ಹರೇಹಡಗಲಿಯಲ್ಲಿ ಪ್ರೇಮ ವಿವಾಹವಾದ ನೆರೆ ರಾಜ್ಯದ ಸಚಿವರ ಪುತ್ರಿ ಜಯಕಲ್ಯಾಣಿತಮಿಳುನಾಡಿನ ಮುಜರಾಯಿ ಸಚಿವ ಶೇಖರ್ ಬಾಬು ಪುತ್ರಿಪೊಲೀಸ್ ಭದ್ರತೆಕೋರಿ ಬೆಂಗಳೂರಿಗೆ ಬಂದಿದ್ದ ಜಯಕಲ್ಯಾಣಿ
ಹೂವಿನಹಡಗಲಿ (ಮಾ.10): ತಮಿಳುನಾಡು ಸಚಿವರ (Tamil Nadu Minisiter) ಪುತ್ರಿ ಜಯಕಲ್ಯಾಣಿ (Jaya Kalyani) ಹಾಗೂ ಸತೀಶ (Satish) ಎಂಬ ಪ್ರೇಮಿಗಳಿಗೆ ಕರ್ನಾಟಕದಲ್ಲಿ ಕಂಕಣ ಭಾಗ್ಯ ಕೂಡಿ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅನೇಕ ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ತಮಿಳುನಾಡು ಮುಜರಾಯಿ ಸಚಿವ ಶೇಖರಬಾಬು ಪುತ್ರಿ ಜಯಕಲ್ಯಾಣಿ ( tamilnadu minister sekhar babu ) ಹಾಗೂ ಸತೀಶ ಜೋಡಿ ಪ್ರೇಮ ವಿವಾಹವು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದಲ್ಲಿ (Sadguru Shivayogi Sri Haalaswami Mutt) ಇತ್ತೀಚೆಗೆ ಜರುಗಿದೆ. ಈ ಕುರಿತು ರಾಜ್ಯ ಮಠಾಧೀಶರ ಪರಿಷತ್‌ನ ಕಾರ್ಯದರ್ಶಿ ಹಾಗೂ ದಕ್ಷಿಣ ಭಾರತ ಯತಿಗಳ ಪ್ರತಿನಿಧಿಯಾಗಿರುವ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಸಚಿವರ ಪುತ್ರಿ ಜಯಕಲ್ಯಾಣಿಯವರು ಎಂಬಿಬಿಎಸ್ ಪದವೀಧರೆ. ಈಕೆಯನ್ನು ತಮಿಳುನಾಡಿನ ಶ್ರೀಮಂತ ಮನೆತನಕ್ಕೆ ಸೇರಿದ ಅನ್ಯ ಧರ್ಮದ ವ್ಯಕ್ತಿಯೊಂದಿಗೆ ವಿವಾಹ ಮಾಡಲು ಸಚಿವ ಶೇಖರಬಾಬು ನಿಶ್ಚಯಿಸಿದ್ದರು ಎಂದು ತಿಳಿದು ಬಂದಿದೆ. ಕುಟುಂಬ ವರ್ಗದವರ ತೀರ್ಮಾನ ವಿರೋಧಿಸಿ ತನ್ನ ಪ್ರೇಮಿ ಸತೀಶ್‌ನೊಂದಿಗೆ ಜಯಕಲ್ಯಾಣಿ ಮನೆ ಬಿಟ್ಟು ಬಂದಿದ್ದರು. ಪ್ರಿಯತಮ ಸತೀಶ ಚೆನ್ನೈ ನಗರದ ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿದ್ದು, ಉದ್ಯಮ ನಡೆಸಿಕೊಂಡಿದ್ದನು. ಸಚಿವರ ಪುತ್ರಿ ಡಾ. ಜಯಕಲ್ಯಾಣಿ ಹಾಗೂ ಸತೀಶ ಇಬ್ಬರಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೇಮ ವಿವಾಹಕ್ಕೆ ಕುಟುಂಬದವರು ವಿರೋಧಿಸುತ್ತಿದ್ದರು. ಜತೆಗೆ ಇವರಿಬ್ಬರನ್ನು ಬೇರೆ ಮಾಡಿ ಕೆಲವು ತಿಂಗಳ ಕಾಲ ಸಚಿವರ ಪುತ್ರಿಯನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಈ ಪ್ರೇಮ ವಿವಾಹಕ್ಕೆ ಪೋಷಕರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಸಚಿವರ ಪುತ್ರಿ ಜಯಕಲ್ಯಾಣಿ ಹಾಗೂ ಸತೀಶ ಇಬ್ಬರೂ ಹಿಂದೂ ಪರ ಸಂಘಟನೆಯ ಮುಖಂಡ ಮಧುಗಿರಿಯ ಅತುಲ್‌ಕುಮಾರ್ ಅಗರ್‌ವಾಲ್ ಮೂಲಕ ಶ್ರೀಮಠದ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿ ಸಂಪರ್ಕಿಸಿದ್ದಾರೆ.
