ಬೆಂಗಳೂರು, (ಜೂನ್.27): ಕೊರೋನಾ ವೈರಸ್ ನಿಯಂತ್ರಕ್ಕೆ ಸೂಕ್ತ ಕ್ರಮಗಳ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು (ಶನಿವಾರ) ಮಹತ್ವದ ಸಭೆ ನಡೆಯಿತು.

ಪ್ರತಿ ಭಾನುವಾರ ಕರ್ನಾಟಕ ಕಂಪ್ಲೀಟ್ ಬಂದ್, ಸರ್ಕಾರಿ ನೌಕರರಿಗೆ 5 ದಿನ ಕೆಲಸ.!

ಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಅಂತಿಮವಾಗಿ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ.  ಮುಖ್ಯಮಂತ್ರಿಗಳ ಸಭೆಯಲ್ಲಿ ಕೈಗೊಂಡ ಮಹತ್ವದದ ನಿರ್ಧಾರಗಳು ಈ ಕೆಳಗಿನಂತಿವೆ.

* ಜುಲೈ 5 ರಿಂದ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್ ಡೌನ್.ಆದರೆ ಸರಕು ಸಾಗಾಣಿಕೆಗೆ ಯಾವುದೇ ತೊಂದರೆಯಿಲ್ಲ.
* ಪ್ರತಿ ಶನಿವಾರವೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ.
* ಪ್ರತಿ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಕರ್ಪ್ಯೂ ಜಾರಿ.
* ಬೆಂಗಳೂರಿನಲ್ಲಿ ಹೆಚ್ಚಿನ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ತೆರೆಯಲು ತಿರ್ಮಾನ.
* ಕೋವಿಡ್ ರೋಗಿಗಳ ಶೀಘ್ರ ಸ್ಥಳಾಂತರಕ್ಕೆ ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್ ಜಾರಿ.
* ಬೆಂಗಳೂರಿನಲ್ಲಿ 250 ಅಂಬ್ಯುಲೆನ್ಸ್
* ಕೋವಿಡ್ ನಿಂತ ಮೃತರಾದ ಮೃತದೇಹ ಸಾಗಿಸಲು ಪ್ರತ್ಯೇಕ ಅಂಬ್ಯುಲೆನ್ಸ್.
* ಅಂಬ್ಯುಲೆನ್ಸ್ ಚಲನವಲನ ಗುರುತಿಸಲು ಪೊಲೀಸ್ ಕಂಟ್ರೋಲ್  ರೂಮ್ ವೈರ್ ಲೆಸ್ ಬಳಕೆ.
* ಕೋವಿಡ್ 19 ನೋಡಲ್ ಅಧಿಕಾರಿಗಳ ವಿವರ ಜಾಹಿರಾತುಗಳ ಮೂಲಕ ಜನರಿಗೆ ಪ್ರಚಾರ.
* ಬಿಬಿಎಂಪಿ ಆಯುಕ್ತರ ಕೆಲಸದ ಹೊರೆ ಕಡಿಮೆ ಮಾಡಲು ತಿರ್ಮಾನ.
* ಬಿಬಿಎಂಪಿ ಜಂಟಿ ಆಯುಕ್ತರ ಜವಾಬ್ದಾರಿ ನಿಭಾಯಿಸಲು ಕೆಎಎಸ್ ಅಧಿಕಾರಿಗಳ ನಿಯೋಜನೆ.
* ಡಾಕ್ಟರ್ ಕೊರತೆ ನಿಗಿಸಲು 180 ಕಾರ್ಮಿಕ ಇಲಾಖೆಯ ಡಾಕ್ಟರ್ ಗಳ ಬಳಕೆ.
* ಟ್ರೇನಿ ತಹಶೀಲ್ದಾರಗಳಿಗೆ ಕೋವಿಡ್ ಆಸ್ಪತ್ರೆಗಳ ನೋಡೆಲ್ ಅಧಿಕಾರಿಗಳಾಗಿ ನೇಮಕ.
* ಕಲ್ಯಾಣ ಮಂಟಪಗಳು, ಹಾಸ್ಟೇಲ್ ಗಳು ಕೋವಿಡ್ ಆಸ್ಪತ್ರೆಗಳಿಗೆ ಮೀಸಲು.
* ರೈಲ್ವೆ ಇಲಾಖೆಯಿಂದ ಬೆಡ್ ಗಳ ಕೋಚ್ ಪಡೆಯಲು ತಿರ್ಮಾನ.
* ಕೋವಿಡ್ ನಿಂದ ಮೃತರಾದ ದೇಹಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ತಂಡ ರಚನೆ.
* ಅಂತ್ಯಕ್ರಿಯೆಗೆ ಬೆಂಗಳೂರಿನಲ್ಲಿ ಹೆಚ್ಚಿನ ಜಾಗ ಗುರುತಿಸಲು ಬೆಂಗಳೂರು ಡಿಸಿಗೆ ಸೂಚನೆ.
* ಮೆಡಿಕಲ್ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ಬೆಡ್ ಗಳು ಮೀಸಲು.
* ಆಸ್ಪತ್ರೆಗಳ ಬೆಡ್ ಪೂರ್ತಿಯಾದ ನಂತರ ಹೊಟೇಲ್ ಗಳ ಕೊಠಡಿಗಳ ಬಳಕೆಗೆ ಸೂಚನೆ.