ಅಬಕಾರಿ ಇಲಾಖೆ ಭ್ರಷ್ಟಾಚಾರದ ಮೂಲ ಪುರುಷ ಸಚಿವ ತಿಮ್ಮಾಪುರ್; ಅಧ್ಯಕ್ಷ ಗುರುಸ್ವಾಮಿ!

ಅಬಕಾರಿ ಇಲಾಖೆಯಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದ್ದು, ಸಚಿವ ಆರ್.ಬಿ. ತಿಮ್ಮಾಪುರ್ ಭ್ರಷ್ಟಾಚಾರದ ಮೂಲಪುರುಷ ಎಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಆರೋಪಿಸಿದ್ದಾರೆ.

Karnataka Excise Department Corruption Source founder Minister R B Timmapur sat

ಮೈಸೂರು (ಅ.04): ಅಬಕಾರಿ ಇಲಾಖೆಯಲ್ಲಿ ಕೇವಲ 18-20 ಕೋಟಿ ಅವ್ಯವಹಾರ ನಡೆದಿಲ್ಲ. ಇಲ್ಲಿ ನೂರಾರು ಕೋಟಿ ರೂ. ಮೌಲ್ಯದ ಅವ್ಯವಹಾರ ನಡೆದಿದೆ. ಅಬಕಾರಿ ಇಲಾಖೆ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲ ಪುರುಷ ಸಚಿವ ಆರ್‌.ಬಿ.ತಿಮ್ಮಾಪುರ್ ಆಗಿದ್ದಾರೆ ಎಂದು ಕರ್ನಾಟಕದ ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಗುರುಸ್ವಾಮಿ ಅವರು, ಇಲಾಖೆ ಆಯುಕ್ತರನ್ನು ಸೇರಿ ಅಧಿಕಾರಿಗಳೇ ಈ ವಿಚಾರ ಹೇಳುತ್ತಾರೆ. ಸಚಿವರಿಗೆ ಲಂಚಕೊಟ್ಟು ಬಂದಿದ್ದೇವೆ ಅಂತ ಅವರೇ ನೇರವಾಗಿ ಹೇಳುತ್ತಿದ್ದಾರೆ. ಸಚಿವರಿಗೆ, ಆಯುಕ್ತರಿಗೆ, ಸೂಪರಿಂಟೆಂಡೆಂಟ್, ಸ್ಕ್ವಾಡ್, ಸಿಬ್ಬಂದಿಗೆ ಇಂತಿಷ್ಟು ಅಂತ ಅವರೇ ಫಿಕ್ಸ್ ಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಲೈಸೆನ್ಸ್‌ದಾರನಿಗೆ ತೊಂದರೆ ಎದುರಾಗಿದೆ. ಇಷ್ಟೆಲ್ಲ ಆದರೂ ಸಿದ್ದರಾಮಯ್ಯ ಗಮನಕ್ಕೆ ಬಂದಿಲ್ವ ಗೊತ್ತಿಲ್ಲ. ಸಿದ್ದರಾಮಯ್ಯಗೆ ಗೊತ್ತಿಲ್ಲ ಅಂದರೆ ನಮ್ಮನ್ನ ಹುಚ್ಚರು ಎನ್ನುತ್ತಾರೆ ಎಂದರು.

ಕೆಲವು ಪ್ರಕರಣಗಳಲ್ಲಿ ಅವರು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ತಪ್ಪಿಸಿದ್ದಾರೆ. ಅಬಕಾರಿ ಹಗರಣದಲ್ಲಿ ಸಚಿವರ ಪಿಎ, ಪಿಎಸ್‌ಗಳೂ ಇದ್ದಾರೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಆಪಸತ ಸಹಾಯಕರು ಹಾಗೂ ಆಪ್ತ ಕಾರ್ಯದರ್ಶಿಗಳಿಗೂ ನಾವು ಕೈ ಮುಗಿಯಬೇಕು. ಎಲ್ಲರೂ ಒಂದೇ ಕಡೆ ಸೇರಿಕೊಂಡು ಇದನ್ನ ನಡೆಸುತ್ತಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಅಜಿತ್ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅವರಿಗೆ ದೊಡ್ಡ ಮಟ್ಟದ ನೋವಾಗಿರುವ ಹಿನ್ನೆಲೆಯಲ್ಲಿಯೇ ಬೇಸತ್ತು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮತ್ತೊಬ್ಬ ಸರ್ಕಾರಿ ನೌಕರ ಆತ್ಮಹತ್ಯೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತನ ಹೆಸರು ಬಹಿರಂಗ

