Asianet Suvarna News Asianet Suvarna News

ಖ್ಯಾತ ಉದ್ಯಮಿ ಕಿರಣ್ ಮಜೂಂದಾರ್ ಪತಿ ಜಾನ್ ಷಾ ವಿಧಿವಶ

ಖ್ಯಾತ ಉದ್ಯಮಿ, ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾಗಿರುವ ಕಿರಣ್ ಮಜೂಂದಾರ್ ಷಾ ಅವರ ಪತಿ ಜಾನ್ ಷಾ ಅವರು  ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Indian businessman Kiran Mazumdar Shaw husband  John Shaw  died in bengaluru gow
Author
First Published Oct 24, 2022, 2:08 PM IST | Last Updated Oct 24, 2022, 3:49 PM IST

ಆನೇಕಲ್ (ಅ.24): ಖ್ಯಾತ ಉದ್ಯಮಿ, ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾಗಿರುವ ಕಿರಣ್ ಮಜೂಂದಾರ್ ಷಾ ಅವರ ಪತಿ ಜಾನ್ ಷಾ (70) ಅವರು  ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪ್ರತಿಷ್ಠಿತ ಕಂಪೆನಿ ಬಯೋಕಾನ್  ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಜಾನ್ ಷಾ ಅವರು  ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಾನ್ ಷಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇಂದು ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ಸ್ ಚಿತಾಗಾರದಲ್ಲಿ  ಜಾನ್ ಷಾ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಕಂಪನಿಯ ವೆಬ್‌ಸೈಟ್  ನಲ್ಲಿ ನೀಡಿರುವ ಮಾಹಿತಿಯಂತೆ, ಅವರು ವಿದೇಶಿ ಪ್ರವರ್ತಕರಾಗಿದ್ದರು ಮತ್ತು ವಿವಿಧ ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯಲ್ಲಿದ್ದರು. ಅವರು 1999 ರಿಂದ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದರು.

ಅವರು ಮಧುರಾ ಕೋಟ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.  2001 ರಲ್ಲಿ, ಇವರ ಬಯೋಕಾನ್ ಸಂಸ್ಥೆ ಕೊಲೆಸ್ಟರಾಲ್-ಕಡಿಮೆಗೊಳಿಸುವ ಅಣುವಿನ ತಯಾರಿಕೆಗಾಗಿ US ಆಹಾರ ಮತ್ತು ಔಷಧ ಆಡಳಿತದ (FDA) ಅನುಮೋದನೆಯನ್ನು ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ.

ಇದನ್ನೂ ಓದಿ: ಕುತೂಹಲ ಕೆರಳಿಸಿದ ಕಿರಣ್‌ ಮಜುಂದಾರ್‌- ಮೋಹನ್‌ ಭಾಗವತ್‌ ಭೇಟಿ..!

ಕಿರಣ್ ಮಜುಂದಾರ್ ತಮ್ಮ 'ಬಯೋಕಾನ್' ಸಂಸ್ಥೆಯನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್ ಸಂಸ್ಥೆಯನ್ನು ಕಿರಣ್ ಮಜುಂದಾರ್ ಅವರು ಪ್ರಾರಂಭಿಸಿದ್ದು ತಮ್ಮ ಮನೆಯ ಶೆಡ್ ಒಂದರಲ್ಲಿ. ಅದೂ ಕೇವಲ ಹತ್ತು ಸಾವಿರ ರೂಪಾಯಿಗಳ ಬಂಡವಾಳದ ಮೂಲಕ. ಅಂದಿನ ದಿನದಲ್ಲಿ ಅವರಿಗೆ ಯಾರೂ ಸಹಾಯಕ್ಕೆ ಬರಲಿಲ್ಲ. ತಮ್ಮ ನಿರಂತರ ಪರಿಶ್ರಮದಿಂದ ಇಂದು ಬಯೋಕಾನ್ ಸಂಸ್ಥೆ ವಿಶ್ವದಲ್ಲೇ ಏಳನೇ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

ಇದನ್ನೂ ಓದಿ: ಬಸವ ಜಯಂತಿ ಲಿಂಗಾಯಿತರಿಗೆ ಸೀಮಿತ, ರಂಜಾನ್ ಇಡೀ ದೇಶದ ಹಬ್ಬ, ಕಿರಣ್‌ ಮಜುಂದಾರ್‌ ವಿವಾದ!

ಉದ್ಯಮಿ ಕಿರಣ್ ಮಜುಂದಾರ್ ಮಾಡಿರುವ ಸಾಧನೆಗಾಗಿ ಅವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳು ಲಬಿಸಿದೆ. ಪದ್ಮಶ್ರೀ, ಪದ್ಮಭೂಷಣ  ಸೇರಿ ಪ್ರತಿಷ್ಠಿತ ಟೈಮ್ಸ್ ಪತ್ರಿಕೆ ಹೆಸರಿಸಿರುವ ನೂರು ಜನ ವಿಶ್ವ ಪ್ರಮುಖರಲ್ಲಿ ಮತ್ತು ಫೋರ್ಬ್ಸ್ನ್  ಪಟ್ಟಿಯಲ್ಲಿ  ನೂರು ಪ್ರಮುಖರಲ್ಲಿ ಮತ್ತು ಫೈನಾನ್ಸಿಯಲ್ ಟೈಮ್ಸ್ ಹೆಸರಿಸಿರುವ ಐವತ್ತು ಪ್ರಮುಖರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಅವರು  ಸ್ಥಾನ ಪಡೆದಿದ್ದಾರೆ.

Latest Videos
Follow Us:
Download App:
  • android
  • ios