ಬೆಂಗಳೂರು (ಅ.17):  ರಾಜ್ಯ ವನ್ಯಜೀವಿ ಮಂಡಳಿಯನ್ನು ರಾಜ್ಯ ಸರ್ಕಾರ ಶುಕ್ರವಾರ ಪುನರ್‌ ರಚಿಸಿದ್ದು, ಹಿರಿಯ ಪತ್ರಕರ್ತ ಕನ್ನಡಪ್ರಭದ ವಿನೋದ್‌ ಕುಮಾರ್‌ ಬಿ.ನಾಯ್ಕ್ ಸೇರಿದಂತೆ 15 ಮಂದಿ ಮಂಡಳಿಯ ಸದಸ್ಯರಾಗಿದ್ದಾರೆ.

ರಾಜ್ಯದ ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಮಹತ್ವದ ಸಂಸ್ಥೆ ಎನಿಸಿದ ವನ್ಯಜೀವಿ ಮಂಡಳಿಯಲ್ಲಿ ಮೂರು ಜನ ಶಾಸಕರು, ಎರಡು ಸರ್ಕಾರೇತರ ಸಂಘ ಸಂಸ್ಥೆಗಳು ಸ್ಥಾನ ಪಡೆದಿದ್ದು, ನೂತನ ಮಂಡಳಿಯ ಕಾರ್ಯಾವಾಧಿ ಮೂರು ವರ್ಷವಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷರು ಮತ್ತು ಅರಣ್ಯ ಇಲಾಖೆ ಸಚಿವ ಆನಂದ್‌ ಸಿಂಗ್‌ ಉಪಾಧ್ಯಕ್ಷರಾಗಿರುವ ಮಂಡಳಿಯನ್ನು ಶುಕ್ರವಾರ ಪುನರ್‌ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ನೂತನವಾಗಿ ರಚನೆಯಾಗಿರುವ ಸದಸ್ಯರ ವಿವರ: ವಿಧಾನಸಭಾ ಸದಸ್ಯರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಪೂರ್ಣಿಮಾ ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ.

ಪ್ರಾಣಿಗಳ ಈ ಅಭ್ಯಾಸ ಫಾಲೋ ಮಾಡಿದ್ರೆ ಆಯಸ್ಸು ಗಟ್ಟಿಯಾಗುತ್ತಂತೆ! ...

ವಿಶೇಷ ತಜ್ಞರು: ವಿನೋದ್‌ ಕುಮಾರ್‌ ಬಿ. ನಾಯ್ಕ್., ಚೇತನ್‌ ಬಿ.ಎನ್‌.ಬಸವರಾಜು., ಡಾ.ಎಂ.ಆರ್‌.ಸೋಮಶೇಖರ್‌., ಡಾ.ಎನ್‌.ಸಿ.ಶಿವಪ್ರಕಾಶ್‌., ಅಲೋಕ್‌ ವಿಶ್ವನಾಥ್‌., ಜೆ.ಎಸ್‌.ನವೀನ್‌., ದಿನೇಶ್‌ ಸಿಂಗಿ., ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ಎಸ್‌.ಎನ್‌.ಚಿಕ್ಕೆರೂರು., ತ್ಯಾಗ್‌ ಉತ್ತಪ್ಪ ಮತ್ತು ಜೋಸೆಫ್‌ ಹೂವರ್‌.

ಎನ್‌ಜಿಒಗಳು: ವೈಲ್ಡ್‌ ಲೈಫ್‌ ಆಸೋಸಿಯೇಷನ್ಸ್‌ ಆಫ್‌ ಸೌತ್‌ ಇಂಡಿಯಾದ ಅಧ್ಯಕ್ಷ ಜಿ. ಸುಶೀಲ್‌., ಬನ್ನೇರುಘಟ್ಟವೈಲ್ಡ್‌ ಲೈಫ್‌ ಆಸೋಷಿಯೇನ್‌ನ ಟ್ರಸ್ಟಿಸಿದ್ದಾರ್ಥ ಗೋಯಂಕಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.