ಮಂಗಳೂರಿಗೆ ಹೊರಟ್ಟಿದ್ದ ಫ್ಲೈಟಲ್ಲಿ ಕಾಣಿಸಿಕೊಂಡ ಹೊಗೆ| ಪ್ರಯಾಣಿಕರು ಸೇಫ್

ಬೆಂಗಳೂರು[ಡಿ.28]: ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದ ಜೆಟ್‌ ಏರವೇಸ್‌ ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣದಿಂದ ಹೊಗೆ ಕಾಣಿಸಿಕೊಂಡ ಘಟನೆ ಗುರುವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಕ್ಷಣವೇ ದೋಷಕ್ಕೆ ತುತ್ತಾದ ವಿಮಾನದಲ್ಲಿದ್ದ 71 ಪ್ರಯಾಣಿಕರನ್ನು ಬೇರೆ ವಿಮಾನಕ್ಕೆ ಸ್ಥಳಾಂತರಿಸಿ ಮಂಗಳೂರಿಗೆ ಕಳುಹಿಸಕೊಡಲಾಗಿದೆ. ಗುರುವಾರ ಬೆಳಗ್ಗೆ 7ರ ವೇಳೆಗೆ ಘಟನೆ ನಡೆದಿದೆ. ಬ್ರೇಕ್‌ನಲ್ಲಿ ಅತಿಯಾದ ಉಷ್ಣತೆಯ ಕಾರಣ ಹೊಗೆ ಕಾಣಿಸಿಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಿಂದ ವಿಮಾನವು 1 ಗಂಟೆ 20 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸಿತು.