಯಪಾಲರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ದದ ಆರೋಪ ತನಿಖೆಗೆ ಅನುಮತಿ ನೀಡಿ 6 ಪುಟಗಳ ಆದೇಶವನ್ನು ಮುಖ್ಯಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ.

karnataka Governor Thaawarchand Gehlot to prosecution on siddaramaiah on muda scam grg

ಬೆಂಗಳೂರು(ಆ.18):  ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧತ ವಿರುದ್ಧ ತನಿಖೆ ಹಾಗೂ ಅಭಿಯೋಜನೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅನುಮತಿ ನೀಡಿದ್ದು, 'ಪ್ರಕರಣದಲ್ಲಿ ವಸ್ತುನಿಷ್ಠ, ನಿಷ್ಪಕ್ಷಪಾತ ತನಿಖೆ ನಡೆಸುವ ಅಗ್ಯತ್ಯವಿದೆ' ಎಂದು ಪ್ರತಿಪಾದಿಸಿದ್ದಾರೆ.

ಸಚಿವ ಸಂಪುಟವು ಸಿಎಂ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ರಚನೆಯಾಗಿದೆ. ಹೀಗಾಗಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂಬ ಸಚಿವ ಸಂಪುಟ ಸಲಹೆಯನ್ನು ಪರಿಗಣಿಸಲು ಸಾಧ್ಯವಿಲ್ಲ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿದ್ದರಾಮಯ್ಯ ಅವರು ಏಕವ್ಯಕ್ತಿ ತನಿಖಾ ಆಯೋಗ ರಚಿಸಿದ್ದಾರೆ. ಆರೋಪ ಎದುರಿಸುತ್ತಿರುವವರೇ ತನಿಖಾ ಕ್ರಮ ನಿರ್ಧರಿಸುವುದು ಕಾನೂನು ಸಮ್ಮತವಲ್ಲ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಿದ್ದೇನೆ ಎಂದು ರಾಜ್ಯಪಾಲರು ಅನುಮತಿ ಆದೇಶದಲ್ಲಿ ಹೇಳಿದ್ದಾರೆ.

ಗ್ಯಾರಂಟಿ ಯೋಜನೆ: ಸಿದ್ದರಾಮಯ್ಯ ಸರ್ಕಾರವನ್ನ ಹಾಡಿ ಹೊಗಳಿದ ರಾಜ್ಯಪಾಲ ಗೆಹಲೋತ್..!

ಆರ್‌ಟಿಐ ಕಾರ್ಯಕರ್ತರಾದ ಟಿ. ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ದೂರಿನ ಅನ್ವಯ ರಾಜ್ಯಪಾಲರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ದದ ಆರೋಪ ತನಿಖೆಗೆ ಅನುಮತಿ ನೀಡಿ 6 ಪುಟಗಳ ಆದೇಶವನ್ನು ಮುಖ್ಯಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ.

ಆದೇಶದ ಪೂರ್ಣಪಾಠವೇನು?:

ಆದೇಶದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಹಾಗೂ ಸಂಪುಟದ ನಿರ್ಣಯ ಪರಿಶೀಲಿಸ ಲಾಗಿದೆ. ಸಿಎಂ ವಿರುದ್ಧ ಎರಡು ಬಗೆಯ ಆರೋಪಗಳಿವೆ. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಪೂರಕ ದಾಖಲೆಗಳೂ ಇವೆ. ಈ ಹಿನ್ನೆಲೆ ಆರೋಪಗಳ ಕುರಿತ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಹೀಗಾಗಿ ದೂರಿನ ಬಗ್ಗೆ ಜು. 26ರಂದು ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿವಿವರಣೆ ಕೇಳಲಾಗಿತ್ತು. ಆ.1ರಂದು ಸಂಪುಟದ ನಿರ್ಣಯ, ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಆ.3ರಂದು ನನ್ನ ಕಚೇರಿ ತಲುಪಿತು. ಮೊದಲು ಐಎಎಸ್ ಅಧಿಕಾರಿ ವೆಂಟಾಚಲಪತಿ ನೇತೃತ್ವ ದಲ್ಲಿ ಮುಡಾದಲ್ಲಿನ ಅಕ್ರಮ ತನಿಖೆಗೆ ಸಮಿತಿ ರಚಿಸ ಲಾಗಿತ್ತು. ಬಳಿಕ ತನಿಖಾ ಆಯೋಗದ ಕಾಯ್ದೆ 1952ರ ಅಡಿಯಲ್ಲಿ ಉನ್ನತ ಮಟ್ಟದ * ಏಕ ವ್ಯಕ್ತಿ ತನಿಖಾ ತನಿಖಾ ಸಮಿತಿ ರಚಿಸಲಾಯಿತು ಎಂದು ಸಂಪುಟ ನಿರ್ಣಯದಲ್ಲಿ ತಿಳಿಸ ಲಾಗಿದೆ. ಆದರೆ ಆರೋಪ ಕೇಳಿ ಬಂದಿರುವ ವ್ಯಕ್ತಿಯೇ ತನಿಖೆ ಹೇಗಿರಬೇಕು ಎಂದು ನಿರ್ಧರಿಸುವುದು ಕಾನೂನು ಸಮ್ಮತವಲ್ಲ. ಈ ಹಿನ್ನೆಲೆ ಸಂಪುಟ ನಿರ್ಧಾರ ಕಾನೂನು ಬಾಹಿರಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ಅವರು ಆ.1ರಂದು ಸಚಿವ ಸಂಪುಟ ಸಭೆ ಕರೆದು, ನನ್ನ ( ರಾಜ್ಯಪಾಲರ) ಶೋಕಾಸ್ ನೋಟಿಸ್‌ ಮಂಡಿಸಿ ಚರ್ಚಿಸಿದ್ದಾರೆ. ಈ ಸಂಪುಟ ಸಭೆಯಲ್ಲಿ ವಿಚಾರ ಣೆಗೆ ಅನುಮತಿ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿಗಳ ಸಲಹೆಯಂತೆ ರಚನೆಯಾದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ದೂರುಗಳನ್ನು ತಿರಸ್ಕರಿಸುವ ಸಲಹೆ ನೀಡುವ ನಿರ್ಣಯ ಮಾಡಲಾಗಿದೆ. ಈ ನಿರ್ಣಯವು ವಿಶ್ವಾಸಾರ್ಹವಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios