ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಹಾರ, ತುರಾಯಿ ಹಾಗೂ ಶಲ್ಯಗಳನ್ನು ಸ್ವೀಕಾರ ಮಾಡದಿರಲು ತೀರ್ಮಾನಿಸಿದ್ದಾರೆ.

ಬೆಂಗಳೂರು (ಮೇ 21): ರಾಜ್ಯದ ಕಾಂಗ್ರೆಸ್‌ ಸರ್ಕಾರದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ಕ್ಷಣಗಳ ಹಿಂದೆ ನನಗೆ ಜೀರೋ ಟ್ರಾಫಿಕ್ ಬೇಡವೆಂದು ಹಿಂಪಡೆದಿದ್ದರು. ಆದರೆ, ಈಗ ಹಾರ, ತುರಾಯಿ ಹಾಗೂ ಶಲ್ಯಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ತೀರ್ಮಾನಿಸಿ ಆದೇಶಿಸಿದ್ದಾರೆ.

ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯವಾಗಲಿದೆ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಎಂದು ಮನವಿ ಮಾಡಿದ್ದಾರೆ. 

Bengaluru Traffic: ಜೀರೋ ಟ್ರಾಫಿಕ್‌ ಹಿಂಪಡೆದ ಸಿಎಂ ಸಿದ್ದರಾಮಯ್ಯ

ಕಳೆದೆರಡು ದಿನಗಳಿಂದ ಭಾರವಾದ ಹಾರ- ತುರಾಯಿಗಳು: ಈಗಾಗಲೇ ಜೀರೋ ಟ್ರಾಫಿಕ್ ಹಿಂಪಡೆದ ನಂತರ ಹಾರ ತುರಾಯಿ ಶಲ್ಯಗಳನ್ನು ಸ್ವೀಕರಿಸದಿರಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಕಾಮನ್ ಮ್ಯಾನ್ ಸಿದ್ದರಾಮಯ್ಯ ಎಂದು ಬಿಂಬಿಸುವ ಪ್ರಯತ್ನದಲ್ಲಿದ್ದಂತೆ ಕಾಣುತ್ತಿದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ, ಶುಭ ಹಾರೈಕೆಗೆ ಬರುವವರ ಸಂಖ್ಯೆ ಭಾರಿ ದೊಡ್ಡ ಪ್ರಮಾಣದಲ್ಲಿ ಸಿಎಂ ಕಚೇರಿಗೆ ಬರುತ್ತಿದೆ. ಎಲ್ಲಿ ಹೋದರೂ ಹಾರ -ತುರಾಯಿಗಳ ಭಾರವನ್ನು ಹೊರುವುದು ಸಾಕಾಗಿದೆ. ಜೊತೆಗೆ, ಶುಭ ಕೋರಲು ಬರುವವರ ದುಬಾರಿ ಬೆಲೆಯ ಹಾರ, ತುರಾಯಿ, ಶಲ್ಯಗಳನ್ನು ತಂದು ಹಾಕುತ್ತಿದ್ದಾರೆ. ಹೀಗಾಗಿ, ಇವುಗಳನ್ನು ಪಡೆಯದಿರಲು ಸಿದ್ದರಾಮಯ್ಯ ನಿರ್ಧಾರ ಕೈಗೊಂಡಿದ್ದಾರೆ.

ಆರಂಭಕ್ಕೆ ಮಾತ್ರ ಸೀಮಿತವಾಗದಿದ್ದರೆ ಸಾಕು: ಈ ಹಿಂದಿನ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ನಾನು ಕಾಮನ್‌ ಮ್ಯಾನ್‌ ಸಿಎಂ ಎಂದು ಹೇಳಿಕೊಳ್ಳುವ ಮೂಲಕ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಎಲ್ಲ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಶಲ್ಯ ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುವುದನ್ನು ನಿಷೇಧ ಮಾಡಿದ್ದರು. ಜೊತೆಗೆ, ಮಾಜಿ ಸಿಎಂ ಬೊಮ್ಮಾಯಿ ಆರಂಭದಲ್ಲಿ ಜೀರೋ ಟ್ರಾಫಿಕ್‌ ಹಿಂಪಡೆದುಕೊಂಡಿದ್ದರು. ಆದರೆ, ಆ ನಿರ್ಧಾರಗಳನ್ನು ಕೇವಲ ಆರಂಭದ ದಿನಗಳಲ್ಲಿ ಮಾತ್ರ ಫಾಲೋ ಮಾಡಿದ್ದರು. ನಂತರ ಅದೇ ರಾಗ ಅದೇ ಹಾಡು ಎಂಬಂತೆ ಜೀರೋ ಟ್ರಾಫಿಕ್‌ ಪಡೆದುಕೊಂಡಿದ್ದರು. ಈಗ ಸಿದ್ದರಾಮಯ್ಯ ನವರ ಈ ನಿರ್ಧರಗಳು ಎಷ್ಟು ದಿವಸ ಮುಂದುವರೆಯಲಿದೆ ಕಾದು ನೋಡಬೇಕಿದೆ.

Bengaluru Rain:ಮಹಾಮಳೆಗೆ ಸಿಲುಕಿ ಯುವತಿ ಸಾವು: ಪ್ರವಾಸಕ್ಕೆ ಬಂದವಳು ದುರಂತ ಅಂತ್ಯ

ಜೀರೋ ಟ್ರಾಫಿಕ್‌ ಹಿಂಪಡೆಯುವ ಮುನ್ನ ಸಮಸ್ಯೆ ಅನುಭವಿಸಿದ ಸಿದ್ದು: ರಾಜ್ಯ ರಾಜಧಾನಿ ಬೆಂಗಳೂರನ್ನು ಟ್ರಾಫಿಕ್‌ ಸಿಟಿ ಎಂದೂ ಕರೆಯಬಹುದು. ಆದರೆ, ಮಳೆಬಂದ ಹಿನ್ನೆಲೆಯಲ್ಲಿ ತುರ್ತು ಕಾರ್ಯ ನಿಮಿತ್ತ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಂಚಾರ ಮಾಡುವಾಗ ಭಾರಿ ಪ್ರಮಾಣದ ಟ್ರಾಫಿಕ್‌ ನಿರ್ಮಾಣವಾಗಿತ್ತು. ಇದನ್ನು ನೋಡಿ ತಾವೂ ಕೂಡ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದ ಘಟನೆ ನಡೆಯಿತು. ಒಬ್ಬ ಮುಖ್ಯಮಂತ್ರಿಯಾಗಿ ಜೀರೋ ಟ್ರಾಫಿಕ್‌ ಇರುವ ನನಗೇ ಇಷ್ಟೊಂದು ಸಮಸ್ಯೆ ಆಗುತ್ತಿರುವಾಗ, ಜನಸಾಮಾನ್ಯರಿಗೆ ಎಷ್ಟು ತೊಂದರೆ ಆಗಬೇಡ ಎಂದು ಆಲೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to load tweet…