ಬೆಂಗಳೂರು, [ಜ.28]: ಲಾಲಾ ಲಜಪತ್ ರಾಯ್ ಅವರ ಹುಟ್ಟಹಬ್ಬಕ್ಕೆ ಶುಭಾಶಯ ಕೋರುವ ಭರದಲ್ಲಿ ಕರ್ನಾಟಕ ಕಾಂಗ್ರೆಸ್ ಯಡವಟ್ಟು ಮಾಡಿ ತಿದ್ದಿಕೊಂಡಿದೆ.

ಇಂದು [ಸೋಮವಾರ] ಅಪ್ರತಿಮ ಸ್ವಾತಂತ್ರ್ಯ ಹೊರಾಟಗಾರ, ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ 150ನೇ ಜನ್ಮದಿನೋತ್ಸವ. ಈ ಹಿನ್ನಲೆಯಲ್ಲಿ ಲಾಲಾ ಲಜಪತ್ ರಾಯ್ ಅವರ ಹುಟ್ಟಹಬ್ಬಕ್ಕೆ ರಾಜ್ಯ ಕಾಂಗ್ರೆಸ್ ಶುಭಾಶಯ ಕೋರಿ ಟ್ವೀಟ್ ಮಾಡಿದೆ.

ಆದ್ರೆ, ಲಾಲಾ ಲಜಪತ್ ರಾಯ್ ಬದಲಾಗಿ ಬಾಲ ಗಂಗಾಧರ್ ತಿಲಕ್ ಫೋಟೋ ಸಮೇತ ಟ್ವೀಟ್ ಮಾಡಿ ಮುಜುಗರಕ್ಕೀಡಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಕಾಂಗ್ರೆಸ್ ನ ಈ ಪೋಸ್ಟ್ ಗೆ ಟೀಕೆಗಳು ವ್ಯಕ್ತವಾಗಿವೆ.

ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್, ಬಾಲ ಗಂಗಾಧರ್ ತಿಲಕ್ ಫೋಟೋ ಇರೋ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದು, ನಂತರ ಲಾಲಾ ಲಜಪತ್ ರಾಯ್ ಫೋಟೋ ಹಾಕಿ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ.