Asianet Suvarna News Asianet Suvarna News

ಹಿಂದುಳಿದ ಸಮುದಾಯಕ್ಕೆ ರಾಜಕೀಯ ಮೀಸಲಾತಿ: ನ್ಯಾ.ಭಕ್ತವತ್ಸಲ ಹೇಳಿದ್ದೇನು?

ಹಿಂದುಳಿದ ಸಮುದಾಯಕ್ಕೆ ರಾಜಕೀಯ ಮೀಸಲಾತಿ ನೀಡುವ ವಿಚಾರವಾಗಿ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗದ ವರದಿ ಜಾರಿಗೆ ತಿರ್ಮಾನ ಹಿನ್ನೆಲೆಯಲ್ಲಿ ಆಯೋಗ ಕೊಟ್ಟಿರುವ ವರದಿಯ ಎಲ್ಲಾ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು. 

Justice K Bhakthavatsala Talks Over Political Reservation For Backward Community gvd
Author
First Published Oct 7, 2023, 12:42 PM IST

ಬೆಂಗಳೂರು (ಅ.07): ಹಿಂದುಳಿದ ಸಮುದಾಯಕ್ಕೆ ರಾಜಕೀಯ ಮೀಸಲಾತಿ ನೀಡುವ ವಿಚಾರವಾಗಿ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗದ ವರದಿ ಜಾರಿಗೆ ತಿರ್ಮಾನ ಹಿನ್ನೆಲೆಯಲ್ಲಿ ಆಯೋಗ ಕೊಟ್ಟಿರುವ ವರದಿಯ ಎಲ್ಲಾ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಸರ್ಕಾರವೂ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಮರುಪರಿಶೀಲಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಆಯೋಗದ ಮುಖ್ಯಸ್ಥ ನ್ಯಾ.ಕೆ.ಭಕ್ತವತ್ಸಲ ಆಗ್ರಹಿಸಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಅವರು, ಐದು ಶಿಫಾರಸ್ಸುಗಳ ಪೈಕಿ ಮೂರು ಶಿಫಾರಸ್ಸುಗಳನ್ನು ಮಾತ್ರ ಒಪ್ಪಿದ್ದಾರೆ. 

ಆದರೆ ಒಳ ಮೀಸಲಾತಿ ನೀಡಬೇಕು ಅನ್ನೋ ಶಿಫಾರಸ್ಸು ಒಪ್ಪಿಲ್ಲ. ಒಳ ಮೀಸಲಾತಿ ಶಿಫಾರಸ್ಸು ಒಪ್ಪಿದ್ದರೆ ನಿರ್ಲಕ್ಷಿತ ಸಮುದಾಯಕ್ಕೆ ಅನುಕೂಲ ಆಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ತಮ್ಮ ನಿರ್ಣಯವನ್ನು ಮರುಪರಿಶೀಲನೆ ಮಾಡಬೇಕು. ನಾಲ್ಕು ಹಂತಗಳಲ್ಲಿ ಮೀಸಲಾತಿ ವರ್ಗೀಕರಣ ಮಾಡಿ ನೀಡಲಾಗಿದೆ. ಸರಿಯಾದ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಎಲ್ಲರಿಗೂ ರಾಜಕೀಯ ಅವಕಾಶ ಸಿಗುವಂತಹ ತಿರ್ಮಾನ ಆಗಬೇಕು ಎಂದು ನ್ಯಾಯಮೂರ್ತಿ ಕೆ.ಭಕ್ತವತ್ಸಲ ತಿಳಿಸಿದರು.

ಸಿಎಂ ಜತೆ ರಹಸ್ಯ ಮಾತುಕತೆ ನಡೆದಿಲ್ಲ, ನಡೆದರೂ ಹೇಳಲ್ಲ: ಶಾಮನೂರು ಶಿವಶಂಕರಪ್ಪ

ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡುವ ವಿಚಾರವಾಗಿ, ಅಧ್ಯಯನ ವರದಿಗಳಿಗೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಜೀವನ ಮಾದರಿ. ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡಬೇಕೇಂಬ ವರದಿಯಲ್ಲಿ ನರೇಂದ್ರ ಮೋದಿ ಉಲ್ಲೇಖಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನ ಉಲ್ಲೇಖಿಸಿ ಮೀಸಲಾತಿಯ ಪ್ರತಿಪಾದನೆ ಮಡಲಾಗಿದೆ. ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗದ ವರದಿಯಲ್ಲಿ ಮೋದಿ ಕುರಿತು ವಿವರಣೆ ನೀಡಿದ್ದು, ಹಿಂದುಳಿದ ವರ್ಗಕ್ಕೆ ಸೇರಿರುವ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪ್ರವೇಶದ ಕುರಿತು ಪ್ರಸ್ತಾಪ ಮಾಡಲಾಗಿದೆ.

ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗದ ವರದಿಯಲ್ಲಿ ಏನಿದೆ?: ಸಾಮಾನ್ಯವಾಗಿ ಬೇರೆ ವೃತ್ತಿ ಮಾಡಿ ಜನರು ರಾಜಕೀಯ ಪ್ರವೇಶಿಸುತ್ತಾರೆ. ಆದರೆ ಬದಲಾದ ಸಮಯದಲ್ಲಿ ಜನರು ನೇರವಾಗಿ ರಾಜಕೀಯ ಪ್ರವೇಶಿಸುತ್ತಿದ್ದಾರೆ. ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ನರೇಂದ್ರ ಮೋದಿ ಸಂಸ್ಥೆಯೊಂದರಲ್ಲಿ ಸೇವಕ್ ಆಗಿದ್ದರು. ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ 'ಸೇವಕ್‌' ಆಗಿ ಕೆಲಸ ಮಾಡಿದ್ದಾರೆ. ನಂತರವೇ ಅವರು ರಾಜಕೀಯ ಪ್ರವೇಶಿಸಿದರು ಎಂಬುದು ಉಲ್ಲೇಖನೀಯ.

ಬಿಬಿಎಂಪಿ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಕೊಟ್ಟ ಪಾಲಿಕೆ: ಆದರೆ ಶಾಸಕ ಮುನಿರತ್ನಗೆ ಶಾಕ್‌!

ಒಂದೇ ವರ್ಷದಲ್ಲಿ ಯಾರೊಬ್ಬರು ಸಚಿವ, ಸಂಸದ, ಸಿಎಂ, ಪ್ರಧಾನಿಯಾಗಲು ಸಾಧ್ಯವಿಲ್ಲ. ರಾಜಕೀಯಕ್ಕಾಗಿ ಅನೇಕ ವರ್ಷಗಳ ತಯಾರಿ ಮತ್ತು ಪರಿಶ್ರಮದ ಅಗತ್ಯವಿದೆ. ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ಅಗತ್ಯವಿದೆ. ಮೀಸಲಾತಿ ಇಲ್ಲದಿದ್ದರೆ ಸ್ಥಳೀಯ ಸರ್ಕಾರದಲ್ಲಿ ಭಾಗವಹಿಸುವ ಹಕ್ಕು ಇಲ್ಲದಂತಾಗುತ್ತದೆ. ಜೊತೆಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಅವರಿಗೆ ನಿರಾಕರಿಸಿದಂತಾಗುತ್ತದೆ. ಪ್ರಧಾನಿ ಮೋದಿ ಉಲ್ಲೇಖಿಸಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

Follow Us:
Download App:
  • android
  • ios