ಬೆಂಗಳೂರು (ಜೂನ್‌ 26): 13 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.

ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರನ್ನು ಮತ್ತೆ ವಾರ್ತಾ ಇಲಾಖೆ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ವಾರ್ತಾ ಇಲಾಖೆ ಆಯುಕ್ತರಾಗಿದ್ದರು.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ

1. ಪಿ.ಎಸ್. ಹರ್ಷ- ವಾರ್ತಾ ಇಲಾಖೆ ಕಮಿಷನರ್ 

2. ಸೀಮಂತ್‌ಕುಮಾರ್ ಸಿಂಗ್ - ಕೇಂದ್ರ ವಲಯ ಐಜಿಪಿ

3. ಕೆ.ವಿ ಶರತ್‌ಚಂದ್ರ - ಐಜಿಪಿ ಆಡಳಿತ ವಿಭಾಗ ಬೆಂಗಳೂರು

4. ಸುಮನ್ ಪನೇಕರ್- ಡಿಸಿಪಿ ಸಿಎಆರ್ ಬೆಂಗಳೂರು,

5. ಹೆಚ್.ಡಿ ಆನಂದ‌ ಕುಮಾರ್- ಎಸ್.ಪಿ ಐಎಸ್‌ಡಿ

6. ವಿಕಾಸ್ ಕುಮಾರ್ - ಮಂಗಳೂರು ಕಮಿಷನರ್

7. ಎಸ್.ಎನ್ ಸಿದ್ದರಾಮಪ್ಪ - ಡಿಐಜಿ ಸಿಐಡಿ ಆರ್ಥಿಕ ಅಪರಾಧ ವಿಭಾಗ

8. ಬಿ.ಎಸ್ ಲೋಕೇಶ್ ಕುಮಾರ್ - ಡಿಐಜಿ ಐಎಸ್‌ಡಿ

9. ಡಾ.ಕೆ.ತ್ಯಾಗರಾಜನ್ - ಬೆಳಗಾವಿ ಸಿಟಿ ಪೊಲೀಸ್ ಕಮಿಷನರ್

10. ಕ್ಷಮಾ ಮಿಶ್ರಾ - ಕೊಡಗು ಎಸ್.ಪಿ

11. ಹರೀಶ್ ಪಾಂಡೆ‌ - ಎಸ್‌.ಪಿ ಗುಪ್ತಚರ ಇಲಾಖೆ ಬೆಂಗಳೂರು

12. ದಿವ್ಯಾ ಸಾರಾ ಥಾಮಸ್ - ಎಸ್.ಪಿ ಚಾಮರಾಜನಗರ

13. ಹಾಕಯ್ ಅಕ್ಷಯ್ ಮಚ್ಚೀಂದ್ರ - ಎಸ್.ಪಿ ಚಿಕ್ಕಮಗಳೂರು