ದೇಶದ ಮೊದಲ 3ಡಿ ಪ್ರಿಂಟೆಂಡ್ ಅಂಚೆ ಕಚೇರಿ ಬೆಂಗ್ಳೂರಲ್ಲಿ ಇಂದು ಉದ್ಘಾಟನೆ
ಸಾಂಪ್ರದಾಯಿಕ ಶೈಲಿಯಲ್ಲಿ ಇಟ್ಟಿಗೆ ಮತ್ತಿತರ ಕಚ್ಚಾವಸ್ತುಗಳ ಬದಲಾಗಿ ರೊಬೋಟಿಕ್ ತಂತ್ರಜ್ಞಾನದಿಂದ ನಿರ್ಮಾಣವಾದ ಅತ್ಯಾಧುನಿಕ 3ಡಿ ಪ್ರಿಂಟೆಂಡ್ ಅಂಚೆ ಕಚೇರಿ ಇದಾಗಿದೆ. ಲಾರ್ಸನ್ ಆ್ಯಂಡ್ ಟ್ಯೂಬ್ರೋ ಲಿಮಿಟೆಡ್ ಇದನ್ನು ನಿರ್ಮಾಣ ಮಾಡಿದ್ದು, ಐಐಟಿ ಚೆನ್ನೈ ಮಾರ್ಗದರ್ಶನ ಮಾಡಿದೆ. 1021 ಚ.ಅಡಿ ಪ್ರದೇಶದಲ್ಲಿ ಅಂಚೆ ಕಟ್ಟಡ ತಲೆ ಎತ್ತಿದೆ.

ಬೆಂಗಳೂರು(ಆ.18): ಅಂಚೆ ಇಲಾಖೆಯಿಂದ ಬೆಂಗಳೂರಿನ ಕೆಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಿಸಲಾದ ಭಾರತದ ಮೊದಲ 3ಡಿ ಪ್ರಿಂಟೆಂಡ್ ಅಂಚೆ ಕಚೇರಿಯನ್ನು ಆ.18ರ ಶುಕ್ರವಾರ ಬೆಳಗ್ಗೆ 8.30ಕ್ಕೆ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಲಿದ್ದಾರೆ. ಪ್ರಧಾನ ಅಂಚೆ ಕಚೇರಿಯ 5ನೇ ಮಹಡಿಯ ಮೇಘದೂತ ಸಭಾಂಗಣದಲ್ಲಿ ಸಚಿವರು ಕಟ್ಟಡದ ಉದ್ಘಾಟನೆ ನೆರವೇರಿಸುವರು. ಈ ವೇಳೆ 3ಡಿ ಮುದ್ರಿತ ಕಟ್ಟಡದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಆಗಲಿದೆ.
ಸಾಂಪ್ರದಾಯಿಕ ಶೈಲಿಯಲ್ಲಿ ಇಟ್ಟಿಗೆ ಮತ್ತಿತರ ಕಚ್ಚಾವಸ್ತುಗಳ ಬದಲಾಗಿ ರೊಬೋಟಿಕ್ ತಂತ್ರಜ್ಞಾನದಿಂದ ನಿರ್ಮಾಣವಾದ ಅತ್ಯಾಧುನಿಕ 3ಡಿ ಪ್ರಿಂಟೆಂಡ್ ಅಂಚೆ ಕಚೇರಿ ಇದಾಗಿದೆ. ಲಾರ್ಸನ್ ಆ್ಯಂಡ್ ಟ್ಯೂಬ್ರೋ ಲಿಮಿಟೆಡ್ ಇದನ್ನು ನಿರ್ಮಾಣ ಮಾಡಿದ್ದು, ಐಐಟಿ ಚೆನ್ನೈ ಮಾರ್ಗದರ್ಶನ ಮಾಡಿದೆ. 1021 ಚ.ಅಡಿ ಪ್ರದೇಶದಲ್ಲಿ ಅಂಚೆ ಕಟ್ಟಡ ತಲೆ ಎತ್ತಿದೆ.
ಉಡುಪಿ ಅಂಚೆ ಕಚೇರಿ ವತಿಯಿಂದ 'ಹರ್ ಘರ್ ತಿರಂಗಾ' ಜನಜಾಗೃತಿ ಜಾಥಾ
ಯಾಂತ್ರಿಕ ಪ್ರಿಂಟರ್ ಅನುಮೋದಿತ ವಿನ್ಯಾಸದ ಪ್ರಕಾರ ಎರಕ ಹೊಯ್ದ ಮಾದರಿಯಲ್ಲಿ ಕಾಂಕ್ರಿಟ್ ಪದರವನ್ನು ಪದರದಿಂದ ಹಂತ ಹಂತವಾಗಿ ಜೋಡಿಸುತ್ತ ಕಟ್ಟಡ ನಿರ್ಮಿಸಲಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿದರೆ ಸಾಮಾನ್ಯವಾಗಿ ಈ ಕಟ್ಟಡ ನಿರ್ಮಾಣಕ್ಕೆ 6 ರಿಂದ 8 ತಿಂಗಳ ಕಾಲಾವಕಾಶ ಬೇಕು. ಆದರೆ, ಕೇವಲ 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ.