ಬೆಂಗಳೂರು(ಮೇ.11): ಕೊರೋನಾ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಉಳಿದಿರುವ ಹೊರರಾಜ್ಯದ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಹೊರರಾಜ್ಯಗಳಿಗೆ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.

"

ಲಾಕ್‌ಡೌನ್‌: KSRTC ನೌಕರರಿಗೆ ಕೊನೆಗೂ ಸಂಬಳ ಪಾವ​ತಿ..!

ಸೇವಾಸಿಂಧು ಇ-ಪಾಸ್‌ ಹೊಂದಿರುವವರು ಹೊರರಾಜ್ಯಗಳಿಗೆ ಈ ಬಸ್‌ನಲ್ಲಿ ಪ್ರಯಾಣಿಸಬಹುದು. ಆಸಕ್ತರು ಕೆಎಸ್‌ಆರ್‌ಟಿಸಿ ಆರಂಭಿಸಿರುವ ಸಹಾಯವಾಣಿಗೆ ಮೇ 11ರಿಂದ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಹೊರರಾಜ್ಯ ಬಸ್‌ ಸೇವೆ ಆರಂಭವಾಗುವ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಶೀಘ್ರದಲ್ಲೇ ದಿನಾಂಕ ಪ್ರಕಟಿಸುವುದಾಗಿ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಮಿಳುನಾಡು ಹಾಗೂ ಪಾಂಡಿಚೇರಿಗೆ ತೆರಳುವ ಪ್ರಯಾಣಿಕರು ಮೊಬೈಲ್‌ ಸಂಖ್ಯೆ 7760990100, 7760990560, 7760990034, 7760990035, 7760991295, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಹೋಗುವವರು 7760990561, 7760990532, 7760990955, 7760990530, 7760990967 ಹಾಗೂ ಕೇರಳಕ್ಕೆ ತೆರಳುವವರು 7760990287, 7760990988, 7760990531, 6366423895, 6366423896 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ನಿಗಮ ತಿಳಿಸಿದೆ.