Karnataka Assembly Session: ಕಾಗದ ಎಸೆದವರಿಗೆ ಶಿಕ್ಷೆ ನೀಡದೆ ಚಹಾ ಕುಡಿಸಲೇ: ಸ್ಪೀಕರ್ ಕಿಡಿ
ಪ್ರೀತಿ-ವಿಶ್ವಾಸದಿಂದ ಸದನದ ಕಲಾಪ ನಡೆಸುತ್ತಿದ್ದೇನೆ. ಆದರೆ ಸಭಾಧ್ಯಕ್ಷರ ಪೀಠಕ್ಕೆ ಬಿಜೆಪಿಯವರು ಹಾಳೆ ಎಸೆದಿದ್ದು ಕಪ್ಪುಚುಕ್ಕೆಯಾಗಿದೆ. ಹೀಗೆ ಮಾಡಿದವರಿಗೆ ಶಿಕ್ಷೆ ನೀಡದೇ ಚಹಾ ಕೊಡಿಸಲು ಆಗುತ್ತದೆಯೆ? ಸದನದಲ್ಲಿ ಅಶಿಸ್ತು ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಶಾಸಕರಿಗೆ ಎಚ್ಚರಿಸಿದರು.
ವಿಧಾನಸಭೆ (ಜು.20) : ಪ್ರೀತಿ-ವಿಶ್ವಾಸದಿಂದ ಸದನದ ಕಲಾಪ ನಡೆಸುತ್ತಿದ್ದೇನೆ. ಆದರೆ ಸಭಾಧ್ಯಕ್ಷರ ಪೀಠಕ್ಕೆ ಬಿಜೆಪಿಯವರು ಹಾಳೆ ಎಸೆದಿದ್ದು ಕಪ್ಪುಚುಕ್ಕೆಯಾಗಿದೆ. ಹೀಗೆ ಮಾಡಿದವರಿಗೆ ಶಿಕ್ಷೆ ನೀಡದೇ ಚಹಾ ಕೊಡಿಸಲು ಆಗುತ್ತದೆಯೆ? ಸದನದಲ್ಲಿ ಅಶಿಸ್ತು ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಶಾಸಕರಿಗೆ ಎಚ್ಚರಿಸಿದರು.
ಉಪಸಭಾಧ್ಯಕ್ಷರಾಗಿದ್ದ ರುದ್ರಪ್ಪ ಲಮಾಣಿ ಅವರತ್ತ ಬಿಜೆಪಿ ಸದಸ್ಯರು ಹಾಳೆ ಎಸೆದು ಇದರಿಂದ ಸದನದಲ್ಲಿ ಹೈಡ್ರಾಮಾವೇ ನಡೆದು ಬಳಿಕ ಸಂಜೆ ಸದನ ಸಮಾವೇಶಗೊಂಡಾಗ ಮಾತನಾಡಿದ ಅವರು, ಲಮಾಣಿ ಅವರತ್ತ ಪೇಪರ್ ಎಸೆದಿರುವುದು ನೋವಿನ ಸಂಗತಿಯಾಗಿದೆ. ನಾನು ತಾರತಮ್ಯ ತೋರದೇ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಾ ಸದನ ನಡೆಸಿಕೊಂಡು ಹೋಗುತ್ತಿದ್ದೇನೆ. ಆದರೆ ಪೀಠದ ಗೌರವಕ್ಕೆ ಕುತ್ತಾದರೆ ಸಹಿಸುವುದಿಲ್ಲ ಎಂದು ಸಂದೇಶ ರವಾನಿಸಿದರು.
ಸಿಎಂ ಸನ್ನೆ ಮೇರೆಗೆ ಶಾಸಕರ ಸಸ್ಪೆಂಡ್: ಎಚ್‌ಡಿಕೆ ಆರೋಪ!
