Asianet Suvarna News Asianet Suvarna News

Shiradi Ghat : ಹೆಲಿಕಾಪ್ಟರ್ ನಲ್ಲಿ ಓಡಾಡೋರಿಗೆ, ಜನರ ಕಷ್ಟ ಅರ್ಥ ಆಗೋದಿಲ್ಲ

ಶಿರಾಡಿ ಘಾಟ್ ಮತ್ತೆ ಬಂದ್ ಮಾಡುವ ವಿಚಾರಕ್ಕೆ ಕಿಡಿ
ಒಂದು ಘಾಟ್ ರಸ್ತೆ ಸರಿ ಮಾಡೋಕೆ 15 ವರ್ಷ ಬೇಕಾ ಎಂದು ಪ್ರಶ್ನೆ
ಬಿಜೆಪಿ ನಾಯಕರ ವರ್ತನೆಗೆ ಕಿಡಿ ಕಾರಿದ ಮಾಜಿ ಸಚಿವ

JDS MLA HD Revanna On Shiradhi  Ghat Band issue and Protest Near CM Home Office san
Author
Bengaluru, First Published Jan 18, 2022, 4:46 PM IST

ಬೆಂಗಳೂರು (ಜ. 18): ಮಳೆ ಇರ್ಲಿ, ಇಲ್ದೆ ಇರ್ಲಿ ಕರ್ನಾಟಕದ ಜನರಿಗೆ ಶಿರಾಡಿ ಘಾಟ್ ನ (Shiradi Ghat) ಗೋಳು ತಪ್ಪಿದ್ದಲ್ಲ. ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಶಿರಾಡಿ ಘಾಟ್ ಅನ್ನು ಆರು ತಿಂಗಳು ಬಂದ್ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಲೋಕೋಪಯೋಗಿ ಸಚಿವ ಹಾಗೂ ಹೊಳೇನರಸೀಪುರದ (Holenarasipura) ಜೆಎಡಿಎಸ್ (JDS) ಶಾಸಕ (MLA) ಎಚ್ ಡಿ ರೇವಣ್ಣ (HD Revanna), ಶಿರಾಡಿ ಘಾಟ್ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡನೆ ಮಾಡಿದ್ದಾರೆ. ಒಂದು ಘಾಟ್ ರಸ್ತೆಯನ್ನು ಸರಿ ಮಾಡೋಕೆ 15 ವರ್ಷಗಳು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ಮುಖ್ಯಮಂತ್ರಿಯ ಮನೆಯ ಮುಂದೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಾನು ಮಂತ್ರಿಯಾಗಿದ್ದಾಗ ಶಿರಾಡಿ ಘಾಟ್ ಅನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಕ್ರಮ ವಹಿಸಿದ್ದೆ. ಆದರೆ, ಈಗ ಹಾಗಾಗುತ್ತಿಲ್ಲ. ಬೇಕಾಬಿಟ್ಟಿಯಾಗಿ ಘಾಟ್ ಅನ್ನು ಬಂದ್ ಮಾಡಲಾಗುತ್ತಿದೆ ಎಂದರು. ಅದಲ್ಲದೆ, ಇದು ರಾಜ್ಯ ಬಿಜೆಪಿ ಅಧ್ಯಕ್ಷರು ಪ್ರತಿನಿತ್ಯ ಓಡಾಡಿದ ದಾರಿ. ಆದ್ರೆ ಈಗ ಅವರು ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡ್ತಾರೆ. ಜನರ ಕಷ್ಟಗಳು ಅವರಿಗೆ ಅರ್ಥ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ:   ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಎಂಎಸ್‍ಸಿ ಸೈಕಾಲಜಿ ಮತ್ತು ಫುಡ್ ಮತ್ತು ನ್ಯೂಟ್ರೀಷಿಯನ್ ಕೋರ್ಸ್‍ಗಳ ಆರಂಭಕ್ಕೆ ಆಗ್ರಹಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು ಏಕಾಂಗಿ ಧರಣಿ ನಡೆಸಿದರು. ಆದರೆ, ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ (Chief Minister)ಬಸವರಾಜ ಬೊಮ್ಮಾಯಿ (Basavaraj Bommai) ಕರೆ ಮಾಡಿ ಹೇಳಿರುವುದರಿಂದ ಧರಣಿ ಮುಗಿಸಿದ್ದೇನೆ ಎಂದು ತಿಳಿಸಿದ್ದಾರೆ. "ಕುಮಾರಸ್ವಾಮಿ ಸಿಎಂ ಆಗಿದ್ದ ಕಾಲದಲ್ಲಿ ಹೊಳೆನರಸೀಪುರ ಕಾಲೇಜಿಗೆ ಎರಡು ಸ್ಬಾತಕೋತ್ತರ ಕೋರ್ಸ್ ಗೆ ಮೈಸೂರು ವಿವಿಯಿಂದ ಅನುಮತಿ ಕೊಡಲಾಗಿತ್ತು. ಆದರೆ ಉನ್ನತ ಶಿಕ್ಷಣ ಸಚಿವರು ಇದನ್ನು ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲಾ ಅನುದಾನಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ' ಎಂದು ಬೇಸರ ವ್ಯಕ್ತಪಡಿಸಿದರು.

