Asianet Suvarna News Asianet Suvarna News

ಕರ್ನಾಟಕ ಬಸವನಾಡು ಮರುನಾಮಕರಣ; ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ

ಕರ್ನಾಟಕ ರಾಜ್ಯಕ್ಕೆ 'ಬಸವನಾಡು' ಎಂಬ ಮರುನಾಮಕರಣ ಮಾಡುವ ವಿಚಾರ ಕುರಿತು ಸಚಿವ ಎಂಬಿ ಪಾಟೀಲ್ ನೀಡಿರುವ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. 

Karnataka basavanadu issue pro Kannadigas outraged agains MB Patil at channapattan rav
Author
First Published Oct 29, 2023, 5:29 PM IST

ಚನ್ನಪಟ್ಟಣ (ಅ.29): ಕರ್ನಾಟಕ ರಾಜ್ಯಕ್ಕೆ 'ಬಸವನಾಡು' ಎಂಬ ಮರುನಾಮಕರಣ ಮಾಡುವ ವಿಚಾರ ಕುರಿತು ಸಚಿವ ಎಂಬಿ ಪಾಟೀಲ್ ನೀಡಿರುವ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. 

ಚನ್ನಪಟ್ಟಣ ನಗರದ ಕಾವೇರಿ ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಕರ್ನಾಟಕ ರಾಜ್ಯವನ್ನು ಬಸವನಾಡು ಎಂದು ಮರುನಾಮಕರಣ ಮಾಡುವ ಕುರಿತು ಹೇಳಿಕೆ ನೀಡಿರುವ ಸಚಿವ ಎಂಬಿ ಪಾಟೀಲರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. 

ಹೆಸರು ಬದಲಾವಣೆ ಮೂಲಕ ರಾಜ್ಯವನ್ನ ಇಬ್ಭಾಗ ಮಾಡುವ ಹುನ್ನಾರ ಮಾಡಲಾಗ್ತಿದೆ. ನಮಗೆ ಬಸವಣ್ಣನವರ ಮೇಲೆ ಅಪಾರ ಗೌರವವಿದೆ. ಆದರೆ ರಾಜಕೀಯಕ್ಕಾಗಿ ಹೆಸರು ಬದಲಾವಣೆ ಮಾಡುವ ಕೆಲಸ ಆಗ್ತಿದೆ. ಹೆಸರು ಬದಲಾವಣೆ ಮಾಡಿ ರಾಜ್ಯ ವಿಂಗಡಿಸುವ ಕೆಲಸ ಆಗ್ತಿದೆ. ಇದನ್ನು ಕನ್ನಡಪರ ಸಂಘಟನೆಗಳು ಸಹಿಸುವುದಿಲ್ಲ ಎಂದು ಕನ್ನಡಪರ ಕಾರ್ಯಕರ್ತರು ಎಂಬಿ ಪಾಟೀಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರು.

ಕರ್ನಾಟಕ 'ಬಸವನಾಡು' ಅಂತಾದ್ರೆ ಬಸವ ವಿಚಾರ ಜಗತ್ತಿಗೆ ಇನ್ನಷ್ಟು ಪ್ರಚಾರ : ಬಸವ ಜಯಮೃತ್ಯುಂಜಯ ಸ್ವಾಮೀಜಿ

ಸಚಿವ ಎಂಬ ಪಾಟೀಲ್ ಮಾಧ್ಯಮದವರೊಂದಿಗೆ ಮಾತಾಡುವ ವೇಳೆ ಕರ್ನಾಟಕವನ್ನು ಬಸವನಾಡು ಎಂದರೆ ಕರೆದರೆ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಅಲ್ಲದೇ ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆಯನ್ನಾಗಿ ಮಾಡುವ ಚಿಂತನೆ ಇದೆ ಎಂದಿದ್ದರು. ಇತ್ತ ಬಸವ ಜಯಮೃತ್ಯುಂಜಯಶ್ರೀಗಳು ಸಹ ಕರ್ನಾಟಕ ಬಸವನಾಡು ಅಂತಾದ್ರೆ ಬಸವತತ್ವ ಜಗತ್ತಿಗೆ ತಿಳಿಯುತ್ತದೆ ಎಂಬಂಥ ಮಾತನಾಡಿದ್ದಾರೆ. ಇದೇ ವೇಳೆ ಜಾಗತಿಕ ಲಿಂಗಾಯತ ಸಮುದಾಯ ಕಾರ್ಯದರ್ಶಿ ಡಾ ಜಮಾದರ್ ಸಹ ಬಸವನಾಡು ಎಂದು ಮರುನಾಮಕರಣ ಮಾಡಿದರೆ ನಮ್ಮ ವಿರೋಧ ಇಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಕನ್ನಡಪರ ಸಂಘಟನೆಗಳು ಕರ್ನಾಟಕ ಹೆಸರು ಬದಲಾವಣೆ ಕುರಿತು ಸರ್ಕಾರದ ಚಿಂತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿವೆ.

ವಿಜಯಪುರ ಬಸವ ಜಿಲ್ಲೆ ಮಾಡುವ ವಿಚಾರದಲ್ಲಿ ಲಿಂಗಾಯತ ಸಮುದಾಯ ಪರವೂ ಇಲ್ಲ, ವಿರೋಧವೂ ಇಲ್ಲ: ಡಾ ಎಸ್‌ಬಿ ಜಾಮದಾರ

Follow Us:
Download App:
  • android
  • ios