ಪೀಠದತ್ತ ಪೇಪರ್ ಎಸೆದಿರುವುದು ಕಪ್ಪುಚುಕ್ಕೆಯಾಗಿದೆ. ಇದು ಅಮಾನವೀಯ ಘಟನೆ. ಪೀಠದ ರಕ್ಷಣೆ ಮಾಡಿದ್ದರೆ ಭವಿಷ್ಯದಲ್ಲಿ ಯಾರು ಈ ಪೀಠಕ್ಕೆ ಬರುತ್ತಾರೆ ಎಂದು ಮನಸ್ಸಿಲ್ಲದಿದ್ದರೂ ನೋವಿನಿಂದ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಈ ಆದೇಶ ಪಾಲಿಸುವ ಬದಲು ಅಶಿಸ್ತು ಪ್ರದರ್ಶಿಸಿದ್ದಾರೆ. ಶಿಕ್ಷೆ ನೀಡದೇ ಇವರಿಗೆ ಚಹಾ ಕೊಡಿಸಬೇಕಿತ್ತೇ? ಸದನದಲ್ಲಿ ಅಶಿಸ್ತು ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವಿಪಕ್ಷ ತೀರ್ಮಾನ
ಬೆಂಗಳೂರು (ಜು.20) : ವಿಧಾನಸಭೆಯಲ್ಲಿ ಉಂಟಾದ ಗದ್ದಲ, ಕೋಲಾಹಲ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಗುರುವಾರ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿದ್ದಾರೆ.
ಈ ಸಂಬಂಧ ವಿಧಾನಸಭೆ ಕಾರ್ಯದರ್ಶಿಗೆ ನೊಟೀಸ್ ನೀಡಿ ಅವಿಶ್ವಾಸ ನಿರ್ಣಯ ಮಂಡಿಸಲು ಅನುಮತಿ ಪಡೆದುಕೊಳ್ಳಲಾಗಿದೆ. ಸಭಾಧ್ಯಕ್ಷರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ಗುರುವಾರ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು. ಕಾರ್ಯದರ್ಶಿಗೆ ನೀಡಿರುವ ನೊಟೀಸ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಆರ್.ಅಶೋಕ್, ಸುನೀಲ್ ಕುಮಾರ್ ಮತ್ತು ಎರಡು ಪಕ್ಷಗಳ ಹಲವು ಶಾಸಕರು ಸಹಿ ಮಾಡಿದ್ದಾರೆ.
ದರ್ಪ, ದಬ್ಬಾಳಿಕೆ, ದುರಂಹಕಾರ ಹೊರಬಿದ್ದಿದೆ, ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ
ಶಿಷ್ಟಾಚಾರ ಉಲ್ಲಂಘಿಸಿ ಐಎಎಸ್ ಅಧಿಕಾರಿಗಳನ್ನು ಖಾಸಗಿ ಸಭೆಗೆ ಬಳಕೆ ಮಾಡಿರುವ ವಿಚಾರದಲ್ಲಿ ವಿಧಾನಸಭೆಯಲ್ಲಿ ಉಂಟಾದ ಗದ್ದಲದ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್ ಭೋಜನ ವಿರಾಮಕ್ಕೆ ಬಿಡುವು ನೀಡದ ಕಾರಣಕ್ಕೆ ಬಿಜೆಪಿ ಸದಸ್ಯರು ಆಕ್ರೋಶಗೊಂಡರು. ಈ ವೇಳೆ ಪೀಠದಲ್ಲಿ ಉಪಸ್ಥಿತರಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಂಬಾಣಿಗೆ ಪೇಪರ್ ಹರಿದು ಎಸೆದರು. ಆಗ ಉಪಸಭಾಧ್ಯಕ್ಷರು ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆದಾಗ ಸದನವನ್ನು ಮುಂದೂಡಲಾಯಿತು. ಆಗ ಸಭಾಧ್ಯಕ್ಷರ ನಡೆಯನ್ನು ವಿರೋಧಿಸಿ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನಿಸಿದೆ.