ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷ ಭರ್ಜರಿ ಪ್ರಚಾರ, ರೋಡ್ ನಡೆಸಿಯೂ ಹೀನಾಯವಾಗಿ ಸೋಲು ಕಂಡಿದೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದೇ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದವು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮತದಾರ ತಲೆಕೆಳಗಾಗಿದೆ. 


ಬೆಂಗಳೂರು (ಮೇ.13) :  ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷ ಭರ್ಜರಿ ಪ್ರಚಾರ, ರೋಡ್ ನಡೆಸಿಯೂ ಹೀನಾಯವಾಗಿ ಸೋಲು ಕಂಡಿದೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದೇ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದವು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮತದಾರ ತಲೆಕೆಳಗಾಗಿದೆ. 

ಬಿಜೆಪಿ ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ಇದರ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ರಾಜ್ಯಪಾಲರು ಸ್ವೀಕರಿಸಿದ್ದಾರೆ.

Karnataka election result: ನರೇಂದ್ರ ಮೋದಿ ಪ್ರಚಾರ ಮಾಡಿದ ಅನೇಕ ಕಡೆ ಬಿಜೆಪಿ ಸೋಲು!...

Read more at: https://kannada.asianetnews.com/latest-news

ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿಯವರು, ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ನಾನೇ ಹೊರತುತ್ತೇನೆ. I take responsibility ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣ ಬಗ್ಗೆ ಕುಳಿತು ಚರ್ಚಿಸುತ್ತೇವೆ ಎಂದರು.

ನಮ್ಮ ವೋಟ್ ಬ್ಯಾಂಕ್ ಎಷ್ಟು ಆಗಬೇಕಿತ್ತೋ ಅದು ಆಗಲಿಲ್ಲ. ಪಕ್ಷದ ಹಿನ್ನಡೆಗೆ ಸಾಕಷ್ಟು ಕಾರಣಗಳಿವೆ. ಈ ಬಗ್ಗೆ ಕುಳಿತು ಚರ್ಚಿಸುತ್ತೇವೆ. ನಮ್ಮದು ರಾಜಕೀಯ ಪಕ್ಷ. ರಾಷ್ಟ್ರೀಯ ಪ್ರಾಮುಖ್ಯತೆ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಈ ಸೋಲು ಕಂಡಿರಬಹುದು. ಆದರೆ ಲೋಕಸಭಾ ಎಲೆಕ್ಷನ್ ಗೆ ಪಕ್ಷವನ್ನು ಗಟ್ಟಿಗಳಿಸುತ್ತೇವೆ ಎಂದರು. ಇದೇ ವೇಳೆ ಮೋದಿ ರೋಡ್ ಶೋ ಮಾಡಿದ ಕಡೆ ಪಕ್ಷ ಸೋಲು ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಆ ರೀತಿ ವಿಶ್ಲೇಷಣೆ ಸರಿ ಅಲ್ಲ ಎಂದರು.

Karnataka Election Result 2023 ಹೀನಾಯ ಸೋಲಿನ ಮುಖಭಂಗ, ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ!

ಮತ್ತೆ ಪುಟಿದೇಳುತ್ತೇವೆ: 

ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಸೋಲಾಗಿದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವೋಟ್‌ಬ್ಯಾಂಕ್ ಸರಿಯಾಗಿ ಕ್ರೋಢಿಕರಣವಾಗಿಲ್ಲ. ವಿಪಕ್ಷಗಳು ಬೇಗನೆ ಪ್ರಚಾರ ಶುರು ಮಾಡಿದ್ರು. ಅನೇಕ ಕಾರಣಗಳು ಹಿನ್ನೆಡೆಗೆ ಕಾರಣವಾಗಿವೆ. ನಾವು ಹಿಂದೆ ಇಂತಹ ಎಷ್ಟೋ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವೆ. ಸೋಲು-ಗೆಲುವು ಕಂಡಿದ್ದೇವೆ. ಗೆಲುವಿಗೆ ಇದ್ದ ಹಾಗೆ ಸೋಲಿಗೆ ಹಲವು ಕಾರಣಗಳಿವೆ. ಎಲ್ಲವನ್ನೂ ಕುಳಿತು ಚರ್ಚೆ ಮಾಡ್ತೀವಿ. ಯಾವ ಕಾರಣದಿಂದ ಹಿನ್ನೆಡೆ, ಏನು ವ್ಯತ್ಯಾಸ ಆಗಿದೆ ಎಂದು ಚರ್ಚಿಸುತ್ತೇವೆ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪುಟಿದೇಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಹಿನ್ನೆಡೆಗೆ ನಟ ಸುದೀಪ ಕಾರಣವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ರಾಜಕಾರಣಿಯಲ್ಲ. ಪಕ್ಷದ ಸೋಲಿಗೆ ಅವರ ಹೊಣೆ ಮಾಡುವುದು ಸರಿಯಲ್ಲ.ಸೋಲಿನ ಹೊಣೆ ನಾನು ಹೊರುತ್ತೇನೆ ಎಂದು ಹೇಳಿದ್ದೇನಲ್ಲ ಪ್ರಶ್ನಿಸಿದರು.