Covid Guidelines ಸಿಎಂ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು, ಹೊಸ ಮಾರ್ಗಸೂಚಿ ಇಲ್ಲಿದೆ

* ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ
* ಕರ್ನಾಟಕದಲ್ಲಿ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟ
* ವೀಕೆಂಡ್ ಕರ್ಫ್ಯೂ ರದ್ದು, ನೈಟ್ ಕರ್ಫ್ಯೂ ಮುಂದುವರಿಕೆ

Karnataka Government  issues new Covid guidelines On Jan 21 After CM Bommai Meeting  rbj

ಬೆಂಗಳೂರು, (ಜ.21): ಕರ್ನಾಟಕದಲ್ಲಿ(Karnataka) ಕೋವಿಡ್ (Covid) ಸ್ಥಿತಿ ಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಅಲ್ಲದೇ ಪ್ರಮುಖ ತೀರ್ಮಾನಗಳನ್ನ ಸಹ ಕೈಗೊಳ್ಳಲಾಗಿದೆ.

ಹಲವರು ವಿರೋಧಿಸಿದ್ದರಿಂದ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಪ್ಯೂ ( Weekend Curfew ) ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ. 

Covid-19: ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಶಾಲೆಗಳು ಸದ್ಯಕ್ಕೆ ಆರಂಭವಿಲ್ಲ!

ಅಲ್ಲದೇ ನೈಟ್ ಕರ್ಫ್ಯೂ ಸೇರಿದಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಇನ್ನು ಸಿಎಂ ಸಭೆಯಲ್ಲಿ ತೆಗೆದುಕೊಂಡು ನಿರ್ಧಾರಗಳು ಈ ಕೆಳಗಿನಂತಿವೆ.

ಸಿಎಂ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು
* ರಾತ್ರಿ ಕರ್ಫ್ಯೂ ಅವಧಿ ವಾರದ 7 ದಿನಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ.

* ಸಾರ್ವಜನಿಕ ಬೇಡಿಕೆ ಮೇರೆಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಅಂಶಗಳನ್ನ ಆಧರಿಸಿ, ಈ ವಾರಾಂತ್ಯದಲ್ಲಿ ವಾರಾಂತ್ಯ ಕರ್ಫ್ಯೂ ಸದ್ಯಕ್ಕೆ ಹಿಂಪಡೆಯಲು ನಿರ್ಧರಿಸಲಾಗಿದೆ. ಆದ್ರೆ, ಮುಂದಿನ ವಾರ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ನೋಡಿಕೊಂಡು ನಿರ್ಬಂಧಗಳನ್ನ ವಿಧಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.

* ಆದ್ದರಿಂದ ಸಾರ್ವಜನಿಕರು ಜವಾಬ್ದಾರಿಯುತವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತಿ ಅಗತ್ಯವಾಗಿದೆ.
* ಮಾಲ್, ಹೋಟೆಲ್, ಬಾರ್, ಕ್ಲಬ್, ಪಬ್ಮ ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ತೆರೆಯಲು ತೀರ್ಮಾನಿಸಲಾಗಿದೆ. ಹಾಗೂ ಎರಡೂ ಡೋಸ್ ಲಸಿಕೆ ಕಡ್ಡಾಯ.

ಸರ್ಕಾರದ ಹೊಸ ಮಾರ್ಗಸೂಚಿ ಇಂತಿದೆ.
* ಈ ಹಿಂದೆ ಜಾರಿಗೊಳಿಸಿದ್ದಂತ ಶುಕ್ರವಾರ ರಾತ್ರಿ 10 ರಿಂದ ಆರಂಭಗೊಂಡು ಸೋಮವಾರ ಬೆಳಿಗ್ಗೆ 5 ಗಂಟೆಗೆಯವರೆಗಿನ ವೀಕೆಂಡ್ ಕರ್ಪ್ಯೂವನ್ನು ವಾಪಾಸ್ ಪಡೆಯಲಾಗಿರೋದಾಗಿ ತಿಳಿಸಿದ್ದಾರೆ.

* ವೀಕೆಂಡ್ ಕರ್ಪ್ಯೂ ಮಾತ್ರವೇ ರದ್ದುಗೊಳಿಸಲಾಗಿದೆ. ಕೊರೋನಾ ನಿಯಂತ್ರಣ ಕ್ರಮವಾಗಿ ಈ ಹಿಂದೆ ಜಾರಿಯಲ್ಲಿದ್ದಂತ ಎಲ್ಲಾ ನಿಯಮಗಳು ಮುಂದುವರೆಯಲಿವೆ. Rally, ಧರಣಿ, ಪ್ರತಿಭಟನೆ ಸೇರಿದಂತೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.

* ಮದುವೆ ಸಮಾರಂಭಗಳಿಗೆ ಕೊರೋನಾ ಸೋಂಕಿನ ತೀವ್ರತೆಯ ನಡುವೆಯೂ ಅವಕಾಶ ನೀಡಲಾಗಿದೆ. ಓಪನ್ ಸ್ಥಳದಲ್ಲಿ ನಡೆಯೋ ಮದುವೆಗೆ 200 ಜನ. ಮುಚ್ಚಿದ ಪ್ರದೇಶದಲ್ಲಿ ನಡೆಯೋ ಮದುವೆಗೆ 100 ಜನರ ಮಿತಿಯನ್ನು ಮುಂದುವರೆಸಲಾಗಿದೆ.

* ಈ ಹಿಂದಿನಂತೆ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ರಾಜ್ಯಾದ್ಯಂತ ಮುಂದುವರೆಯಲಿದೆ.   ಎಲ್ಲಾ ದಿನಗಳಲ್ಲಿಯೂ ರಾತ್ರಿ ಕರ್ಪ್ಯೂ ಜಾರಿಯಲ್ಲಿ ಇರಲಿದೆ.

* ಎಲ್ಲಾ ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ಊಟದ ಸ್ಥಳಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶೇ.50ರ ಜನರು ಸೇರುವ ಮಿತಿಯ ನಿರ್ಬಂಧ ವಿಧಿಸಲಾಗಿದೆ. ಕೊರೋನಾ ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಸಂಪೂರ್ಣ ಡೋಸ್ ಲಸಿಕೆ ಪಡೆದಂತವರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.

* ಸಿನಿಮಾ, ಹಾಲ್, ಮಲ್ಟಿಪ್ಲೆಕ್ಸ್, ಚಿತ್ರಮಂದಿರ, ರಂಗಮಂದಿರ, ಆಡಿಟೋರಿಯಂ, ಹೆಚ್ಚು ಜನರು ಸೇರಿವಂತ ಸ್ಥಳದಲ್ಲಿ ಶೇ.50 ಜನರು ಸೇರುವಂತ ಮಿತಿಯನ್ನು ವಿಧಿಸಲಾಗಿದೆ.

* ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಸೇರಿದಂತೆ ಗಡಿ ಭಾಗಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ನಿಯಮ ಮೀರಿದವರ ವಿರುದ್ಧ ಕೋವಿಡ್ ನಿಯಂತ್ರಣ ಕ್ರಮದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

Latest Videos
Follow Us:
Download App:
  • android
  • ios