ನವದೆಹಲಿ (ನ.18): ಗಣಿ ಹಗರಣದಲ್ಲಿ ಆರೋಪಿ ಆಗಿರುವ ಕರ್ನಾಟಕದ ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು, ತಮಗೆ ನೀಡಲಾಗಿರುವ ಜಾಮೀನು ಷರತ್ತುಗಳಲ್ಲಿ ಬದಲಾವಣೆ ಬಯಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ತವರು ಬಳ್ಳಾರಿ ಭೇಟಿಗೆ ಜಾಮೀನಿನಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಕೋರಿದ್ದಾರೆ.

 ಆದರೆ ಇದನ್ನು ವಿರೋಧಿಸಿದ ಸಿಬಿಐ ವಕೀಲೆ ಮಾಧವಿ ದಿವಾನ್‌, ‘ಪ್ರಭಾವಿಯಾಗಿರುವ ರೆಡ್ಡಿಗೆ ಬಳ್ಳಾರಿ ಭೇಟಿಗೆ ಅವಕಾಶ ನೀಡಬಾರದು. ಒಂದು ವೇಳೆ ಬಳ್ಳಾರಿಗೆ ತೆರಳಲು ಅವಕಾಶ ಕಲ್ಪಿಸಿದ್ದಲ್ಲಿ, ತನಿಖೆ ಮೇಲೆ ಪರಿಣಾಮ ಬೀರಬಹುದು’ ಎಂದರು. 2015ರಲ್ಲೇ ಈ ಹಗರಣದಲ್ಲಿ ರೆಡ್ಡಿಗೆ ಜಾಮೀನು ಸಿಕ್ಕಿತ್ತು. ಆಗ ಅವರಿಗೆ ಬಳ್ಳಾರಿ, ಅನಂತಪುರ, ಕಡಪಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಪ್ರಸಿದ್ಧ ಹಿಂದೂ ದೇವಾಲಯ: ಚಿದಂಬರಂ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ

ಅಲ್ಲಿ 40 ಸಾಕ್ಷಿಗಳಿದ್ದಾರೆ. ಈ ಹಿಂದೆ ಸಾಕ್ಷಿಗಳಿಗೆ ಬೆದರಿಸಲಾಗಿದೆ. ಅಲ್ಲಿ ಇವರ ಪ್ರವೇಶಕ್ಕೆ ಅನುಮತಿಸಿದರೆ ಏನಾಗುತ್ತೋ ತಿಳಿಯದು’

ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್‌ನ ದ್ವಿಸದಸ್ಯ ಪೀಠ, ಹಗರಣದ ತನಿಖೆ ನಡೆಸಿರುವ ಸಿಬಿಐನ ಪ್ರತಿಕ್ರಿಯೆ ಬಯಸಿ ನೋಟಿಸ್‌ ಜಾರಿ ಮಾಡಿದೆ. ಇದೇ ವೇಳೆ ಬಳ್ಳಾರಿಯಷ್ಟೇ ಅಲ್ಲ, ಬಳ್ಳಾರಿ ಪಕ್ಕದ ಅನಂತಪುರ ಹಾಗೂ ಕಡಪಾ ಜಿಲ್ಲೆಗೂ ಭೇಟಿಗೆ ಅನುಮತಿಸಬೇಕು ಎಂದು ಅರ್ಜಿಯಲ್ಲಿ ರೆಡ್ಡಿ ಕೋರಿದ್ದಾರೆ.