ನಮ್ಮ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅವೆಲ್ಲ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡುತ್ತೆ ಅನ್ನುವ ನೀರಿಕ್ಷೆ ಇತ್ತು. ಆದರೆ ಕರ್ನಾಟಕ ಬಜೆಟ್ ಮಂಡಿಸಿದ ಬಳಿಕ ನಿರೀಕ್ಷೆ ಹುಸಿಯಾಗಿದೆ ಎಂದು ರಾಜ್ಯ ಬಜೆಟ್ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನ (ಫೆ.16):ನಮ್ಮ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅವೆಲ್ಲ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡುತ್ತೆ ಅನ್ನುವ ನೀರಿಕ್ಷೆ ಇತ್ತು. ಆದರೆ ಕರ್ನಾಟಕ ಬಜೆಟ್ ಮಂಡಿಸಿದ ಬಳಿಕ ನಿರೀಕ್ಷೆ ಹುಸಿಯಾಗಿದೆ ಎಂದು ರಾಜ್ಯ ಬಜೆಟ್ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬರಗಾಲದಲ್ಲಿ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಸರ್ಕಾರ ನೆರವಾಗಿಲ್ಲ. ಈ ಬಜೆಟ್‌ ಕೇವಲ ಗ್ಯಾರಂಟಿಗಳಿಗೆ ಮಾತ್ರ ಸೀಮಿತವಾಗಿದೆ. ನಾನು ನಿನ್ನೆಯೇ ನಿರೀಕ್ಷೆ ಮಾಡಿದಂತೆ ಇದು ವಿಫಲ ಬಜೆಟ್ ಮಂಡನೆಯಾಗಿದೆ ಎಂದರು.

Karnataka Budget 2024 ಜೀವಮಾನದಲ್ಲೇ ಇಂಥ ಕಳಪೆ ಬಜೆಟ್ ನೋಡಿಲ್ಲ -ಬಿಎಸ್‌ವೈ; ಇದು ವಿನಾಶಕಾಲದ ಬಜೆಟ್ ಎಂದ ಎಚ್‌ಡಿಕೆ!

ಇದು ಜನಪರ ಬಜೆಟ್ ಅಲ್ಲ, ಜನರೇ ತಿರಸ್ಕರಿಸುವಂತಹ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಒಂದೇ ಒಂದು ರೂಪಾಯಿ ನೀಡಿಲ್ಲ. ಯಾವುದೇ ಕಾಮಗಾರಿಗೂ ಹಣ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಹಾಸನ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಸಿಎಂ ಅವರ ಪ್ರವಾಸ ಇರೋದ್ರಿಂದ ಕೇವಲ ಆಸ್ಪತ್ರೆಗೆ ಅಲ್ಪ ಹಣ ನೀಡಲಾಗಿದೆ. ಈ ಆಸ್ಪತ್ರೆ ರೇವಣ್ಣನವರೇ ಕಟ್ಟಿಸಿದ್ದರು. ವೈಯಕ್ತಿವಾಗಿ ನಾನು ಈ ಬಜೆಟ್‌ ತಿರಸ್ಕರಿಸುತ್ತೇನೆ. ಇಂದು ಆರ್ಥಿಕ ಸಮಸ್ಯೆ ಇರೋದ್ರಿಂದಲೇ ಇದು ವಿಫಲ ಬಜೆಟ್ ಆಗಿದೆ ಎಂದರು.

ರಾಜ್ಯದ ಜನತೆಗೆ ಮೂರುನಾಮ ಹಾಕಿ ಮೋಸ ಮಾಡಿದ ಬಜೆಟ್: ಕಾರಜೋಳ ವ್ಯಂಗ್ಯ