Asianet Suvarna News Asianet Suvarna News

'ಮುಸ್ಲಿಂ ಮಹಿಳೆಗೆ ಪರ್ಮನೆಂಟ್ ಗಂಡ' ವಿವಾದ; ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆರಡು ಎಫ್‌ಐಆರ್ ದಾಖಲು!

ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಸಂಬಂಧ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಶೇಷಾದ್ರಿಪುರಂ ಎರಡೂ ಠಾಣೆಯಲ್ಲಿ ಇಂದು ಪ್ರತ್ಯೇಕ ದೂರು ದೂರು ದಾಖಲಾಗಿವೆ.

Kalladka prabhakar bhat controversy statement about muslim women issue FIR two more complaints rav
Author
First Published Dec 30, 2023, 4:13 PM IST

ಮಂಡ್ಯ (ಡಿ.30) : ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಸಂಬಂಧ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಶೇಷಾದ್ರಿಪುರಂ ಎರಡೂ ಠಾಣೆಯಲ್ಲಿ ಇಂದು ಪ್ರತ್ಯೇಕ ದೂರು ದೂರು ದಾಖಲಾಗಿವೆ.

'ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ' ಹೇಳಿಕೆಗೆ ಕಲ್ಲಡ್ಕ ಪ್ರಭಾಕರ್ ವಿರುದ್ಧ ಎಫ್‌ಐಆರ್!

ಮುಸಲ್ಮಾನ ಮಹಿಳೆಯರ ಅವಹೇಳನ, ತುಚ್ಛವಾಗಿ ಮಾತಾಡಿದ್ದಾರೆ ರಹೀಬ್ ವುಲ್ಲಾ ಹಾಗೂ ಉಸ್ಮಾನ್  ಎಂಬುವವರು ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದಾರೆ. ಎನ್ ಸಿಆರ್ ದಾಖಲಿಸಿಕೊಂಡ ಎರಡು ಠಾಣೆ ಪೊಲೀಸರು. 

ಹಿನ್ನೆಲೆ ಏನು?

ಡಿಸೆಂಬರ್ 24 ರಂದು ಮಂಡ್ಯದಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಿಕಾರಿಗಳನ್ನ ಉದ್ದೇಶಿಸಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ಟರು,ಮುಸ್ಲಿಂ ಮಹಿಳೆಯರಿಗೆ ಮೊದಲು ಶಾಶ್ವತವಾದ ಗಂಡನಿರಲಿಲ್ಲ. ಅವರಿಗೆ ಪರ್ಮನೆಂಟ್‌ ಗಂಡನನ್ನು ಕೊಟ್ಟಿರುವುದು ಮೋದಿ ಸರ್ಕಾರ. ಮುಸ್ಲಿಂ ಮಹಿಳೆಯರು ಲವ್‌ ಜಿಹಾದ್‌ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್ಟರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಲ್ಲಡ್ಕ ಭಟ್ಟರನ್ನು ಬಂಧಿಸುವಂತೆ ಮುಸ್ಲಿಂ ಸಮುದಾಯ, ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದರು ಈ ಬಗ್ಗೆ ಮಂಡ್ಯದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈಗಾಗಲೇ ಹೈ ಕೋರ್ಟ್ ನಿಂದ ತಡೆಯಾಜ್ಞೆ ಪಡೆದಿರೋ ಕಲ್ಲಡ್ಕ ಪ್ರಭಾಕರ್ ಭಟ್ಟರು. ಇದೀಗ ಶೇಷಾದ್ರಿಪುರ, ಡಿಜೆ ಹಳ್ಳಿಯಲ್ಲಿ ಪ್ರತ್ಯೇಕ ದೂರು ದಾಖಲು ಮಾಡಲಾಗಿದೆ.

ಹಿಂದುಗಳೇ ದಯವಿಟ್ಟು ಮೂರು ಮಕ್ಕಳು ಮಾಡಿಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ

Follow Us:
Download App:
  • android
  • ios