Asianet Suvarna News Asianet Suvarna News

ಗಣೇಶೋತ್ಸವಕ್ಕೆ ಷರತ್ತಿನ ಸಮ್ಮತಿ?: ಕಳೆದ ವರ್ಷಕ್ಕಿಂತ ನಿಯಮ ಸಡಿಲಿಕೆ ಸಾಧ್ಯತೆ!

* ಕಳೆದ ವರ್ಷಕ್ಕಿಂತ ನಿಯಮ ಸಡಿಲಿಕೆ ಸಾಧ್ಯತೆ

* ಗಣೇಶೋತ್ಸವಕ್ಕೆ ಷರತ್ತಿನ ಸಮ್ಮತಿ?

* ತೀರಾ ಸಡಿಲ ಬೇಡ: ಸರ್ಕಾರಕ್ಕೆ ತಜ್ಞರ ಆಗ್ರಹ

Karnataka CM to decide on relaxing Covid curbs for Ganesha festival celebrations pod
Author
Bangalore, First Published Sep 5, 2021, 7:28 AM IST

ಬೆಂಗಳೂರು(ಸೆ.05): ರಾಜ್ಯದಲ್ಲಿ ಗಣೇಶೋತ್ಸವ ಆಚರಣೆ ಕುರಿತು ರಾಜ್ಯ ಸರ್ಕಾರವು ಭಾನುವಾರ ಅಂತಿಮ ನಿರ್ಧಾರ ಪ್ರಕಟಿಸಲಿದ್ದು, ಕೆಲ ಷರತ್ತುಗಳಿಗೆ ಒಳಪಟ್ಟು ಸಾರ್ವಜನಿಕವಾಗಿ ಸರಳ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಸಾಧ್ಯತೆ ಇದೆ.

ಆ.30ರಂದು ಗಣೇಶೋತ್ಸವ ಆಚರಣೆ ಕುರಿತು ನಿರ್ಧರಿಸಲು ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.5ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಶನಿವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವುದು ಹಾಗೂ ವಾರಾಂತ್ಯದ ಕಫä್ರ್ಯ ಹಿಂಪಡೆಯುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ವೇಳೆ ಎರಡೂ ವಿಷಯಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ.

ಸಾರ್ವಜನಿಕ ಆಚರಣೆಗೆ ಅನುಮತಿ ಸಾಧ್ಯತೆ:

ರಾಜ್ಯದಲ್ಲಿ ಪ್ರಸ್ತುತ ಸೋಂಕು ನಿಯಂತ್ರಣದಲ್ಲಿದೆ. ಅಲ್ಲದೆ ಎಲ್ಲಾ ಸಚಿವರು ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಗಣೇಶೋತ್ಸವ ಆಚರಣೆ ವೇಳೆ ಸೀಮಿತ ಜನರು ಭಾಗವಹಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿ ಸಾರ್ವಜನಿಕ ಆಚರಣೆಗೆ ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ವರ್ಷಕ್ಕಿಂತ ನಿರ್ಬಂಧಗಳು ಸಡಿಲಿಕೆಯಾಗಲಿದ್ದು, ಆಚರಣೆಗೆ ಹೆಚ್ಚು ಅವಕಾಶಗಳು ದೊರೆಯುವ ಸೂಚನೆಗಳಿವೆ.

ಇದನ್ನು ಪುಷ್ಟೀಕರಿಸುವಂತೆ ಕಂದಾಯ ಸಚಿವ ಆರ್‌. ಅಶೋಕ್‌ ಅವರೂ ಗಣೇಶ ಹಬ್ಬ ಒಳ್ಳೆಯ ರೀತಿ ನಡೆಯಬೇಕು ಎಂಬ ಬಯಕೆಯಿದ್ದು, ವಿನಾಯಿತಿ ನೀಡುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸ್ವಲ್ಪ ವಿನಾಯಿತಿ ನೀಡಿ ಎಂದು ಮನವಿ ಮಾಡಿದ್ದೇವೆ. ಗಣೇಶ ಹಬ್ಬ ಈ ಬಾರಿ ಒಳ್ಳೆಯ ರೀತಿ ಆಗಬೇಕು ಎಂಬ ಬಯಕೆ ಎಲ್ಲರಿಗೂ ಇದೆ. ಕೊರೋನಾ ನಿಯಂತ್ರಣ ಜವಾಬ್ದಾರಿ ನಮ್ಮದು. ಹೀಗಾಗಿ ಕಳೆದ ವರ್ಷಕ್ಕಿಂತ ಹೆಚ್ಚು ಸಡಿಲಿಕೆ ನೀಡುವಂತೆ ಮನವಿ ಮಾಡಿದ್ದೇವೆ. ಈ ಬಾರಿ ನಿರ್ಬಂಧಗಳು ಕಳೆದ ವರ್ಷಕ್ಕಿಂತ ಹೆಚ್ಚು ಸಡಿಲಗೊಳ್ಳಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ದೊಡ್ಡ ಮಟ್ಟದ ಉತ್ಸವಗಳಿಗೆ ಅನುಮತಿ ಇಲ್ಲ?:

