Asianet Suvarna News Asianet Suvarna News

ಹಿರಿಯ ನಾಗರಿಕರ ಮನೆ ಬಾಗಿಲಿಗೆ ಬರುತ್ತೆ ಆಹಾರ ಧಾನ್ಯ! ಅನ್ನಭಾಗ್ಯ ಅಲ್ಲ, ಏನಿದು ಅನ್ನ ಸುವಿಧಾ ಯೋಜನೆ?

ಸಿಎಂ ಸಿದ್ದರಾಮಯ್ಯ 2024ನೇ ಸಾಲಿನ ಬಜೆಟ್ ಮಂಡನೆ ವೇಳೆ ಅನ್ನ ಸುವಿಧಾ(Anna Suvidha)ಯೋಜನೆ ಪ್ರಕಟಿಸಿದ್ದಾರೆ. ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಘೋಷಿಸಿರುವ ಯೋಜನೆಯಿದು

Karnataka Budget 2024 Anna Suvidha Yojana was announced by the CM Siddaramaiah rav
Author
First Published Feb 16, 2024, 2:23 PM IST

ಬೆಂಗಳೂರು (ಫೆ.16): ಸಿಎಂ ಸಿದ್ದರಾಮಯ್ಯ 2024ನೇ ಸಾಲಿನ ಬಜೆಟ್ ಮಂಡನೆ ವೇಳೆ ಅನ್ನ ಸುವಿಧಾ(Anna Suvidha)ಯೋಜನೆ ಪ್ರಕಟಿಸಿದ್ದಾರೆ.

ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಘೋಷಿಸಿರುವ ಯೋಜನೆಯಿದು. 80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಅನ್ನ ಸುವಿಧಾ ಯೋಜನೆಯನ್ನು ಅವರು ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ. ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ. ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಈ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಜೆಟ್ ಮಂಡನೆ ವೇಳೆ ಕೇಂದ್ರದ ವಿರುದ್ಧ ಸಿಎಂ ಟೀಕೆ; ಬಿಜೆಪಿ ನಾಯಕರು ಆಕ್ರೋಶ, ಸಭಾತ್ಯಾಗ

ಅನ್ನ ಸುವಿಧಾ ಯೋಜನೆಯು ಹೋಮ್ ಡೆಲಿವರಿ ಆ್ಯಪ್ ಮೂಲಕ ಜಾರಿಗೆ ತರಲಾಗುವುದು. ಈ ಯೋಜನೆ ಮೂಲಕ 80 ವರ್ಷ ವಯಸ್ಸು ದಾಟಿದ ವೃದ್ಧರ ಅಥವಾ ವೃದ್ಧೆಯರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ 2024ರ ಜನವರಿ ಅಂತ್ಯದ ವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದೂ ಸಿಎಂ ಬಜೆಟ್​​ನಲ್ಲಿ ತಿಳಿಸಿದರು.

ಕರ್ನಾಟಕ ಬಜೆಟ್ 2024 ಲೈವ್ ಅಪ್‌ಡೇಟ್ಸ್‌ : ಇಂದು ದಾಖಲೆಯ 15ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ

Follow Us:
Download App:
  • android
  • ios