ಮೈಸೂರು, (ಜ.09): ಬಲಪಂಥಿ ಸಿದ್ಧಾಂತಗಳ ವಿರುದ್ಧ ಕಟುವಾಗಿ ಟೀಕಿಸುವ ಸಾಹಿತಿ, ಚಿಂತಕ ಕೆ.ಎಸ್. ಭಗವಾನ್ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ ಅಂದ್ರೆ ನಂಬಲು ಸಾಧ್ಯನಾ..?

ಯೆಸ್... ಅಚ್ಚರಿ ಎನ್ನಿಸಿದರೂ ನಂಬಲೇಬೇಕು. ಪ್ರೊ.ಕೆ.ಎಸ್. ಭಗವಾನ್ ಅವರು ಶುಕ್ರವಾರ ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ

ಹೌದು.. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಲು ನೇರವಾಗಿ ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟಿದ್ದಾರೆ.

ಮನುಕುಲ ಉಳಿಸಲು ಸಜ್ಜಾದ ಭಾರತ, ತಗಲಾಕ್ಕೊಂಡ್ರಾ ರಾಧಿಕಾ? ಜ.9ರ ಟಾಪ್ 10 ಸುದ್ದಿ! 

ಶಾಸ್ತ್ರೀಯ ಕನ್ನಡ ಸ್ವಾಯತ್ತ ಕ್ರಿಯಾ ಸಮಿತಿ ಸದಸ್ಯರೊಂದಿಗೆ ಭಗವಾನ್ ಅವರು ಕಳೆದ ರಾತ್ರಿ ಬಿಜೆಪಿ ಕಚೇರಿಯಲ್ಲಿ ಸಚಿವ  ಸೋಮಶೇಖರ್ ಅವರನ್ನು ಭೇಟಿ ಮಾಡಿ,  ಶಾಸ್ತ್ರೀಯ ಕನ್ನಡ ಸ್ವಾಯತ್ತ ಕ್ರಿಯಾ ಸಮಿತಿಯು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಮನವಿ ಮಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ಶೈಕ್ಷಣಿಕ ನೀತಿಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ನೀತಿಗಳು ಈ ಅಧ್ಯಯನ ಕೇಂದ್ರಕ್ಕೆ ಸಂಚು ತರುತ್ತಿವೆ. ಈ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವುದು ತಿಳಿದು ಬಂದಿದೆ. ಆದ್ದರಿಂದ ಕೂಡಲೇ ಈ ಅಧ್ಯಯನ ಕೇಂದ್ರವನ್ನು ಸ್ವಾಯತ್ತತೆ ನೀಡುವಂತೆ ಆಗ್ರಹಿಸಿದರು.