ಇಬ್ಬರು ಪ್ರೇಮಿಗಳು ಭಾನುವಾರ ಹಾಲಸ್ವಾಮಿ ಮಠಕ್ಕೆ ಆಗಮಿಸಿ ಶ್ರೀಗಳ ಸಾನ್ನಿಧ್ಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಆಗಿದ್ದಾರೆ. ಅಂದೇ ಬೆಂಗಳೂರಿಗೆ ಹೋಗಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್‌ರನ್ನು ಭೇಟಿ ಮಾಡಿ ನಮಗೆ ರಕ್ಷಣೆ ಕೊಡಿ ಎಂದು ಕೋರಿದ್ದಾರೆ.
Shivamogga: ಹೊಳಲೂರು ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ, ಒಂದೂವರೆ ತಿಂಗಳಲ್ಲಿ 7 ಕೋಟಿ ಬಳಸಿ ಅಭಿವೃದ್ಧಿ
ಕಳೆದ 4 ತಿಂಗಳಿಂದ ಇಬ್ಬರೂ ಪ್ರೇಮಿಗಳು ಸಾಮಾಜಿಕ ಜಾಲತಾಣ ಮತ್ತು ಸಂಘಟನೆ ಮೂಲಕ ಹಿಂದೂ ಪರ ಬಲವಾದ ನಂಬಿಕೆ ಹೊಂದಿರುವ ಅಚಲವಾಗಿ ಪ್ರತಿಪಾದಿಸುವ ವ್ಯಕ್ತಿಯ ಶೋಧ ಮಾಡುತ್ತಿರುವ ವೇಳೆ ಮಧುಗಿರಿಯ ಅತುಲ್‌ಕುಮಾರ್ ಅಗರ್‌ವಾಲ್‌ರ ಸಂಪರ್ಕ ಮಾಡಿದ್ದಾರೆ. ಕೆಲ ದಿನಗಳ ನಂತರ ಅಗರ್‌ವಾಲ್ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹಿಂದೂ ಧರ್ಮ ಮತ್ತು ಶೈವಪಂತದ ಬಲವಾದ ನಂಬಿಕೆ ಹೊಂದಿರುವ ಜಯಕಲ್ಯಾಣಿ, ತನ್ನ ಪೋಷಕರ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸಿ ಪ್ರೇಮ ವಿವಾಹವಾಗಿದ್ದಾರೆ ಎಂಬುದನ್ನು ಸ್ವಾಮೀಜಿ ಸ್ಪಷ್ಟಪಡಿಸಿದರು.
BBMP ಬಜೆಟ್‌ಗೆ ಸರ್ಕಾರ ಮೂಗುದಾರ
"ನಾನು ಸತೀಶ್ ಅವರನ್ನು ವಿವಾಹವಾಗಿದ್ದೇನೆ. ನಮ್ಮದು ಪ್ರೇಮವಿವಾಹ. ನಮ್ಮ ಹಿರಿಯರು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಸತೀಶ್ ಮದುವೆಯಾಗುವ ಕುರಿತಾಗಿ ಮಾತನಾಡುತ್ತಿದ್ದರು. ಆದರೆ, ಎರಡು ತಿಂಗಳ ಹಿಂದೆ ಇವರನ್ನು ಸುಳ್ಳು ಕೇಸ್ ನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದರು. ನಾವಿಬ್ಬರೂ ಮೇಜರ್. ನಮ್ಮಿಬ್ಬರ ಒಪ್ಪಿಗೆಯ ಮೇಲೇ ಈ ವಿವಾಹ ನಡೆದಿದೆ. ತಮಿಳುನಾಡಿಗೆ ಹೋದರೆ ಅವರು ನಮ್ಮನ್ನು ಕೊಲ್ಲುತ್ತಾರೆ. ಹಾಗಾಗಿ ಬೆಂಗಳೂರು ಪೊಲೀಸರ ರಕ್ಷಣೆ ಕೇಳಿದ್ದೆವು" ಎಂದು ಜಯಕಲ್ಯಾಣಿ ಹೇಳಿದ್ದಾರೆ.