ಸಾರ್ವಜನಿಕ ಆಚರಣೆಗೆ ಅವಕಾಶ ದೊರೆಯಬಹುದಾದರೂ ಅದು ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಗಣೇಶೋತ್ಸವ ಆಚರಣೆ ನಡೆಯುತ್ತದೆ. ಚಿತ್ರದುರ್ಗ ಒಂದರಲ್ಲೇ ಸುಮಾರು 2 ಲಕ್ಷ ಮಂದಿ ಗಣೇಶೋತ್ಸವದಲ್ಲಿ ಭಾಗವಹಿಸುತ್ತಾರೆ. ರಾಜ್ಯಾದ್ಯಂತ ಇಂತಹ 30ಕ್ಕೂ ಹೆಚ್ಚು ಸಮಿತಿಗಳಿವೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಸಮಿತಿಗಳೊಂದಿಗೆ ಸ್ಥಳೀಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳು ಚರ್ಚೆ ನಡೆಸಲಿದ್ದು, ದೊಡ್ಡ ಮಟ್ಟದ ಉತ್ಸವ ನಡೆಸಲು ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ದೊಡ್ಡ ಮಟ್ಟದ ಉತ್ಸವ ಸಮಿತಿಗಳು ಸಹ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶ ನೀಡುವ ಸಾಧ್ಯತೆ ಇದೆ.

ವಾರಾಂತ್ಯದ ಕರ್ಫ್ಯೂ ತೆರವು?

ಸೆ.10ರಂದು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಜತೆಗೆ ವಾರಾಂತ್ಯದ ಕಫä್ರ್ಯ ಹಿಂಪಡೆಯುವ ಸಾಧ್ಯತೆ ಇದೆ.

ಎಂಟು ಜಿಲ್ಲೆಗಳ ವಾರಾಂತ್ಯದ ಕಫä್ರ್ಯವನ್ನು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು ಸೇರಿ ನಾಲ್ಕು ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ. ಗಣೇಶೋತ್ಸವ ಆಚರಣೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಇರಲಿದೆ. ಹೀಗಾಗಿ ಗಣೇಶೋತ್ಸವಕ್ಕೆ ಸಮಸ್ಯೆಯಾಗದಂತೆ ಸಕ್ರಿಯ ಪ್ರಕರಣ ಹಾಗೂ ಪಾಸಿಟಿವಿಟಿ ದರ ಗಮನಿಸಿ ವಾರಾಂತ್ಯದ ಕಫä್ರ್ಯವನ್ನು ಹಿಂಪಡೆಯುವ ಸಾಧ್ಯತೆ ಇದೆ.

ಸಂಭಾವ್ಯ ಷರತ್ತು

1. ಅದ್ಧೂರಿ ಆಚರಣೆ, ಮೆರವಣಿಗೆಗೆ ಅವಕಾಶ ಇಲ್ಲ. ಗರಿಷ್ಠ 400 ಜನರ ಮಿತಿ

2. 3 ದಿನ ವಿಗ್ರಹ ಕೂರಿಸಲು ಅವಕಾಶ ಸಾಧ್ಯತೆ. ಗರಿಷ್ಠ 3 ಅಡಿ ಎತ್ತರದ ಮಿತಿ

3. ಸಂಚಾರಿ ಟ್ಯಾಂಕರ್‌ಗಳ ಮೂಲಕ ಸ್ಥಳದಲ್ಲೇ ವಿಗ್ರಹ ವಿಸರ್ಜನೆ ಕಡ್ಡಾಯ

4. ಬಣ್ಣದ ಓಕುಳಿ, ಆರ್ಕೆಸ್ಟ್ರಾ, ಡಿ.ಜೆ. ನೃತ್ಯ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ

5. ಕೊರೋನಾ ನಿಯಮ ಮೀರಿದರೆ ಅನುಮತಿ ಪಡೆದ ಸಂಘಟಕರೇ ಹೊಣೆ

Follow Us:
Download App:
  • android
  • ios