Asianet Suvarna News Asianet Suvarna News

2 ಮತಗಳ ಅಂತರದಿಂದ ಸೋತ ಬಿಜೆಪಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ!

2 ಮತಗಳಿಂದ ಸೋತಿದ್ದರಿಂದ ಕೋಪಗೊಂಡ ಬಿಜೆಪಿ ಕಾರ್ಯ​ಕ​ರ್ತರು ಜೆಡಿ​ಎಸ್‌ ಕಾರ್ಯ​ಕ​ರ್ತ​ರ ಮೇಲೆ ಮಾರ​ಣಾಂತಿಕ ಹಲ್ಲೆ 

JDS defeated BJP by two votes in taluk panchayat by election
Author
Sindagi, First Published Jan 5, 2019, 7:49 AM IST

ಆಲಮೇಲ[ಜ.05]: ತಾಲೂಕು ಪಂಚಾಯತಿ ಉಪ ಚುನಾವಣೆಯಲ್ಲಿ ಕೇವಲ 2 ಮತಗಳಿಂದ ಸೋತಿದ್ದರಿಂದ ಕೋಪಗೊಂಡ ಬಿಜೆಪಿ ಕಾರ್ಯ​ಕ​ರ್ತರು ಜೆಡಿ​ಎಸ್‌ ಕಾರ್ಯ​ಕ​ರ್ತ​ರ ಮೇಲೆ ಮಾರ​ಣಾಂತಿಕ ಹಲ್ಲೆ ನಡೆ​ಸಿದ ಪರಿಣಾಮ ನಾಲ್ವರು ಯುವಕರು ಗಂಭೀರ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂ​ಕಿ​ನ ಮಲ​ಘಾಣ ಗ್ರಾಮ​ದಲ್ಲಿ ಶುಕ್ರ​ವಾರ ಸಂಭ​ವಿ​ಸಿದೆ.

ಹಲ್ಲೆಯಿಂದಾಗಿ ಜೆಡಿ​ಎಸ್‌ ಯುವ ಕಾರ್ಯ​ಕ​ರ್ತ​ರಾದ ಶ್ರೀಶೈಲ ಬಿರಾದಾರ, ಬಸವರಾಜ ಬಿರಾದಾರ, ಮಲ್ಲಿನಾಥ ಬಿರಾದಾರ, ಶಾಂತರಾಯ ಬಿರಾದಾರ (24) ಗಂಭೀರ ಗಾಯ​ಗೊಂಡಿದ್ದಾರೆ. ಸದ್ಯ ಅವರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ​ಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾ​ವ​ರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳ​ದಲ್ಲೇ ಬೀಡು​ಬಿ​ಟ್ಟಿ​ದ್ದಾರೆ.

ಈ ಮೊದಲು ಜೆಡಿಎಸ್‌ ಸದಸ್ಯನಾಗಿದ್ದ ಶಾಂತಗೌಡ ಬಿರಾದಾರ ಅವರ ನಿಧನದಿಂದಾಗಿ ಸಿಂದಗಿ ತಾಲೂಕಿನ ಮಲಘಾಣ ತಾಪಂ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಕ್ಷೇತ್ರಕ್ಕೆ ಜ.2ರಂದು ಉಪಚುನಾವಣೆ ನಡೆದಿದ್ದು, ಶುಕ್ರವಾರ ಮತ ಎಣಿಕೆ ನಡೆ​ಯಿತು. ಇದ​ರಲ್ಲಿ ಕೇವಲ 2 ಮತಗಳ ಅಂತರದಿಂದ ಜೆಡಿಎಸ್‌-ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಈರಮ್ಮಗೌಡತಿ ಶಾಂತಗೌಡ ಬಿರಾದಾರ ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಶರಣಪ್ಪ ರಾಮನಳ್ಳಿ ಗೆಲುವು ಸಾಧಿಸಿದರು.

ನಂತರ ಸ್ವಗ್ರಾಮ ಮಲಘಾಣದಲ್ಲಿ ಜೆಡಿಎಸ್‌ ಕಾರ್ಯಕರ್ತರು ವಿಜಯೋತ್ಸವ ಮಾಡಿ ಗ್ರಾಮದ ದೇವಾಲಯಗಳಿಗೆ ಅಭ್ಯರ್ಥಿಯೊಂದಿಗೆ ಹೋಗುತ್ತಿದ್ದರು. ಈ ಸಂದ​ರ್ಭ​ದಲ್ಲಿ ಸೋಲಿ​ನಿಂದ ತೀವ್ರ ಹತಾ​ಶೆ​ಗೊಂಡ ಬಿಜೆಪಿ ಕಾರ್ಯಕರ್ತರು ಏಕಾ​ಏ​ಕಿ​ಯಾಗಿ ಜೆಡಿಎಸ್‌ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೆಡಿ​ಎ​ಸ್‌ನ ನಾಲ್ವರು ಯುವ ಕಾರ್ಯ​ಕ​ರ್ತರಿಗೆ ಗಂಭೀರ ಗಾಯ​ವಾ​ಗಿದೆ.

ಬಿಜೆಪಿ ಅಭ್ಯರ್ಥಿ ಶ್ರೀಮಂತ ರಾಮನಳ್ಳಿ ಹಾಗೂ ಬಿಜೆಪಿ ಮುಖಂಡ ಯಶವಂತ್ರಾಯಗೌಡ ರೂಗಿ ಸಹೋದರರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ​ಲಾ​ಗಿದೆ

Follow Us:
Download App:
  • android
  • ios