ರಾಜ್ಯದಲ್ಲಿ ನಡೆದಿರುವ ಅಬಕಾರಿ ಇಲಾಖೆಯ ನೂರಾರು ಕೋಟಿ ರೂ. ಮೌಲ್ಯದ ಭ್ರಷ್ಟಾಚಾರದ ಮೂಲ ಪುರುಷ ಸಚಿವರೇ ಆಗಿದ್ದಾರೆ. ಅವರು ಲಂಚ ಪಡೆದ ಪರಿಣಾಮ ಅಧಿಕಾರಿಗಳು ನೇರವಾಗಿ ಅವರ ಹೆಸರು ಹೇಳಿಕೊಂಡು ಲಂಚ ಪಡೆಯುತ್ತಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ರೆ ಲೈಸೆನ್ಸ್ ವಿಚಾರದಲ್ಲಿ, ಸ್ಟಾಕ್ ವಿಚಾರದಲ್ಲಿ ತೊಂದರೆ ನೀಡುತ್ತಾರೆ. ಇದು ಸರಿಯಾಗದಿದ್ದರೆ, ಮದ್ಯ ಮಾರಾಟಗಾರರ ಸಂಘವೂ ಕೂಡ ಮುಂದಿನ ದಿನಗಳಲ್ಲಿ ರಾಜ್ಯಪಾಲರು ಹಾಗೂ ಸಿಬಿಐಗೆ ದೂರು ನೀಡಲಾಗುತ್ತದೆ ಎಂದು ತಿಳಿಸಿದರು.

ಘಟನೆಯ ಹಿನ್ನೆಲೆಯೇನು?
ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆಯುತ್ತಿದ್ದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ವಾರ್ಷಿಕ 500 ಕೋಟಿ ರೂ.ಗಿಂತ ಅಧಿಕ ಹಣವನ್ನು ಲಂಚವಾಗಿ ಕೊಡಲಾಗುತ್ತದೆ. ಅಧಿಕಾರಿಗಳ ವರ್ಗಾವಣೆ, ಅಧಿಕಾರಿಗಳ ಬಡ್ತಿ, ಲೈಸೆನ್ಸ್ ವಿತರಣೆ, ಲೈಸೆನ್ಸ್ ನವೀಕರಣ, ಬಾರ್‌ಗಳಿಂದ ಮಾಸಿಕ ಹಣ ವಸೂಲಿ, ಮದ್ಯ ಸರಬರಾಜು ವೇಳೆ ಹಣಕ್ಕೆ ಬೇಡಿಕೆ ಸೇರಿದಂತೆ ಒಟ್ಟಾರೆ ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹ ಮಾಡಿ ಸಚಿವರಿಗೆ, ಆಯುಕ್ತಾಲಯಕ್ಕೆ ಹಾಗೂ ಕಾರ್ಯದರ್ಶಿಗಳಿಗೆ ಕೊಡಬೇಕಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಬೆಂಗಳೂರು ಉದ್ಯಮಿ ದಿವಾಳಿ: 70 ಲಾರಿಗಳ ಮಾಲೀಕ ಹುಡುಗೀರ ಶೋಕಿಯಿಂದಾದ ಭಿಕ್ಷುಕ!

Latest Videos
Follow Us:
Download App:
  • android
  • ios