ಆ್ಯಕ್ಸಿಡೆಂಟಲ್ ಪಿಎಂ ಆಯ್ತು, ಇದೀಗ ಆ್ಯಕ್ಸಿಡೆಂಟಲ್ ಸಿಎಂ| ಕರ್ನಾಟಕದ ಆ್ಯಕ್ಸಿಡೆಂಟಲ್ ಸಿಎಂ ಪಾತ್ರ ಯಾರು ಮಾಡ್ತಾರೆ? ಸಿಎಂ ಕುಮಾರಸ್ವಾಮಿ ಬಗ್ಗೆ ಬಿಜೆಪಿ ಲೇವಡಿ| ಟ್ವಿಟ್ಟರ್ ನಲ್ಲಿ ಕುಮಾರಣ್ಣ ಕಾಲೆಳೆದ ಬಿಜೆಪಿ|
ಬೆಂಗಳೂರು(ಡಿ.29): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೀವನ ಕಥೆ ಆಧಾರಿತ, ಬಾಲಿವುಡ್ ನಟ ಅನುಪಮ್ ಖೇರ್ ನಟನೆಯ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ.
ಈ ಮಧ್ಯೆ ಕರ್ನಾಟಕ ರಾಜಕಾರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟಕ ಸಮ್ಮಿಶ್ರ ಸರ್ಕಾರದ ಕಾಲೆಳೆದಿದ್ದು, ‘ಕರ್ನಾಟಕದ ಆ್ಯಕ್ಸಿಡೆಂಟಲ್ ಚೀಫ್ ಮಿನಿಸ್ಟರ್ ಪಾತ್ರವನ್ನು ಯಾರು ಮಾಡ್ತಾರೆ ಎಂದು ಪ್ರಶ್ನಿಸಿದೆ.
ಟ್ವಿಟ್ಟರ್ ನಲ್ಲಿ ಈ ಕುರಿತು ಪ್ರಶ್ನಿಸಿರುವ ರಾಜ್ಯ ಬಿಜೆಪಿ ಘಟಕ, ಒಂದು ವೇಳೆ ಆ್ಯಕ್ಸಿಡೆಂಟಲ್ ಸಿಎಂ ಕುರಿತು ಸಿನಿಮಾ ನಿರ್ಮಾಣವಾದರೆ ಕರ್ನಾಟಕದ ಸಿಎಂ ಕುಮಾರಸ್ವಾಮಿ ಪಾತ್ರ ಯಾರು ಮಾಡುತ್ತಾರೆ ಎಂದು ಕೇಳಿದೆ.
ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಕೇವಲ 37 ಶಾಸಕರನ್ನು ಹೊಂದಿದ್ದರೂ ಮುಖ್ಯಮಂತ್ರಿಯಾಗುವ ಭಾಗ್ಯ ಪಡೆದ ಕುಮಾರಸ್ವಾಮಿ ನಿಜಕ್ಕೂ ಆ್ಯಕ್ಸಿಡೆಂಟಲ್ ಚೀಫ್ ಮಿನಿಸ್ಟರ್ ಎಂದು ಬಿಜೆಪಿ ಲೇವಡಿ ಮಾಡಿದೆ.