Weekend-Night Curfew ವೀಕೆಂಡ್‌, ನೈಟ್‍ ಕರ್ಫ್ಯೂ ಸಂಬಂಧ ಅಶ್ವತ್ಥ್ ನಾರಾಯಣ ಭೇಟಿಯಾದ ಹೋಟೆಲ್ ಮಾಲೀಕರ ಸಂಘ
ಕಾಮಗಾರಿಗಳು ನಿಂತರೆ ತೊಂದರೆ ಇಲ್ಲ, ಆದ್ರೆ ಬಡವರು ಓದೋ ಕಾಲೇಜು ಯಾಕೆ ನಿಲ್ಲಬೇಕು. ಸರ್ಕಾರ ಯಾವುದೇ ಮೂಲಭೂತ ಸೌಕರ್ಯಗಳನ್ನು ಕೊಡದೇ ಹೋದ್ರೂ ಚಿಂತೆಯಿಲ್ಲ. ನಾವೇ ಕಾಲೇಜುಗಳನ್ನು ಅಭಿವೃದ್ಧಿ ಮಾಡ್ತೀವಿ. ಬಡವರ ಮಕ್ಕಳು ಓದೋ ಕಾಲೇಜಿನಲ್ಲಿ ರಾಜಕೀಯವನ್ನು ತರೋದು ಬೇಡ ಎಂದು ರೇವಣ್ಣ ಹೇಳಿದ್ದಾರೆ. ನಮ್ಮ ಮಕ್ಕಳರು ಯಾರೂ ಈ ಕಾಲೇಜಿನಲ್ಲಿ ಓದುತ್ತಿಲ್ಲ. ಹಾಗಿದ್ದರೂ ಉದ್ದೇಶಪೂರ್ವಕವಾಗಿ ಸಚಿವರು ಇದನ್ನು ತಿರಸ್ಕಾರ ಮಾಡಿದ್ದು ಏಕೆ ಎನ್ನುವುದು ಅರ್ಥವಾಗಿಲ್ಲ. ಸರ್ಕಾರ ಪಾಪರ್ ಆಗಿದ್ರೆ ಮುಕ್ತವಾಗಿ ಹೇಳಿಬಿಡಲಿ. ನಾನೇ ಟೀಚರ್ ಗಳಿಗೆ ಸಂಬಳ ಕೊಡುತ್ತೇನೆ. ವಿವಿಗಳು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಈಗಾಗಲೇ ಒಪ್ಪಿಗೆ ಕೊಟ್ಟಿದ್ದರೂ ಸಚಿವರು ಒಪ್ಪಿಗೆ ಕೊಡದೇ ಇರಲು ಕಾರಣವೇನು ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

Anti conversion Bill : ಕಾಂಗ್ರೆಸ್ - ಬಿಜೆಪಿ ನಡುವೆ ಮ್ಯಾಚ್‌ ಫಿಕ್ಸಿಂಗ್‌ : ರೇವಣ್ಣ
ಈ ವಿಚಾರವಾಗಿ ಧರಣಿ ನಡೆಸಿದ ಬಳಿಕ, ಶುಕ್ರವಾರ ಈ ಕುರಿತಾಗಿ ಸಭೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತಾಗಿ ಸಭೆ ಮಾಡ್ತೀನಿ ಈಗ ಪ್ರತಿಭಟನೆಯನ್ನು ಕೈಬಿಡಿ. ನನ್ನನ್ನೇ ಕರೆದು ಬೇಡಿಕೆ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಅವರು ಮನವಿ ಮಾಡಿದ್ದರಿಂದ ಧರಣಿ ಮುಗಿಸಿದ್ದೇನೆ ಎಂದು ತಿಳಿಸಿದರು. ಅದಲ್ಲದೆ, ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಅವರಿಗೆ ತಿಳಿಸಿದ್ದೇನೆ. ಅವರು ಕೂಡ ಎರಡು ದಿನ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ ಎಂದರು.

ಬಿಜೆಪಿ ಅವರು ರಿಸಲ್ಟ್ ತಡೆ ಹಿಡಿದಿದ್ದಾರೆ: ಇನ್ನು ಡಿಸಿಸಿ ಬ್ಯಾಂಕ್ ಫಲಿತಾಂಶದ ವಿಚಾರವಾಗಿ ಮಾತನಾಡಿದ ರೇವಣ್ಣ, "ಇದನ್ನ ಬಿಜೆಪಿ ಅವರೇ ತಡೆಹಿಡಿದಿದ್ದಾರೆ ಅಂತಾ ಯಾರು ಬೇಕಾದರೂ ಹೇಳುತ್ತಾರೆ. ಯಡಿಯೂರಪ್ಪ ಕಾಲದಲ್ಲಿ ಯಾರೋ ಅರ್ಜಿ ಹಾಕಿದ್ರು ಅಂತಾ ತಡೆಹಿಡಿದಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

Follow Us:
Download App:
  • android
  • ios