ಬೆಂಗಳೂರು (ನ.18):  ಜೆಡಿಎಸ್ ನಾಯಕನೊಬ್ಬನ ಅಪರೂಪದ ಜನಸೇವೆ ನಡೆಯುತ್ತಿದೆ.  ಪ್ರವೃತ್ತಿಯಿಂದ ರಾಜಕಾರಣಿ ಆಗಿರುವ ಅವರು  ತಮ್ಮ ಮೂಲವೃತ್ತಿ ಇನ್ನೂ ಬಿಟ್ಟಿಲ್ಲ.

ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಳ್ಳುವ  ವೈಎಸ್‌ವಿ ದತ್ತಾ ಅವರು ಮೂಲತಃ ಶಿಕ್ಷಕರಾಗಿದ್ದು ಈಗಲೂ ಕೂಡ ಅವರು ತಮ್ಮ ಶಿಕ್ಷಕ ವೃತ್ತಿ ಮುಂದುವರಿಸಿದ್ದಾರೆ.  

ಸಂಪಾದನೆಯೇ ಮುಖ್ಯವಾಗಿರುವ ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಾಠ ಮಾಡುತ್ತಿರುವ ದತ್ತಾ ಅವರು  ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಆಪ್ ಮೂಲಕ ಶಿಕ್ಷಣ ನೀಡುತ್ತಿದ್ದಾರೆ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮೊಬೈಲ್ ನಲ್ಲೇ ಇವರು ಪಾಠ ಮಾಡುತ್ತಾರೆ. ಹೈಟೆಕ್ ಪದ್ದತಿ ಮೂಲಕ ವಿದ್ಯಾರ್ಥಿಗಳಿರುವ ಜಾಗದಲ್ಲೇ   ಪಾಠ ಕಲಿಯುವ ಅವಕಾಶ ಮಾಡಿಕೊಟ್ಟಿದ್ದಾರೆ. 

ಮತ್ತೆ ಮೇಷ್ಟ್ರಾದ ಮಾಜಿ ಶಾಸಕ ದತ್ತ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ...! ..

ಆಪ್ ಡೌನ್ ಲೋಡ್ ಮಾಡಿಕೊಂಡು ಇವರು ಹೇಳುವ ಪಾಠವನ್ನು ಕೇಳಬಹುದಾಗಿದೆ.  ಜೆಡಿಎಸ್ ನ ಮಾಜಿ ಶಾಸಕ ದತ್ತ ಅವರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುತ್ತಿದ್ದು,  ಈ ಮುಂಚೆ ಫೇಸ್ ಬುಕ್ ಲೈವ್ ಮೂಲಕ ಪಾಠ ಮಾಡುತ್ತಿದ್ದರು. 

ಮತ್ತೆ ಮೇಷ್ಟ್ರಾದ ವೈಎಸ್‌ವಿ: ವರ್ಷ ಪೂರ್ತಿ ‘ದತ್ತ’ ಆನ್‌ಲೈನ್‌ ಗಣಿತ ಪಾಠ! .

ಈಗ ಆಪ್ ಮೂಲಕ ಪಾಠ ಮಾಡುತ್ತಿದ್ದು, ಎರಡೂವರೆ ಸಾವಿರ ವಿದ್ಯಾರ್ಥಿಗಳು ಈಗಾಗಲೇ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಹೈಟೆಕ್ ಮಾದರಿ ಅನುಸರಿಸಿ ಪಾಠ ಕಲಿಸುತ್ತಿದ್ದಾರೆ.  ಯಾವುದೇ ಶುಲ್ಕವಿಲ್ಲದೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದತ್ತ ಮಾಸ್ಟರ್ ಪಾಠ ಮಾಡುತ್ತಿದ್ದಾರೆ.