ಜಮಾತೆ ಇಸ್ಲಾಮಿ ಕೋವಿಡ್ ಜಾಗೃತಿ ಅಭಿಯಾನ ಅಂತ್ಯ
ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆಯಿಂದ ಹಮ್ಮಿಕೊಂಡಿದ್ದಕೋವಿಡ್ ಜಾಗೃತಿ ಅಭಿಯಾನ ಮುಕ್ತಾಯವಾಗಿದೆ. ಈ ಅಭಿಯಾನದ ಮೂಲಕ ಹಲವು ರೀತಿಯಲ್ಲಿ ಜನ ಜಾಗೃತಿ ಮೂಡಿಸಲಾಗಿದೆ.
ಬೆಂಗಳೂರು(ಆ.21): ಕೋವಿಡ್-19 ಕಾಯಿಲೆ ಬಾರದಿರಲು ಮುಖಗವುಸು, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ಆ.5ರಿಂದ ಆರಂಭಿಸಿದ್ದ ‘ಸೃಷ್ಟಿಕರ್ತನ ಕಡೆಗೆ ಮರಳುವ ಕರೆ’ ಎಂಬ ಆನ್‌ಲೈನ್ ಅಭಿಯಾನ ಗುರುವಾರ ಕೊನೆಗೊಂಡಿತು.
ದೇಶದಲ್ಲಿ ಕೊರೋನಾ ಸೋಂಕಿನ ಹಬ್ಬುತ್ತಿದ್ದಂತೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡುವ ಜೊತೆಗೆ ಕರಪತ್ರ ಮತ್ತು ಆಟೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಅಭಿಯಾನದ ಮೂಲಕ ಜನರಲ್ಲಿ ಅನೈತಿಕತೆ, ಪಾಪಕಾರ್ಯ, ಅನ್ಯಾಯ ಮತ್ತು ಕೋಮು ಭಾವನೆಯಿಂದ ಹೊರಬರುವಂತೆ ಮನವಿ ಮಾಡಿದ್ದೇವೆ. ಪರಸ್ಪರ ಸಹಕಾರ ಮತ್ತು ಸೌಹಾರ್ದತೆ ಸದಾ ಉಳಿಸಿಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದ್ದೇವೆ. ಜಾತಿ ಧರ್ಮದ ಹಂಗಿಲ್ಲದೇ ಮಾನವೀಯತೆಯನ್ನು ಪ್ರಧಾನವನ್ನಾಗಿಸಿಕೊಂಡು ಅಭಿಯಾನ ನಡೆಸಿದ್ದೇವೆ ಎಂದು ಅಭಿಯಾನದ ಸಂಚಾಲಕ ಅಕ್ಬರ್ ಅಲಿ ಹೇಳಿದ್ದಾರೆ.
ಶೇ.51 ರಷ್ಟು ಮಂದಿಯ ಸಂಪೂರ್ಣ ಆದಾಯ ಸ್ಥಗಿತ: ಲಾಕ್‌ಡೌನ್ ಪರಿಣಾಮದ ಅಧ್ಯಯನ ವರದಿ ಬಹಿರಂಗ!.
ಕೋವಿಡ್‌ನಿಂದ ಸತ್ತವರ ದಫನ ಅಥವಾ ಸುಡುವುದಕ್ಕೆ ಮುಸ್ಲಿಂ ಯುವಕರು ಮುಂದೆ ಬರುವಂತೆ ಉತ್ತೇಜನ ನೀಡಿದ್ದೇವೆ. ಲಾಕ್‌ಡೌನ್ ದಿನಗಳಿಂದಲೂ ಆಹಾರ, ಬಟ್ಟೆ, ಔಷಧಿಯನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ ಒಟ್ಟು 12 ಆಮ್ಲಜನಕ ಕೇಂದ್ರಗಳನ್ನು ತೆರೆದಿದ್ದೇವೆ. ವಿವಿಧ ಧರ್ಮದ ಧರ್ಮಗುರುಗಳ ಜೊತೆ ವೆಬಿನಾರ್ ಮೂಲಕ ವಿಚಾರಗೋಷ್ಠಿ ನಡೆಸಿದ್ದೇವೆ. ಗುರುವಾರ ನಮ್ಮ ಅಭಿಯಾನ ಮುಕ್ತಾಯಗೊಂಡರೂ ಸೇವೆ ಮುಂದುವರಿಯಲಿದೆ ಎಂದು ಅಕ್ಬರ್ ಆಲಿ ತಿಳಿಸಿದ್ದಾರೆ.
ಕೋವಿಡ್ ಪ್ರಸರಣ, ಇಮ್ಯುನಿಟಿ ಬಗ್ಗೆ ರಾಜ್ಯವ್ಯಾಪಿ ಸರ್ವೆ..
ಡಾಕ್ಟರ್ ಫಾರ್ ಹ್ಯುಮಾನಿಟಿ ಮತ್ತು ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಮೂಲಕ ಕೋವಿಡ್ - 19 ರ ಸಹಾಯವಾಣಿ, ಮಹಿಳೆಯರ ಸಹಾಯವಾಣಿ, ಅಂಬ್ಯುಲೆನ್ಸ್ , ಕೌನ್ಸೆಲಿಂಗ್ ಸೇವೆಗಳು ಮುಂದಿನ ದಿನಗಳಲ್ಲಿಯೂ ಇರಲಿದೆ ಎಂದು ಆಲಿ ಹೇಳಿದ್ದಾರೆ.
ಅಭಿಯಾನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ಅಧ್ಯಕ್ಷ ಡಾ. ಬೆಳಗಾಮಿ ಮಹಮ್ಮದ್ ಸಾದ್, ಉಪಾಧ್ಯಕ್ಷ ಮಹಮ್ಮದ್ ಯೂಸೂಫ್ ಕನ್ನಿ, ಮುಸ್ಲಿಂ ಮುತ್ತಹಿದಾ ಮಹಾಯತ್ ನ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ಜಮೀಯಾತ್‌ಉಲ್ ಉಲೇಮಾ ಹಿಂದ್ ಕರ್ನಾಟಕದ ಕಾರ್ಯದರ್ಶಿ ತನ್ವೀರ್ ಅಹಮ್ಮದ್ ಶರೀಫ್, ಜಮಾಅತೆ ಇಸ್ಲಾಮಿ ಹಿಂದ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಮ್ಮದ್ ನವಾಜ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.