ತತ್ತ್ವಧಾರಾ ಪ್ರವಚನಮಾಲಿಕೆ: ನೆಮ್ಮದಿಯ ಬದುಕಿಗೆ ಅಧ್ಯಾತ್ಮ ಚಿಂತನೆ ಅತ್ಯಗತ್ಯ - ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿ

ಶ್ರೀ ಶಂಕರಾಚಾರ್ಯರ ಸಜ್ಜೀವನ ಸದುಪದೇಶಗಳ ರಸಮಯ ಪ್ರತಿಪಾದನೆಯ ಜ್ಞಾನಸತ್ರವೇ ತತ್ತ್ವಧಾರಾ ಪ್ರವಚನಮಾಲಿಕೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧಕೇಂದ್ರವು ಈ ಪ್ರವಚನಮಾಲಿಕೆಯನ್ನು ಆಯೋಜಿಸುತ್ತಿದೆ.

importance spiritual thought peaceful living says prof shivaram Agnihotri rav

ಜ್ಞಾನಧಾರೆಗಾಗಿ   ತತ್ತ್ವಧಾರಾ ಪ್ರವಚನಮಾಲಿಕೆ

ಅಧ್ಯಾತ್ಮ ಚಿಂತನೆಯ ಹಣತೆಯನ್ನು ಹಚ್ಚಿದ, ಅದ್ವೈತ ವೇದಾoತದ ಮೂಲಕ ಧಾರ್ಮಿಕ ಇತಿಹಾಸವನ್ನು ಮಹೋನ್ನತವಾಗಿ ಬೆಳಗಿದ ಭಗವಾತ್ಪದ ಶ್ರೀಶಂಕರರ ಚರಿತ್ರೆ ಪಾವನವಾದದ್ದು, ಭೋದನೆ ತತ್ತ್ವಾಧಾರಿತವಾದದ್ದು, ಪ್ರತಿಪಾದನೆ ಅತ್ಯಮೂಲ್ಯವಾದದ್ದು, ಸಂದೇಶ ಅನುಕರಣೀಯವಾದದ್ದು. ಕೇವಲ ಮೂವತ್ತೆರಡು ವರ್ಷ ಮಾತ್ರ ಬದುಕಿದ ಆಚಾರ್ಯ ಶಂಕರರ ಬಗೆಗೆ ಇದುವರೆಗೂ ನೂರಾರು ಗ್ರoಥಗಳು, ಅನುವಾದಿತ ಕೃತಿಗಳು, ಸ್ತೋತ್ರಗ್ರoಥಗಳು ಮುದ್ರಣವಾಗಿದ್ದರು, ಮರುಪ್ರಕಟಣೆ ಮುಂದುವರಿಯುತ್ತಲೇ ಇದೆ. ಶಂಕರರು ಬಿತ್ತಿದ ಅಧ್ಯಾತ್ಮ ಚಿಂತನೆಯೂ ಇನ್ನೂ ಜೀವಂತ, ಸಂದೇಶ ಶಾಶ್ವತ, ತತ್ತ್ವ ಪ್ರತಿಪಾದನೆ ನಿರಂತರ. ಲೋಕ ಕಂಡ ಅಪ್ರತಿಮ ದಾರ್ಶನಿಕರಾದ ಶ್ರೀಶಂಕರಾಚಾರ್ಯರ ಸಜ್ಜೀವನ ಸದುಪದೇಶಗಳ ರಸಮಯ ಪ್ರತಿಪಾದನೆಯ ಜ್ಞಾನಸತ್ರವೇ ತತ್ತ್ವಧಾರಾ ಪ್ರವಚನಮಾಲಿಕೆ. 

ಇದನ್ನೂ ಓದಿ: ದೇವರ ಹೆಸರಿನಲ್ಲಿ ಹಣ ಕೇಳಿದರೆ ಏನು ಮಾಡಬೇಕು? ಇಲ್ಲಿದೆ ಬಾಬಾ ಉತ್ತರ!

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧಕೇಂದ್ರವು ಈ ಪ್ರವಚನಮಾಲಿಕೆಯ ಕಾರ್ಯಕ್ರಮ ಆಯೋಜಿಸುತ್ತಿದ್ದು, ವಿದ್ವಾoಸರಾದ ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿಗಳ ಪ್ರಥಮ ಪ್ರವಚನದ ಮೂಲಕ ಜ್ಞಾನಧಾರೆಯ ತತ್ತ್ವಧಾರೆಗೆ ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಚಾಲನೆ ದೊರಕಿತು.

ನಾಲ್ಕು ವೇದಗಳ ರಕ್ಷಣೆಗಾಗಿ, ಅದ್ವೈತ ವೇದಾoತದ ಪ್ರಸಾರಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಜನಮಾನಸದಲ್ಲಿ 
ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸಿದ ಭಗವತ್ಪಾದ  ಶ್ರೀಶಂಕರರ ಬಗ್ಗೆ ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿಗಳು ಪ್ರವಚನವನ್ನಿತ್ತರು. ಸದ್ವಿಚಾರಗಳ ಸುಪ್ರಸಾರ ಸಾರ್ವಕಾಲಿಕ ಸತ್ಕಾರ್ಯ.  ಅವುಗಳ ಪಾಲನೆ, ಪ್ರಸರಣಗಳಿಂದಲೇ ಸಂಸ್ಕೃತಿಯ ಸೌರಭ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ‌ದ ಶೋಧ ಕೇಂದ್ರವು ಪ್ರವಚನಗಳ ಮೂಲಕ ಸದ್ವಿಚಾರಗಳನ್ನು ಸಮಾಜಕ್ಕೆ ನೀಡಲು ಪ್ರಾರಭಿಸಿದ್ದು ನಾಡಿನ ಖ್ಯಾತ ವಾಗ್ಮಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿದ್ವಾನ್ ಉಮಾಕಾಂತ ಭಟ್ಟ, ಡಾ| ಕೆ. ಎಸ್. ಕಣ್ಣನ್, ಡಾ| ಪಾದೇಕಲ್ಲು ವಿಷ್ಣು ಭಟ್ಟ, ಡಾ| ವಿನಾಯಕ ಭಟ್ಟ ಗಾಳಿಮನೆ, ವಿದ್ವಾನ್ ಕೇಶವಭಟ್ ಕೇಕಣಾಜೆ, ಶ್ರೀ ರೋಹಿತ್ ಚಕ್ರತೀರ್ಥ ಇವರು ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಹಾಗೂ ಮೂರನೇ ಭಾನುವಾರ ಶ್ರೀಭಾರತೀ ವಿದ್ಯಾಲಯ ನಂತೂರು, ಮಂಗಳೂರಿನಲ್ಲಿ ನಡೆಯುವ ತತ್ತ್ವಧಾರಾ ಪ್ರವಚನಮಾಲಿಕೆ ಮುoಬರುವ ಕಾರ್ಯಕ್ರಮದ ಒಂದೊಂದು ಪ್ರವಚನ ನಡೆಸಿಕೊಡಲಿದ್ದಾರೆ.

Latest Videos
Follow Us:
Download App:
  • android
  • ios