ಬೆಂಗಳೂರಿನಲ್ಲಿ ಐಟಿ ಮೆಗಾ ರೇಡ್, ಏಕಕಾಲಕ್ಕೆ 15ಕ್ಕೂ ಹೆಚ್ಚು ಕಡೆ ದಾಳಿ, ವೈದ್ಯೆ ಸೇರಿ ಹಲವು ಮಂದಿಗೆ ಶಾಕ್
ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳಿಂದ ಬೃಹತ್ ದಾಳಿ ನಡೆದಿದೆ. ಏಕಕಾಲಕ್ಕೆ ನಗರದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆದಿದ್ದು, ವಿಜಯನಗರ ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿಯಾಗಿದೆ.
ಬೆಂಗಳೂರು (ಅ.4): ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳಿಂದ ಬೃಹತ್ ದಾಳಿ ನಡೆದಿದೆ. ಏಕಕಾಲಕ್ಕೆ ನಗರದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆದಿದ್ದು, ವಿಜಯನಗರ ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿಯಾಗಿದೆ. 15 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳಿಂದ ದಾಳಿ ನಡೆದಿದೆ.
ಈ ಮೆಗಾ ರೇಡ್ ಗೆ ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿರೋ ಐಟಿ ಅಧಿಕಾರಿಗಳು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೆರಿಗೆ ವಂಚನೆ ಮಾಡಿರೋ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇದೆ. ಸದ್ಯ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಮುಂಬೈನ ವಠಾರ ಜೀವನದಿಂದ ದುಬೈಗೆ ಹಾರಿ ಸಾಮ್ರಾಜ್ಯ ಕಟ್ಟಿ
ಶಾಂತಿನಗರದಲ್ಲಿ ನವೀನ್‌ಕುಮಾರ್ ಎಂಬುವವರ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಹಲವು ಉದ್ಯಮವನ್ನು ನಡೆಸುತ್ತಿರುವ ನವೀನ್ ತೆರಿಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ನವೀನ್ ಮನೆ ಮೇಲೆ ಎರಡನೇ ಬಾರಿ ಐಟಿ ದಾಳಿ ನಡೆದಿದೆ. ರಾಮನನಗರದಲ್ಲಿ ಕೋಳಿ ಫಾರಂ ,ಶಾಂತಿನಗರದಲ್ಲಿ ಕಚೇರಿ ಹೊಂದಿರುವ ನವೀನ್ ಇದರ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಕೂಡ ನಡೆಸುತ್ತಿರುವ ಉದ್ಯಮಿಯಾಗಿದ್ದಾರೆ. ಎರಡು ಇನೋವಾದಲ್ಲಿ ಬಂದಿರುವ ಎಂಟು ಮಂದಿ ಐಟಿ ಅಧಿಕಾರಿಗಳು CAR ಪೊಲೀಸರ ಸಮ್ಮುಖದಲ್ಲಿ ಐಟಿ ದಾಳಿ ಮಾಡಿದ್ದಾರೆ. ಶಾಂತಿನಗರದಲ್ಲಿ ನವೀನ್ 100×200 ಐಶಾರಾಮಿ ಬಂಗಲೆ ಹೊಂದಿದ್ದು, ತೆರಿಗೆ ವಂಚನೆ ಅರೋಪ ಹಿನ್ನೆಲೆ ಐಟಿ ದಾಳಿ ನಡೆದಿದೆ.
ಇನ್ನೊಂಡೆದೆ ಸದಾಶಿವ ನಗರದಲ್ಲಿರುವ ಚಿನ್ನದ ವ್ಯಾಪಾರಿ ಮನೆ ಮೇಲೆ ಕೂಡ ದಾಳಿ ನಡೆಸಿರುವ ಐಟಿ ಅಧಿಕಾರಿಳು ಮಹತ್ವದ ದಾಖಲೆ ಪರಿಶೀಲನೆ ನಡೆದುತ್ತಿದ್ದಾರೆ.
ಮುಖೇಶ್ ಅಂಬಾನಿಯನ್ನು ಮೀರಿ ಬೆಳೆದು ಜಗತ್ತಿನ 6ನೇ
ವೈದ್ಯೆಯ ಮನೆ ಮೇಲೆ ಐಟಿ ದಾಳಿ:
ಮುಂಜಾನೆಯೇ ಬೆಂಗಳೂರಿನ ಹಲವು ಕಡೆ ಐಟಿ ರೈಡ್ ನಡೆದಿದ್ದು, ಡೆಂಟಿಸ್ಟ್ ಆಗಿರುವ ಸಂದ್ಯಾ ಪಾಟೀಲ್ ಅವರ ಮನೆ ಮೇಲೆ ಕೂಡ ದಾಳಿ ನಡೆದಿದೆ. ಡಾ.ಸಂಧ್ಯಾ ಪಾಟೀಲ್ ಅವರ ಪ್ರಶಾಂತ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಸಂದ್ಯಾ ಪಾಟೀಲ್ ಅವರನ್ನು ಕರೆದುಕೊಂಡು ವಿಜಯ ನಗರದಲ್ಲಿರುವ ಕ್ಲಿನಿಕ್ ಗೆ ಐಟಿ ತಂಡ ಕರೆದುಕೊಂಡು ಹೋಗಿದೆ.
ಗಜರಾಜ ಜುವೆಲರ್ಸ್ ಮೇಲೆ ಐಟಿ ರೇಡ್:
ಇನ್ನು ಪ್ಯಾಲೇಸ್ ರಸ್ತೆಯಲ್ಲಿರೋ ಜ್ಯುವೆಲರಿ ಶಾಪ್, ಗಜರಾಜ ಜುವೆಲರ್ಸ್ ಮೇಲೂ ಐಟಿ ದಾಳಿ ನಡೆದಿದೆ. ಎರಡು ಇನ್ನೋವಾ ಕಾರ್ ಗಳಲ್ಲಿ ಬಂದಿರೋ ಐಟಿ ಟೀಂ ಶಾಪ್ ಬಾಗಿಲು ಮುಚ್ಚಿ ಒಳಗಡೆ ಪರಿಶೀಲನೆ ನಡೆಸುತ್ತಿದೆ. KA 01,AC 0734 ಹಾಗೂ KA 41 B 5897 ಗಾಡಿಗಳಲ್ಲಿ ಬಂದಿರೋ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಗಣೇಶ್ ಜ್ಯುವೆಲ್ಲೆರಿ ವ್ಯಾಪಾರಿ ನಿವಾಸದ ಮೇಲೆ ದಾಳಿ ನಡೆದಿದೆ. ಸದಾಶಿವನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದ್ದು, ಎರಡು ಇನೋವಾ ಕಾರಿನಲ್ಲಿ ಬಂದಿರುವ ಸುಮಾರು 15 ಜನ ಐಟಿ ಅಧಿಕಾರಿಗಳ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.