Asianet Suvarna News Asianet Suvarna News

'ಬಿ.ಸಿ.ಪಾಟೀಲ್‌ರನ್ನು ಮುಲಾಜಿಲ್ಲದೇ ಮಂತ್ರಿಮಂಡಲದಿಂದ ಹೊರದಬ್ಬಿ'

ರೈತರ ಬಗ್ಗೆ ಮುಲಾಜಿಲ್ಲದೇ ಮಾತನಾಡುವ ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರನ್ನು ಮುಲಾಜಿಲ್ಲದೇ ಮಂತ್ರಿಮಂಡಲದಿಂದ ಹೊರದಬ್ಬಿ ಎಂದು ಖಡಕ್ ವಾರ್ನಿಂಗ್ ನೀಡಲಾಗಿದೆ.

JDS Leader Sa Ra Mahesh Slams Minister BC Patil snr
Author
Bengaluru, First Published Jan 20, 2021, 2:55 PM IST

ಮೈಸೂರು (ಜ.20): ಕೃಷಿ ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಮದು ಹಿರಿಯ ಅಧಿಕಾರಿಯ ಪತ್ರ ಉಲ್ಲೇಖಿಸಿ ಕೃಷಿ ಸಚಿವರ ಹಣ ದೌರ್ಬಲ್ಯದ ಬಗ್ಗೆ ಸಾ ರಾ ಮಹೇಶ್ ಪ್ರಶ್ನೆ ಮಾಡಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಸಾ ರಾ ಮಹೇಶ್  ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಮನಸ್ಸು ದುರ್ಬಲ ಎಂಬ ಬಿ.ಸಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಭ್ರಷ್ಟಾಚಾರದ ಬಗ್ಗೆ ಇಲಾಖೆ ಸಿಬ್ಬಂದಿಯೇ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ.? ಇದು ಎಂಥ ದೌರ್ಬಲ್ಯ? ಎಂದು ಸಾರಾ ಮಹೇಶ್ ಕೇಳಿದ್ದು,  ರೈತರು ದೌರ್ಬಲ್ಯ ಮನಸ್ಸಿನವರು ಎನ್ನುವ ಕೃಷಿ ಸಚಿವರು ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತಾಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ರೈತರ ಆತ್ಮಹತ್ಯೆ ಬಗ್ಗೆ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಸಚಿವ 
 
ರೈತನ ಸಂಕಷ್ಟದ ಪರಿಸ್ಥಿತಿಯನ್ನು ಗೇಲಿ ಮಾಡುವ ಬಿ.ಸಿ.ಪಾಟೀಲ್‌ ವರ್ತನೆ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ. ಕೈಲಾದರೆ ರೈತರಿಗೆ ಒಳ್ಳೆಯದು ಮಾಡಿ, ಹೀಗೆಲ್ಲ ಮಾತನಾಡಬೇಡಿ ಎಂದು ಸಾರಾ ಕಿಡಿ ಕಾರಿದ್ದಾರೆ. ಬಿ.ಸಿ. ಪಾಟೀಲ್‌ ಮೊದಲು ರೈತರ ಕ್ಷಮೆ ಕೇಳಬೇಕು. 

 

ಕೃಷಿ ಇಲಾಖೆಯ ಸಿಬ್ಬಂದಿ ಮಾಡಿರುವ ಲಂಚಾರೋಪ ಕುರಿತು ಸ್ಪಷ್ಟನೆ ನೀಡಬೇಕು. ಸರ್ಕಾರ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು.ಭ್ರಷ್ಟಾಚಾರ ಸಾಬೀತಾದರೆ ಬಿ.ಸಿ. ಪಾಟೀಲ್‌ ರನ್ನು ಮುಲಾಜಿಲ್ಲದೇ ಮಂತ್ರಿಮಂಡಲದಿಂದ ಹೊರದಬ್ಬಿ ಎಂದು  ಮಾಜಿ ಸಚಿವ ಸಾರಾ ಮಹೇಶ್ ಆಗ್ರಹಿಸಿದ್ದಾರೆ.  ಕೃಷಿ ಇಲಾಖೆ ಸಿಬ್ಬಂದಿ ಪತ್ರ ಉಲ್ಲೇಖಿಸಿ ಸರಣಿ ಟ್ವೀಟ್.

 

Follow Us:
Download App:
  • android
  • ios